ಜಗತ್ತಿನಲ್ಲಿ ಎಲ್ಲಿಯೂ ಬಿಟ್ಟಿ ಊಟ ಸಿಗುವುದಿಲ್ಲ! ಎಲಾನ್​ ಮಸ್ಕ್​ ನಿರ್ಧಾರ ಬೆಂಬಲಿಸಿದ ಕಂಗನಾ

ಮುಂಬೈ: ಟ್ವಿಟರ್​ನಲ್ಲಿ ಬ್ಲ್ಯೂ ಟಿಕ್​ ಪಡೆಯಲು ತಿಂಗಳಿಗೆ 8 ಡಾಲರ್​ ನಿಗದಿ ಮಾಡಿರುವ ವಿಶ್ವದ ನಂ.1 ಶ್ರೀಮಂತ ಎಲಾನ್​ ಮಸ್ಕ್ ನಿರ್ಧಾರವನ್ನು ಬಾಲಿವುಡ್​ ನಟಿ ಕಂಗನಾ ರಣಾವತ್​ ಅವರು ಬೆಂಬಲಿಸಿದ್ದಾರೆ. ​ ನಿಮ್ಮ ಟ್ವಿಟರ್​ ಖಾತೆಗಳಿಗೆ ವೆರಿಫೈ ಬ್ಯಾಡ್ಜ್​ ಪಡೆಯಲು ಒಂದಿಷ್ಟು ಮೊತ್ತ ಪಾವತಿಸುವುದರಲ್ಲಿ ತಪ್ಪೇನಿಲ್ಲ ಎಂದು ಕಂಗನಾ ಹೇಳಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿರುವ ಕಂಗನಾ, ಎಲಾನ್​ ಮಸ್ಕ್ ತನ್ನ ಮೈಕ್ರೋ-ಬ್ಲಾಗಿಂಗ್ ಸೈಟ್‌ನಲ್ಲಿ ಭಾರತೀಯ ಬಳಕೆದಾರರ ಖಾತೆಗಳನ್ನು ಪರಿಶೀಲಿಸಲು ಆಧಾರ್ ಕಾರ್ಡ್ ಅನ್ನು ಪರಿಗಣಿಸಬಹುದು ಎಂದು ತಿಳಿಸಿದ್ದಾರೆ. … Continue reading ಜಗತ್ತಿನಲ್ಲಿ ಎಲ್ಲಿಯೂ ಬಿಟ್ಟಿ ಊಟ ಸಿಗುವುದಿಲ್ಲ! ಎಲಾನ್​ ಮಸ್ಕ್​ ನಿರ್ಧಾರ ಬೆಂಬಲಿಸಿದ ಕಂಗನಾ