More

    ಸರ್ಕಾರಿ ಜಾಗ ಒತ್ತುವರಿ ತಡೆಯಿರಿ

    ಕೊಲ್ಹಾರ: ಸ್ಥಳೀಯ ತಾಲೂಕು ಆಡಳಿತದ ತಹಸೀಲ್ದಾರ್ ಕಚೇರಿಗೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಮಂಗಳವಾರ ಭೇಟಿ ನೀಡಿ ಸಾರ್ವಜನಿಕರ ಕುಂದು-ಕೊರತೆ ಆಲಿಸಿದರು.ತಾಲೂಕು ವ್ಯಾಪ್ತಿಯ ಹಳ್ಳಿಗಳ ನಾಗರಿಕರು ಹೇಳಿದ ಹಲವು ಸಮಸ್ಯೆಗಳ ಪೈಕಿ ಕೆಲವನ್ನು ಸ್ಥಳದಲ್ಲಿಯೇ ದೂರವಾಣಿ ಮೂಲಕ ಚರ್ಚಿಸಿ ಪರಿಹಾರ ಕಲ್ಪಿಸಿದರು.

    ಕೊಲ್ಹಾರ ತಾಲೂಕು ರಚನಾ ಹೋರಾಟ ಸಮಿತಿ ಅಧ್ಯಕ್ಷ ಈರಣಗೌಡ ಕೋಮಾರ ಮಾತನಾಡಿ, ಪಟ್ಟಣದಲ್ಲಿ ತಾಲೂಕು ಆಡಳಿತದ ಎಲ್ಲ ಕಚೇರಿಗಳನ್ನು ಆರಂಭಿಸಬೇಕು. ಕೊಲ್ಹಾರ ಪುನರ್ವಸತಿ ಕೇಂದ್ರಕ್ಕಾಗಿ ವಶಪಡಿಸಿಕೊಂಡ ಭೂಮಿಯ ಸಮಗ್ರ ಸಮೀಕ್ಷೆ ವರದಿ ಪಡೆದು ಸರ್ಕಾರಿ ಜಾಗವನ್ನು ಖಾಸಗಿ ವ್ಯಕ್ತಿಗಳು ಬಳಸಿಕೊಳ್ಳುತ್ತಿರುವುದನ್ನು ತಪ್ಪಿಸಲು ಸರ್ಕಾರ ವಶಪಡಿಸಿಕೊಳ್ಳಬೇಕು. ಮೂಲ ನೀಲಿನಕ್ಷೆಯ ಪ್ರಕಾರ ನಗರ ಯೋಜನಾ ಪ್ರಾಧಿಕಾರದವರು ಸಿದ್ಧಪಡಿಸಿಕೊಟ್ಟ ನಕ್ಷೆ ಆಧರಿಸಿ ಸರ್ಕಾರಿ ಜಾಗದಲ್ಲಿ ಸರ್ಕಾರಿ ಕಟ್ಟಡಗಳನ್ನು ನಿರ್ಮಿಸಬೇಕು ಎಂದು ಮನವಿ ಮಾಡಿದರು.

    ಸಾರ್ವಜನಿಕರು ಮಾತನಾಡಿ, ಪಟ್ಟಣದಲ್ಲಿ ಒಳಚರಂಡಿ ಕಾಮಗಾರಿ ಅಸಮರ್ಪಕವಾಗಿದೆ. ತಾಲೂಕು ಆಡಳಿತ ಕಚೇರಿಯಲ್ಲಿ ಸಿಬ್ಬಂದಿ ಕೊರತೆ ಇದ್ದು ಅಧಿಕಾರಿಗಳು ಸರಿಯಾದ ಸಮಯಕ್ಕೆ ಬರುವುದಿಲ್ಲ. ಎಪಿಎಂಸಿ ಮತ್ತು ರೈತ ಭವನ ನಿರ್ಮಿಸಬೇಕು. ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದೆ ಜನಪ್ರತಿನಿಧಿಗಳ ಮಾತನ್ನೇ ಕೇಳುತ್ತಾರೆ. ಜಲ್ಲಿಕಲ್ಲು ಕ್ರಷ್‌ರ್‌ಗಳ ಖಣಿಯಲ್ಲಿ ಸ್ಫೋಟ ಮಾಡುವುದರಿಂದ ಮನೆಗಳಿಗೆ ಹಾನಿಯಾಗುತ್ತಿದ್ದು, ಈ ಕುರಿತು ಹಲವು ಬಾರಿ ದೂರು ಸಲ್ಲಿಸಿದರೂ ಇಲಾಖೆಯವರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಹೇಳಿದರು.

    ಹಣಮಾಪುರ ಗ್ರಾಮಸ್ಥರು ಹಾಗೂ ಗರಸಂಗಿ ಪುನರ್ವಸತಿ ಕೇಂದ್ರ ನಿರ್ಮಿಸಿ 12 ವರ್ಷವಾದರೂ ಇದುವರೆಗೂ ಜಾಗದ ಹಕ್ಕುಪತ್ರಗಳು ವಿತರಣೆಯಾಗುತ್ತಿಲ್ಲ ಎನ್ನುವ ಕುರಿತು ತಾಲೂಕು ವ್ಯಾಪ್ತಿಯ ಹಳ್ಳಿಗಳಿಂದ ಮತ್ತು ಪಟ್ಟಣದ ನಾಗರಿಕರಿಂದ ಹಲವು ದೂರುಗಳು ಜಿಲ್ಲಾಧಿಕಾರಿಗೆ ಸಲ್ಲಿಕೆಯಾದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts