More

    ಪ್ಯಾಟಿ ಬಸವೇಶ್ವರ ದೇವಸ್ಥಾನದಲ್ಲಿ ಕಳ್ಳತನ: ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆ

    ಕೊಡೇಕಲ್: ಗ್ರಾಮದ ಪ್ಯಾಟಿ ಬಸವೇಶ್ವರ ದೇವಸ್ಥಾನದಲ್ಲಿ ಕಳ್ಳತನ ಮಾಡಲು ವಿಫಲವಾದ ಯತ್ನ ಮಾಡಿದ ಘಟನೆ ಸೋಮವಾರ ನಡೆದಿದ್ದು, ಹುಣಸಗಿ ತಹಸೀಲ್ದಾರ್ ಅವರು ಕೊಡೇಕಲ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.

    ಶ್ರೀ ಬಸವೆಶ್ವರರ ದೇವಸ್ಥಾನಗಳು ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿದ್ದು, ವರ್ಷದಲ್ಲಿ ಎರಡು ಬಾರಿ ಜಾತ್ರೆಗಳು ನಡೆಯುತ್ತವೆ. ಸೋಮವಾರ ರಾತ್ರಿ ವೇಳೆ ದೇವಸ್ಥಾನದಲ್ಲಿರುವ ಹುಂಡಿಯನ್ನು ಒಡೆಯುವ ವಿಫಲ ಯತ್ನ ನಡೆದಿದೆ. ಎಂದಿನಂತೆ ಬೆಳಗ್ಗೆ ದೇವಸ್ಥಾನಕ್ಕೆ ತೆರಳಿದ ಅರ್ಚಕರು ದೇವಸ್ಥಾನದ ಕಬ್ಬಿಣದ ಗೇಟಿನ ಕೀಲಿ ಮುರಿದಿದ್ದು ನೋಡಿದ್ದಾರೆ. ಗ್ರಾಮದ ಪ್ರಮುಖರಿಗೆ ವಿಷಯ ತಿಳಿಸಿದ್ದು, ನಂತರ ಪೋಲಿಸರು ದೇವಸ್ಥಾನಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಕಳ್ಳನ ಚಲನವಲನಗಳು ಸಿಸಿ ಕ್ಯಾಮಾರಾದಲ್ಲಿ ಸೆರೆಯಾಗಿದ್ದು, ಸೋಮವಾರ ರಾತ್ರಿ 10 ಗಂಟೆಯಿಂದ 11 ಗಂಟೆಯವರೆಗೂ ಕಳ್ಳ ದೇವಸ್ಥಾನದಲ್ಲಿರುವ ಹುಂಡಿಯನ್ನು ಒಡೆಯುತ್ತಿರುವುದು ಕಂಡು ಬಂದಿದೆ.

    ಮಹಲಿನಮಠದ ಶ್ರೀ ವೃಷಭೇಂದ್ರ ಅಪ್ಪನವರು ಹಾಗೂ ತಹಸೀಲ್ದಾರ್ ವಿನಯಕುಮಾರ ಪಾಟೀಲ್ ಹಾಗೂ ಪಿಎಸ್ಐ ಅವರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಉಪತಹಸೀಲ್ದಾರ್ ಮಹಾದೇವಪ್ಪಗೌಡ ಬಿರಾದಾರ, ಕಂದಾಯ ನಿರೀಕ್ಷಕ ಬಸವರಾಜ ಬಿರಾದಾರ, ಪಿಎಸ್ಐ ಭಾಷುಮಿಯಾ, ವೀರಸಂಗಪ್ಪ ಹಾವೇರಿ, ಬಸವರಾಜಗೌಡ ರುಕ್ಮಾಪುರ, ಬಸಪ್ಪ ಪಂಜಗಲ್, ಗೌಡಪ್ಪ ರಾಮನಗೌಡ, ಬಸಣ್ಣ ಹಳೇಪೂಜಾರಿ ಇತರರಿದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts