More

    ವಿರಾಟ್ ಕೊಹ್ಲಿ ಬ್ಯಾಟಿಂಗ್ ಯಶಸ್ಸಿನ ಗುಟ್ಟು ಬಿಚ್ಚಿಟ್ಟ ಗಂಭೀರ್

    ಮುಂಬೈ: ಕ್ರಿಸ್ ಗೇಲ್ ಅವರ ಶಕ್ತಿಯಾಗಲಿ, ಎಬಿ ಡಿವಿಲಿಯರ್ಸ್‌ ಅವರ ಸಾಮರ್ಥ್ಯವಾಗಲಿ ಇಲ್ಲದಿದ್ದರೂ, ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್ ಬ್ಯಾಟಿಂಗ್‌ನಲ್ಲಿ ಅಪಾರ ಯಶಸ್ಸು ಕಂಡಿರುವುದಕ್ಕೆ ಕಾರಣವೇನೆಂದು ಅವರ ಮಾಜಿ ಸಹ-ಆಟಗಾರ ಹಾಗೂ ಟೀಮ್ ಇಂಡಿಯಾದ ಮಾಜಿ ಆರಂಭಿಕ ಗೌತಮ್ ಗಂಭೀರ್ ಗುರುತಿಸಿದ್ದಾರೆ. ಟೆಸ್ಟ್-ಏಕದಿನ ಕ್ರಿಕೆಟ್‌ನಲ್ಲಿ ಯಶಸ್ಸು ಕಂಡಿರುವ ಕೊಹ್ಲಿ ಟಿ20 ಕ್ರಿಕೆಟ್‌ನಲ್ಲೂ 82 ಪಂದ್ಯಗಳಲ್ಲಿ 50ಕ್ಕಿಂತ ಮೇಲಿನ ಸರಾಸರಿಯಲ್ಲಿ 2,794 ರನ್ ಬಾರಿಸಿದ್ದಾರೆ. ಕೊಹ್ಲಿ ಅವರ ಉನ್ನತ ಮಟ್ಟದ ಫಿಟ್ನೆಸ್ ಯಶಸ್ಸಿಗೆ ಕಾರಣ ಎಂದು ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.

    ವಿರಾಟ್ ಕೊಹ್ಲಿ ಬ್ಯಾಟಿಂಗ್ ಯಶಸ್ಸಿನ ಗುಟ್ಟು ಬಿಚ್ಚಿಟ್ಟ ಗಂಭೀರ್

    ಇದನ್ನೂ ಓದಿ: ಸತತ ವೈಫಲ್ಯದಿಂದ ಕಂಗೆಟ್ಟಿದ್ದೀರಾ? ಲಂಕಾ ಕ್ರಿಕೆಟಿಗ ಅಟಪಟ್ಟು ಯಶೋಗಾಥೆ ನಿಮಗೇಕೆ ಸ್ಫೂರ್ತಿಯಾಗಬಾರದು?

    ‘ಕೊಹ್ಲಿ ಯಾವಾಗಲೂ ಅತ್ಯಂತ ಸ್ಮಾರ್ಟ್ ಕ್ರಿಕೆಟರ್. ಉತ್ಕೃಷ್ಟ ಮಟ್ಟದ ಫಿಟ್ನೆಸ್‌ನಿಂದಾಗಿ ಅವರು ಟಿ20 ಕ್ರಿಕೆಟ್ ಜೀವನದಲ್ಲೂ ಯಶಸ್ಸು ಕಂಡಿದ್ದಾರೆ. ಗೇಲ್ ಅವರ ಶಕ್ತಿ, ಎಬಿಡಿ ಅವರ ಸಾಮರ್ಥ್ಯ ಮಾತ್ರವಲ್ಲ, ಜಾಕ್ಸ್ ಕಾಲಿಸ್ ಅಥವಾ ಬ್ರಿಯಾನ್ ಲಾರಾ ಅವರಂಥ ಸಾಮರ್ಥ್ಯವೂ ಕೊಹ್ಲಿ ಅವರಿಗಿಲ್ಲ. ಆದರೆ ಫಿಟ್ನೆಸ್ ಅವರ ಅತಿದೊಡ್ಡ ಶಕ್ತಿಯಾಗಿದೆ. ಅದನ್ನೇ ಬಳಸಿಕೊಂಡು ಅವರು ಯಶಸ್ಸು ಸಂಪಾದಿಸಿದ್ದಾರೆ’ ಎಂದು ಗಂಭೀರ್ ಖಾಸಗಿ ಚಾನಲ್‌ಗೆ ತಿಳಿಸಿದ್ದಾರೆ.

    ‘ಕೊಹ್ಲಿ ವಿಕೆಟ್ ನಡುವಿನ ಓಟವನ್ನು ಅತ್ಯುತ್ತಮವಾಗಿ ಓಡುತ್ತಾರೆ. ಹೆಚ್ಚಿನ ಬ್ಯಾಟ್ಸ್‌ಮನ್‌ಗಳಿಗೆ ಇದು ಸಾಧ್ಯವಾಗುವುದಿಲ್ಲ. ಜಾಗತಿಕ ಕ್ರಿಕೆಟ್‌ನಲ್ಲಿ ಪ್ರತಿ ಎಸೆತದಲ್ಲೂ ಸ್ಟ್ರೈಕ್ ರೊಟೇಟ್ ಮಾಡಬಲ್ಲ ಕೆಲವೇ ಕೆಲವು ಕ್ರಿಕೆಟಿಗರಿದ್ದಾರೆ. ಕೊಹ್ಲಿ ಇದನ್ನು ಅತ್ಯುತ್ತಮವಾಗಿ ನಿರ್ವಹಿಸುತ್ತಾರೆ. ಇದರಿಂದಾಗಿಯೇ ಅವರು ಇತರೆಲ್ಲರಿಗಿಂತ ಭಿನ್ನವಾಗಿ ನಿಲ್ಲುತ್ತಾರೆ’ ಎಂದು ಗಂಭೀರ್ ವಿವರಿಸಿದ್ದಾರೆ. ಐಪಿಎಲ್‌ನಲ್ಲೂ ಉತ್ತಮ ಯಶ ಕಂಡಿರುವ ಕೊಹ್ಲಿ, 177 ಪಂದ್ಯಗಳಲ್ಲಿ 5,412 ರನ್ ಸಿಡಿಸಿದ್ದಾರೆ.

    ಇದನ್ನೂ ಓದಿ: ಪತ್ನಿ ಬಾರದಿದ್ದರೆ ಇಂಗ್ಲೆಂಡ್ ಪ್ರವಾಸಕ್ಕೆ ಹೋಗಲ್ಲ ಎಂದಿದ್ದೇಕೆ ಪಾಕ್ ಕ್ರಿಕೆಟಿಗ?

    ರೋಹಿತ್‌ಗಿಂತ ಸ್ಥಿರ ನಿರ್ವಹಣೆ ತೋರುತ್ತಾರೆ

    ವಿರಾಟ್ ಕೊಹ್ಲಿ ಬ್ಯಾಟಿಂಗ್ ಯಶಸ್ಸಿನ ಗುಟ್ಟು ಬಿಚ್ಚಿಟ್ಟ ಗಂಭೀರ್

    ಸಹ-ಆಟಗಾರ ಹಾಗೂ ಮತ್ತೋರ್ವ ಸ್ಟಾರ್ ಬ್ಯಾಟ್ಸ್‌ಮನ್ ರೋಹಿತ್ ಶರ್ಮ ಅವರಿಗಿಂತ ಸ್ಥಿರ ನಿರ್ವಹಣೆ ತೋರುವ ಕೊಹ್ಲಿ, ಸ್ಟ್ರೈಕ್ ರೊಟೇಟ್ ವಿಷಯದಲ್ಲೂ ರೋಹಿತ್‌ರನ್ನು ಮೀರಿಸುತ್ತಾರೆ ಎಂದು 2007ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್ ವಿಜೇತ ಗಂಭೀರ್ ಹೇಳಿದ್ದಾರೆ. ರೋಹಿತ್ ಶರ್ಮ ದೊಡ್ಡ ಹೊಡೆತಗಳನ್ನು ಬಾರಿಸುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ ಸ್ಟ್ರೈಕ್ ರೊಟೇಷನ್ ವಿಷಯಕ್ಕೆ ಬಂದಾಗ ಕೊಹ್ಲಿ ಅವರಷ್ಟು ಸ್ಥಿರ ನಿರ್ವಹಣೆ ತೋರುವುದಿಲ್ಲ. ಕ್ರಿಸ್ ಗೇಲ್ ಮತ್ತು ಎಬಿಡಿ ಕೂಡ ಕೊಹ್ಲಿ ಅವರಂತೆ ಸ್ಟ್ರೈಕ್ ರೊಟೇಟ್ ಮಾಡುವುದಿಲ್ಲ. ಅದರಲ್ಲೂ ವಿಶೇಷವಾಗಿ ಸ್ಪಿನ್ ಬೌಲಿಂಗ್ ವಿರುದ್ಧ. ಹೀಗಾಗಿಯೇ ಕೊಹ್ಲಿ 50ಕ್ಕಿಂತ ಹೆಚ್ಚಿನ ಸರಾಸರಿ ಹೊಂದಿದ್ದಾರೆ ಎಂದು 38 ವರ್ಷದ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.

    ಲಾಕ್‌ಡೌನ್ ನಡುವೆಯೂ ವಿವಾಹಕ್ಕೆ ಸಜ್ಜಾದ ಕ್ರೀಡಾತಾರೆಯರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts