More

    ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ನೀಡದ ಮುಳಬಾಗಿಲು ತಹಸೀಲ್ದಾರ್​ಗೆ 25 ಸಾವಿರ ರೂ. ದಂಡ!

    ಕೋಲಾರ: ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿದಾರರು ಕೋರಿದ್ದ ಮಾಹಿತಿ ನೀಡಲು ವಿಫಲವಾದ ಹಿನ್ನಲೆಯಲ್ಲಿ ಮುಳಬಾಗಿಲು ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ತಹಸೀಲ್ದಾರ್ ಶೋಭಿತಾರಿಗೆ 25 ಸಾವಿರ ರೂ. ದಂಡ ವಿಧಿಸಿ ಮಾಹಿತಿ ಆಯೋಗ ಆದೇಶ ಹೊರಡಿಸಿದೆ.

    ಮುಳಬಾಗಿಲು ಕಸಬಾ ಹೋಬಳಿಯ ಜಮೀನು ಖಾತೆಯ ವಹಿವಾಟಿಗೆ ಸಂಬಂಧಿಸಿದ ಮಾಹಿತಿ ನೀಡದ ಹಿನ್ನಲೆಯಲ್ಲಿ ದಂಡ ವಿಧಿಸಲಾಗಿದೆ. ಪಾಂಡುರಂಗಯ್ಯ ಎಂಬುವರು ಸೆಕ್ಷನ್ 6(1) ಅಡಿ ಆರ್‌ಟಿಐ ಅರ್ಜಿ ಸಲ್ಲಿಸಿದ್ದರು. ಆದರೆ ಮಾಹಿತಿ ನೀಡಲು ತಹಸೀಲ್ದಾರ್ ಶೋಭಿತಾ ವಿಫಲರಾಗಿದ್ದರು. ಇದಾದ ಬಳಿಕ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಿದರೂ ಮಾಹಿತಿ ದೊರೆತಿರಲಿಲ್ಲ. ಈ ವಿಷಯವನ್ನು ಅರ್ಜಿದಾರರು ಮಾಹಿತಿ ಆಯೋಗದ ಗಮನಕ್ಕೆ ತಂದಿದ್ದರು.

    ಮಾಹಿತಿ ಆಯೋಗದ ವಿಚಾರಣೆ ವೇಳೆ ತಹಸೀಲ್ದಾರರು ಸತತ ಗೈರು ಹಾಜರಾಗಿ ನೋಟಿಸ್​ಗೂ ಉತ್ತರಿಸದೆ ಆಯೋಗದ ಬಗ್ಗೆ ಅಸಡ್ಡೆ ತೋರಿದ್ದಲ್ಲದೆ, ಮಾಹಿತಿ ನೀಡದೆ ಉದ್ಧಟತನ ತೋರಿದ ತಹಸೀಲ್ದಾರ್‌ರಿಗೆ 25,000 ದಂಡ ವಿಧಿಸಲಾಗಿದೆ. ದಂಡ ವಸೂಲಿ ಮಾಡುವಂತೆ ಕೋಲಾರ ಉಪ ವಿಭಾಗಾಧಿಕಾರಿ ವೆಂಕಟಲಕ್ಷ್ಮಿ ಅವರಿಗೆ ಆಯೋಗ ನಿರ್ದೇಶನ ನೀಡಿದೆ. (ದಿಗ್ವಿಜಯ ನ್ಯೂಸ್​)

    ವಿಜಯವಾಣಿ ಅಚ್ಚಗನ್ನಡ ಅಭಿಯಾನ: ಬನ್ನಿ ಭಾಗವಹಿಸಿ ಬಹುಮಾನ ಗೆಲ್ಲಿ

    ಈ ಫೋಟೋದಲ್ಲಿರುವ ಚಿರತೆ ಪತ್ತೆಹಚ್ಚುವಲ್ಲಿ ಶೇ. 90 ಮಂದಿ ವಿಫಲ! ಸಾಧ್ಯವಾದರೆ ನೀವು ಪತ್ತೆ ಹಚ್ಚುವಿರಾ?

    ಜಗತ್ತಿನಲ್ಲಿ ಎಲ್ಲಿಯೂ ಬಿಟ್ಟಿ ಊಟ ಸಿಗುವುದಿಲ್ಲ! ಎಲಾನ್​ ಮಸ್ಕ್​ ನಿರ್ಧಾರ ಬೆಂಬಲಿಸಿದ ಕಂಗನಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts