More

    ಬೆಳೆನಷ್ಟದ ಪರಿಹಾರಕ್ಕೆ ಪ್ರಯತ್ನ

    ಯಾದಗಿರಿ: ನೆರೆಯ ಮಹಾರಾಷ್ಟ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿರುವ ಕಾರಣ ಜಿಲ್ಲೆಯ ನದಿಪಾತ್ರದ ಜನತೆ ಎಚ್ಚರಿಕೆಯಿಂದ ಇರುವಂತೆ ಬಿಜೆಪಿ ಮುಖಂಡ ಚಂದ್ರಶೇಖರಗೌಡ ಮಾಗನೂರ ಸಲಹೆ ನೀಡಿದ್ದಾರೆ.

    ಯಾದಗಿರಿ ಮತಕ್ಷೇತ್ರದ ಕೊಳ್ಳೂರು (ಎಂ) ಸೇತುವೆಗೆ ಭೇಟಿ ನೀಡಿ, ಸ್ಥಳೀಯರೊಂದಿಗೆ ಚಚರ್ೆ ನಡೆಸಿದ ಅವರು, ನೆರೆ ಹಾವಳಿಯಲ್ಲಿ ಈ ಹಿಂದೆ ಸೂಕ್ತ ಪರಿಹಾರ ನೀಡುವಲ್ಲಿ ವಿಳಂಬವಾಗಿದ್ದು, ಈ ಬಾರಿ ಸಕರ್ಾರ ಸಂತ್ರಸ್ತರ ನೆರವಿಗೆ ನಿಂತಿದೆ. ಹೀಗಾಗಿ ಯಾರೂ ಭಯ ಪಡಬೇಕಿಲ್ಲ. ಪ್ರತಿಯೊಬ್ಬರೂ ತಮ್ಮ ಜಾನುವಾರಗಳನ್ನು ಜಾಗೃತಿಯಿಂದ ರಕ್ಷಣೆ ಮಾಡಬೇಕು. ಬೆಳೆನಷ್ಟ ಉಂಟಾದಲ್ಲಿ ಸಕರ್ಾರದ ಗಮನಕ್ಕೆ ತಂದು ಸೂಕ್ತ ಪರಿಹಾರ ಒದಗಿಸುವಲ್ಲಿ ಪ್ರಯತ್ನ ಮಾಡಲಾಗುವುದು ಎಂದರು.

    ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ಪಂಪ್ಸೆಟ್ ತೆಗೆಯಲು ರೈತರು ನದಿಗಿಳಿಯಕೂಡದು. ನದಿ ನೀರಿನಿಂದ ಹಾನಿ ಸಂಭವಿಸಿರುವುದರ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದು ಪರಿಹಾರಕ್ಕೆ ಪ್ರಯತ್ನಿಸಲಾಗುವುದು ಎಂದರು.

    ಅಲ್ಲದೆ ಜಿಲ್ಲೆಯಲ್ಲಿ ಯೂರಿಯಾ ರಸಗೊಬ್ಬರ ಅಭಾವವಾಗಿರುವ ಬಗ್ಗೆ ಸಚಿವ ಪ್ರಭು ಚವ್ಹಾಣ್ ಅವರ ಗಮನಕ್ಕೆ ಬಂದಿದ್ದು, ಈಗಾಗಲೇ 3 ಸಾವಿರ ಟನ್ ರಸಗೊಬ್ಬರ ಪೂರೈಕೆಗೆ ಕ್ರಮ ಕೈಗೊಂಡಿದ್ದಾರೆ ಎಂದರು. ಮಲ್ಲಯ್ಯ, ವೆಂಕಟೇಶ, ದೇವಪ್ಪ, ಮಲ್ಲಿಕಾಜರ್ುನ, ನಾಗಪ್ಪ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts