More

    ಬಂಪರ್ ಬೆಲೆ ನಿರೀಕ್ಷೆಯಲ್ಲಿ ಬೆಳೆಗಾರರು

    ಕೊಡೇಕಲ್: ಈ ವರ್ಷ ಮಳೆ ಕೊರತೆ ಮಧ್ಯೆಯೂ ಚೆಂಡು ಹೂವಿನ ಇಳವರಿ ಉತ್ತಮವಾಗಿದೆ. ಇದರಿಂದ ಹೂ ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿದೆ.

    ದೀಪಾವಳಿ ಹಬ್ಬ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಚೆಂಡು ಹೂವಿಗೆ ಬಂಪರ್ ಬೆಲೆ ಸಿಗುವ ನಿರೀಕ್ಷೆಯಲ್ಲಿ ಬೆಳೆಗಾರರು ತಮಗಿರುವ ಅಲ್ಪಸ್ವಲ್ಪ ಜಮೀನುಗಳಲ್ಲಿ ಭರಪೂರ ಹೂ ಅರಳಿಸಿ ಮಾರುಕಟ್ಟೆಗೆ ಹೋಗಲು ರೆಡಿಯಾಗಿದ್ದಾರೆ.

    ಕೊಡೇಕಲ್, ಕುರೇಕನಾಳ, ಯರಕಿಹಾಳ, ಮದಲಿಂಗನಾಳ, ಬಲಶೆಟ್ಟಿಹಾಳಗಳಲ್ಲಿ ೧೦-೧೫ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಚೆಂಡು ಬೆಳೆಯಲಾಗುತ್ತಿದೆ ಎಂದು ತೋಟಗಾರಿಕೆ ಅಧಿಕಾರಿಗಳು ಹೇಳುತ್ತಾರೆ.

    ೧೫ ವರ್ಷಗಳಿಂದ ಹೂ ಕೃಷಿ ಮಾಡುತ್ತಿರುವ ಕೊಡೇಕಲ್ ರೈತ ಶಿವಯ್ಯ ಮಠ ಈ ವರ್ಷ ಲೀಸ್ ಆಧಾರದ ಮೇಲೆ ಒಂದೂವರೆ ಎಕರೆ ಭೂಮಿಯಲ್ಲಿ ನಾಟಿ ಮಾಡಿ ಐದು ತಿಂಗಳಾಗಿದ್ದು, ಹೂ ಬಿಡಲಾರಂಭಿಸಿದೆ. ಗಿಡವೊಂದಕ್ಕೆ ೫೦-೬೦ ಹೂ ಅರಳಿದ್ದು, ವಾತಾವರಣ ಸುವಾಸನೆಯಿಂದ ಕೂಡಿದೆ.

    ದಸರಾ ಹಬ್ಬದಂದು ಕೆಜಿಗೆ ೮೦ ರೂ .ದರ ಸಿಕ್ಕಿದ್ದು, ದೀಪಾವಳಿಗೆ ದುಪಟ್ಟಾಗುವ ನಿರೀಕ್ಷೆಯಲ್ಲಿ ಅನ್ನದಾತರು ಹೂವು ಕಟಾವಿನ ಸಿದ್ಧತೆಯಲ್ಲಿ ತೊಡಗಿದ್ದಾರೆ. ಒಟ್ಟಾರೆ, ಒಂದೂ ಮಳೆಯಾಗದೆ ಬೆಳೆಗಳೆಲ್ಲ ಒಣಗುತ್ತ ಸಾಗಿ ರೈತರು ಸಂಕಷ್ಟ ಸ್ಥಿತಿ ಎದುರಿಸುತ್ತಿದ್ದರೆ, ಇನ್ನೊಂದೆಡೆ ಹೂ ಕೃಷಿ ಮಾಡುತ್ತ ಉತ್ತಮ ಇಳವರಿ ಮತ್ತು ದರ ನಿರೀಕ್ಷೆಯಲ್ಲಿದ್ದಾರೆ.

    ೧೫ ವರ್ಷಗಳಿಂದ ಹೂ ಕೃಷಿ ಮಾಡುತ್ತಿದ್ದು, ನನ್ನ ಕೈಹಿಡಿದಿದೆ. ದಸರಾ ಹಬ್ಬದಲ್ಲಿ ೨೦ ಕ್ವಿಂಟಾಲ್ ಚೆಂಡು ಹೂ ಮಾರಾಟ ಮಾಡಿz್ದೆÃನೆ. ದೀಪಾವಳಿ ಹಬ್ಬಕ್ಕೆ ಉತ್ತಮ ಬೆಲೆ ಸಿಗುವ ಭರವಸೆ ಇದೆ.
    | ಶಿವಯ್ಯ ಮಠ ಹೂ ಬೆಳೆಗಾರ ಕೊಡೇಕಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts