More

    ಕೊಲ್ಲೂರಲ್ಲಿ ಸಾಮೂಹಿಕ ಅಕ್ಷರಾಭ್ಯಾಸ

    ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ಪ್ರಾಂಗಣದಲ್ಲಿ ಪುಟಾಣಿಗಳಿಗೆ ಭಾನುವಾರ ಮುಂಜಾನೆ 4ರಿಂದ ಸಾಮೂಹಿಕ ಅಕ್ಷರಾಭ್ಯಾಸಕ್ಕೆ ಚಾಲನೆ ನೀಡಲಾಯಿತು. ಲಕ್ಷ್ಮೀ,ಸರಸ್ವತಿ ಹಾಗೂ ಪಾರ್ವತಿ ಐಕ್ಯವಾಗಿ ನೆಲೆನಿಂತ ಕೊಲ್ಲೂರು ಕ್ಷೇತ್ರದಲ್ಲಿ ವಿದ್ಯಾರಂಭ ಮಾಡಿದರೆ ಮಕ್ಕಳು ಭವಿಷ್ಯದಲ್ಲಿ ಉತ್ತಮ ವಿದ್ಯೆ ಕಲಿತು ಸತ್ಪ್ರಜೆಗಳಾಗುತ್ತಾರೆ ಎಂಬ ನಂಬಿಕೆ ಭಕ್ತರದ್ದು. ಪಾಲಕರು ತಮ್ಮ ಮಕ್ಕಳ ಕೈಹಿಡಿದು ಅಕ್ಕಿಯಲ್ಲಿ ಓಂಕಾರರಿಂದ ಪ್ರಾರಂಭಿಸಿ ವರ್ಣಮಾಲೆ ಬರೆಸುತ್ತಾರೆ.ನಂತರ ಅರ್ಚಕರು ಮಕ್ಕಳ ನಾಲಗೆ ಮೇಲೆ ಚಿನ್ನದ ಉಂಗುರದಿಂದ ಓಂಕಾರ ಬರೆಯುತ್ತಾರೆ. ಬಳಿಕ ಮಕ್ಕಳು ಸರಸ್ವತಿ ಮಂಟಪದಲ್ಲಿ ಸರಸ್ವತಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ.

    ಆದರೆ ಈ ಬಾರಿ ಕೋವಿಡ್-9 ಮಹಾಮಾರಿ ಸಮಸ್ಯೆಯಿಂದ ಹೊರರಾಜ್ಯದ ಭಕ್ತರ ಸಂಖ್ಯೆ ಬೆರಳೆಣಿಕೆಗೆ ಮಾತ್ರ ಸೀಮಿತವಾಗಿತ್ತು.ಸರ್ಕಾರದ ಆದೇಶದಂತೆ ದೇವಳದ ಆಡಳಿತಾಧಿಕಾರಿ ಕೆ.ರಾಜು,ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಹಾಗೂ ಅರ್ಚಕ ವೃಂದ ಈ ಕಾರ್ಯಕ್ಕೆ ವ್ಯವಸ್ಥೆ ಮಾಡಿದ್ದರು.

    ಶರನ್ನವರಾತ್ರಿ ಉತ್ಸವ ಪ್ರಯುಕ್ತ ದೇವಳದ ಸ್ವರ್ಣಮುಖಿ ವೇದಿಕೆಯಲ್ಲಿ ಹತ್ತು ದಿನಗಳ ಪರ್ಯಂತ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು ಕೋವಿಡ್ ಹಿನ್ನೆಲೆಯಲ್ಲಿ ಈ ವರ್ಷ ಆಯೋಜಿಸಲಾಗಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts