More

    ಪಿಂಜಾರ ಜನಾಂಗಕ್ಕೆ ಪ್ರತ್ಯೇಕ ನಿಗಮ ಮಂಡಳಿ ನೇಮಿಸಿ

    ಕೊಲ್ಹಾರ: ನದಾಫ್ ಪಿಂಜಾರ ಜನಾಂಗಕ್ಕೆ ಪ್ರತ್ಯೇಕ ನಿಗಮ ಮಂಡಳಿ ನೇಮಕ ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ನದಾಫ್ ಪಿಂಜಾರ ಸಂಘದ ವತಿಯಿಂದ ತಹಸೀಲ್ದಾರ್ ಎಂ.ಎ.ಎಸ್. ಬಾಗವಾನ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

    ಸಂಘದ ಅಧ್ಯಕ್ಷ ಇಸ್ಮಾಯಿಲ್ ನದಾಫ್ ಮಾತನಾಡಿ, ನದಾಫ್ ಪಿಂಜಾರ ಜನಾಂಗ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದಿದ್ದು, ಪ್ರಮುಖವಾಗಿ ಗಾದಿ ನೇಯುವ ಮೂಲಕ ಉಪಜೀವನ ನಡೆಸುತ್ತಿದೆ. ಸಾಮಾಜಿಕ, ಆರ್ಥಿಕ ಭದ್ರತೆ ಇಲ್ಲದೆ ಮುಸ್ಲಿಂ ಜನಾಂಗದಲ್ಲಿಯೇ ಅತ್ಯಂತ ನಿಕೃಷ್ಟ ಸ್ಥಿತಿಯಲ್ಲಿ ಬಾಳುವಂತಾಗಿದೆ. ಸರ್ಕಾರ ಕೂಡಲೇ ನಮ್ಮ ಜನಾಂಗದ ಬಹುದಿನ ಬೇಡಿಕೆಯಾದ ನಿಗಮ ಮಂಡಳಿ ರಚಿಸುವ ಮೂಲಕ ನಮ್ಮ ಬಹುದಿನ ಕನಸ್ಸನ್ನು ನನಸು ಮಾಡಬೇಕೆಂದು ಮನವಿ ಮಾಡಿದರು.

    ಸಂಘದ ಕಾರ್ಯದರ್ಶಿ ಮಶಾಕ್ ಬಳಗಾರ ಮಾತನಾಡಿದರು. ಮಲೀಕಸಾಬ ನದಾಫ್, ಅಲ್ಲಿಸಾಬ ನದಾಫ್, ಗೈಬುಸಾನ ನದಾಫ್, ಮಹಿಬೂಬ್‌ಸಾಬ ನದಾಫ್, ರಾಜೇಸಾಬ ನದಾಫ್, ಹಾಜಿಸಾಬ ಉಪ್ಪಲದಿನ್ನಿ, ಸಿದ್ದೀಕ್ ನದಾಫ್, ಮುಸದ್ದೀಕ್ ಬಳಗಾರ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts