ಕೊಲ್ಕತ: ದೇಶದ ಇತಿಹಾಸದಲ್ಲೇ ಪ್ರಪಥಮ ಬಾರಿಗೆ ಹೌರ ನದಿಯ ಒಳಗಿನ ಸುರಂಗದ ಮೂಲಕ ಮೆಟ್ರೋ ಟ್ರೈನ್ ಸಾಗುವ ಮೂಲಕ ಹೊಸ ಇತಿಹಾಸವನ್ನು ನಿರ್ಮಿಸಿದೆ ಎಂದು ಕೊಲ್ಕತ ಮೆಟ್ರೋ(MTP)ಯ ಹಿರಿಯ ಅಧಿಕಾರಿ ಒಬ್ಬರು ತಿಳಿಸಿದ್ದಾರೆ.
ಹೂಗ್ಲಿ ಇಂದ ಕೊಲ್ಕತವರೆಗೆ ನಡೆದ ಪರೀಕ್ಷಾರ್ಥ ಸಂಚಾರದಲ್ಲಿ ಅಧಿಕಾರಿಗಳು, ಇಂಜಿನಿಯರ್ಗಳು ಹಾಗೂ ಸಂಸ್ಥೆಯ ಕೆಲವರು ಇದ್ದರು ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಕಾನ್‌ಸ್ಟೆಬಲ್ ಮೇಲೆ ಹಲ್ಲೆ; ಬೈಕ್ ಸವಾರನ ಸೆರೆ
ಐತಿಹಾಸಿಕ ನಡೆ
ಕೊಲ್ಕತ ಮತ್ತು ಆಸು ಪಾಸು ನಗರದ ಜನತೆಗೆ ಈ ರೀತಿಯ ಸೇವೆ ಒದಗಿಸುತ್ತಿರುವುದು ಐತಿಹಾಸಿಕ ನಡೆ ಎಂಧು ಅಧಿಕಾರಿಗಳು ಬಣ್ಣಿಸಿದ್ದು ಶೀಘ್ರವೇ ಸಾರ್ವಜನಿಕರ ಸೇವೆಗೆ ಮುಕ್ತವಾಗಿಸುವುದಾಗಿ ತಿಳಿಸಿದ್ದಾರೆ.
ಮೆಟ್ರೋ ರೈಲ್ವೆ ಜನರಲ್ ಮ್ಯಾನೇಜರ್ ಉದಯ್ ಕುಮಾರ್ ರೆಡ್ಡಿ ಸೇರಿದಂತೆ ಸಂಸ್ಥೆಯ ಹಿರಿಯ ಅಧಿಕಾರಿಗಳು ಕೊಲ್ಕತಾದ ಮಹಾಕರಣ್ ನಿಲ್ದಾಣದಿಂದ ಹೌರಾ ಮೈದಾನ್ ವರೆಗೆ ಪರೀಕ್ಷಾರ್ಥ ಸಂಚಾರ ನಡೆಸಿದ್ದರು.