More

    ರಜತ ಸಂಭ್ರಮದಲ್ಲಿ ದೇವಿ ಪುರಾಣ

    ಕೊಡೇಕಲ್: ನವರಾತ್ರಿ ನಿಮಿತ್ತ ಗ್ರಾಮದ ದ್ಯಾಮಮ್ಮ ದೇವಸ್ಥಾನದಲ್ಲಿ ಆಯೋಜಿಸಿರುವ ದೇವಿ ಪುರಾಣಕ್ಕೀಗ ರಜತ ಸಂಭ್ರಮ. ಪ್ರತಿ ವರ್ಷ ನವರಾತ್ರಿಯಲ್ಲಿ ೯ ದಿನ ನಡೆಯುವ ಪುರಾಣ ೨೪ನೇ ವಸಂತ ಪೊರೈಸಿ ೨೫ನೇ ವರ್ಷಕ್ಕೆ ಕಾಲಿರಿಸಿದೆ.

    ೧೯೯೯ರ ನವರಾತ್ರಿಯಲ್ಲಿ ಮೊದಲ ಬಾರಿಗೆ ಆರಂಭಗೊಂಡ ದೇವಿ ಪುರಾಣ ಈವರೆಗೆ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ಗ್ರಾಮದ ರಾಜ ಮನೆತನದವರಾದ ರಾಜಾ ಜಿತೇಂದ್ರನಾಯಕ ಜಹಾಗೀರದಾರ್, ರಾಜಾ ವೆಂಕಟಪ್ಪನಾಯಕ ಜಹಾಗೀರದಾರ್ ಮತ್ತು ಮಾಜಿ ಸಚಿವ ನರಸಿಂಹ ನಾಯಕ ಅವರ ಸಹಕಾರ ಮತ್ತು ಗ್ರಾಮದೇವತೆ ಸಮಿತಿಯವರ ನಿಸ್ವಾರ್ಥ ಸೇವೆಯಿಂದ ರಜತ ಸಂಭ್ರಮ ಆಚರಿಸಿಕೊಳ್ಳುತ್ತಿದೆ.

    ಆರಂಭದ ಮೊದಲ ವರ್ಷದಲ್ಲಿ ಕೇವಲ ಬೆರಳೆಣಿಕೆಯಷ್ಟು ಜನರು ಮಾತ್ರ ದೇವಿ ಪುರಾಣಕ್ಕೆ ಆಗಮಿಸುತ್ತಿದ್ದರು. ಕ್ರಮೇಣ ಬರುವ ಭಕ್ತರ ಸಂಖ್ಯೆ ಹೆಚ್ಚುತ್ತಾ ಸಾಗಿ ದೇವಸ್ಥಾನದ ಮುಂಭಾಗದ ಪ್ರಾಂಗಣದಲ್ಲಿ ಸ್ಥಳ ಸಾಕಾಗದೆ ಮನೆ ಎದುರಿನ ಕಟ್ಟೆಯಲ್ಲಿ ಕುಳಿದು ಪುರಾಣ ಆಲಿಸುತ್ತಿದ್ದಾರೆ.

    ಶ್ರೀ ವೃಷಭೇಂದ್ರ ಅಪ್ಪ ಮತ್ತು ಶ್ರೀ ಶಿವಕುಮಾರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಚಾಲನೆಗೊಂಡ ಈ ಪುರಾಣ ನಿತ್ಯ ಸಂಜೆ ೭-೩೦ರಿಂದ ೯ರವರೆಗೆ ಗದುಗಿನ ಶ್ರೀ ಪುಟ್ಟರಾಜ ಶಾಸ್ತಿç ಪಠಣ ಮಾಡುತ್ತಿದ್ದಾರೆ. ಗಾನಸುಧೆ ಹರಿಸುತ್ತಿರುವ ಸಂಗೀತ ಕಲಾವಿದರಾದ ದೇವರಾಜ ಮತ್ತು ನಾಗರಾಜ ಹೂಗಾರ ಸಹೋದರರು ಪುರಾಣಕ್ಕೆ ಇನ್ನಷ್ಟು ಮೆರಗು ನೀಡಿದ್ದಾರೆ.

    ನಿತ್ಯವು ಭಕ್ತರು ತಮ್ಮ ಸ್ವಇಚ್ಛೆಯಿಂದ ಪ್ರಸಾದ ವ್ಯವಸ್ಥೆ ಮಾಡಿಸುವ ಮೂಲಕ ದೇವಿಯ ಕೃಪೆಗೆ ಪಾತ್ರರಾಗುತ್ತಿದ್ದಾರೆ. ವಿದ್ಯುತ್ ದೀಪದಿಂದ ಅಲಂಕೃತಗೊAಡ ದೇವಸ್ಥಾನ ಝಗಮಗಿಸುತ್ತಿದೆ.ಅಲ್ಲದೆ ದೇವಿಗೆ ವಿಶೇಷ ಪೂಜೆ, ಅಲಂಕಾರ ಸಲ್ಲಿಸಲಾಗುತ್ತಿದೆ.


    ಎಲ್ಲರ ಸಹಕಾರ ಮತ್ತು ತನು, ಮನ, ಧನ ಸೇವೆಯಿಂದ ದೇವಿ ಪುರಾಣ ರಜತ ಸಂಭ್ರಮದಲ್ಲಿದೆ. ಗ್ರಾಮ ದೇವತೆಯ ಆಶೀರ್ವಾದಿಂದ ಪುರಾಣ ಕರ‍್ಯಕ್ರಮ ಅತ್ಯಂತ ಯಶಸ್ವಿಯಾಗಿ ಸಾಗುತ್ತಾ ಬರುತ್ತಿದೆ.
    | ರಾಜಾ ಜಿತೇಂದ್ರನಾಯಕ ಜಹಾಗೀರದಾರ್ ಅರಸು ಮನೆತನದವರು ಕೊಡೇಕಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts