More

    ನರಹಂತಕ ಹುಲಿಯ ಅಂತ್ಯಸಂಸ್ಕಾರ ಮುಗಿದ ಬಳಿಕ ನಿಟ್ಟುಸಿರುಬಿಟ್ಟ ಜನರಿಗೆ ಬೆಳಂಬೆಳಗ್ಗೆ ಕಾದಿತ್ತು ಆಘಾತ!

    ಮಡಿಕೇರಿ: ಕೊಡಗಿನಲ್ಲಿ ಹುಲಿ ಭಯ ಮತ್ತೆ ಕಾಡುತ್ತಿದೆ. ನಾಲ್ಕೇರಿ ಗ್ರಾಪಂ ವ್ಯಾಪ್ತಿಯ ಲಕ್ಕುಂದದ ಕಂದಕದಲ್ಲಿ ಕೊಳೆತ ಸ್ಥಿತಿಯಲ್ಲಿ ನಿನ್ನೆ(ಶುಕ್ರವಾರ) ಪತ್ತೆಯಾಗಿದ್ದ ಹುಲಿ ಮೃತದೇಹವನ್ನ ಪರಿಶೀಲಿಸಿದ ಅರಣ್ಯಾಧಿಕಾರಿಗಳು ಸತ್ತಿರುವ ಹುಲಿಯನ್ನೇ ನರಹಂತಕ ಹುಲಿ ಎಂದು ದೃಢಪಡಿಸಿದ್ದರು. ಅದೇ ಸ್ಥಳದಲ್ಲಿ ಅಂತ್ಯಸಂಸ್ಕಾರವೂ ನಡೆದಿದೆ. ಜನ ಮತ್ತು ಜಾನುವಾರುಗಳ ಪ್ರಾಣ ತೆಗೆದು ಸ್ಥಳೀಯರನ್ನು ಬೆಚ್ಚಿಬೀಳಿಸಿದ್ದ ಹುಲಿ ಬದುಕಿಲ್ಲ ಎಂದು ಸ್ಥಳೀಯರೂ ನಿಟ್ಟುಸಿರು ಬಿಟ್ಟ ಮರುದಿನವೇ ಕೊಳಕೇರಿ ಗ್ರಾಮದಲ್ಲಿ ಎರಡು ಹುಲಿ ಪ್ರತ್ಯಕ್ಷವಾಗಿವೆ!

    ಶನಿವಾರ ಬೆಳಗ್ಗೆ 6.30 ಗಂಟೆಗೆ ಮಡಿಕೇರಿ ತಾಲೂಕು ವ್ಯಾಪ್ತಿಯ ಕುಂಜಿಲ ಗ್ರಾಮದ ಮೂಸಾ ಪತ್ತಾಂಗ್ಗೋಟ್ ಅವರ ಕಾಫಿ ತೋಟದಲ್ಲಿ ಕಫಾತ್ ಕೆಲಸ ಮಾಡಲು ತೆರಳಿದ ಕಾರ್ಮಿಕ ಅಬೂಬಕ್ಕರ್ ಕಣ್ಣಿಗೆ ಹುಲಿ ಕಂಡಿದೆ. ಕೇವಲ 60 ಮೀಟರ್ ದೂರದಲ್ಲಿದ್ದ ಎರಡು ಹುಲಿಗಳಿಂದ ಪ್ರಾಣ ಉಳಿಸಿಕೊಳ್ಳಲು ಕಾರ್ಮಿಕ ಎದ್ನೋಬಿದ್ನೋ ಎಂಬಂತೆ ಓಡಿ ಹೋಗಿದ್ದಾರೆ. ಇದನ್ನೂ ಓದಿರಿ ಕೊಡಗಿನ ಲಕ್ಕುಂದದಲ್ಲಿ ಹುಲಿ ಮೃತದೇಹ ಪತ್ತೆ! ಜನರನ್ನು ಬಲಿ ಪಡೆದಿದ್ದ ಹುಲಿ ಇದೇನಾ?

    ನರಹಂತಕ ಹುಲಿಯ ಅಂತ್ಯಸಂಸ್ಕಾರ ಮುಗಿದ ಬಳಿಕ ನಿಟ್ಟುಸಿರುಬಿಟ್ಟ ಜನರಿಗೆ ಬೆಳಂಬೆಳಗ್ಗೆ ಕಾದಿತ್ತು ಆಘಾತ!ಕಾಫಿ ತೋಟದಲ್ಲಿ ಹುಲಿಗಳಿರುವ ಬಗ್ಗೆ ಮೂಸಾ ಪತ್ತಾಂಗ್ಗೋಟ್ ಅವರು ಕುಂಜಿಲ ಕಕ್ಕಬ್ಬೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಲಿಯಂಡ ಸಂಪನ್ಗೆ ಮಾಹಿತಿ ನೀಡಿದರು. ಕೂಡಲೇ ಇವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಭಾಗಮಂಡಲದಿಂದ ಸ್ಥಳಕ್ಕೆ ಬಂದ ಇಬ್ಬರು ಸಿಬ್ಬಂದಿ ಪರಿಶೀಲಿಸಿದರು. ಈ ವೇಳೆ ಗ್ರಾಪಂ ಅಬ್ದುಲ್ ರಜಾಕ್ ಇದ್ದರು. ಮೂಸಾ ಕೊಳಕೇರಿ ಗ್ರಾಮದಲ್ಲಿ ಎರಡು ಹುಲಿ ಇರುವ ಬಗ್ಗೆ ಧ್ವನಿಸುರಳಿ ಮೂಲಕ ಜನರಿಗೆ ಎಚ್ಚರಿಕೆ ಸಂದೇಶ ರವಾನಿಸಿದರು. ಕೆಲ ದಿನಗಳ ಹಿಂದೆ ಕೊಳಕೇರಿ ಗ್ರಾಮದಲ್ಲಿ ಹುಲಿ ದಾಳಿಗೆ ಜಾನುವಾರು ಬಲಿಯಾಗಿತ್ತು. ಇದೀಗ ಎರಡು ಹುಲಿ ಕಾಣಿಸಿಕೊಂಡು ಜನರಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದೆ.

    ಸತ್ತ ಹುಲಿಯೇ ನರಂಹತಕ ಹುಲಿನಾ?: ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಹಾಗೂ ಖಾಸಗಿ ತೋಟ ಮಧ್ಯದಲ್ಲಿರುವ ಕಂದಕದಲ್ಲಿ ಕೊಳೆತ ಸ್ಥಿತಿಯಲ್ಲಿ ಶುಕ್ರವಾರ ಹುಲಿ ಮೃತದೇಹ ಪತ್ತೆಯಾಗಿತ್ತು. ಇದು ನರಹಂತಕ ಹುಲಿಯ ಮೃತದೇಹ ಎಂದು ಅರಣ್ಯಾಧಿಕಾರಿಗಳು ಹೇಳಿಕೊಂಡಿದ್ದರು. ಮೃತದೇಹ ಪತ್ತೆಯಾದ ಸ್ಥಳದಲ್ಲಿಯೇ ಮರಣೋತ್ತರ ಪರೀಕ್ಷೆ ನಡೆದಿತ್ತು.

    ಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳೂರು ಗ್ರಾಮದಲ್ಲಿ 8 ವರ್ಷದ ಬಾಲಕ ರಂಗಸ್ವಾಮಿ ಹುಲಿ ದಾಳಿಗೆ ಮಾರ್ಚ್ 8 ರಂದು ಬಲಿಯಾಗಿದ್ದ. ಆ ಸಂದರ್ಭ ಬೆಳ್ಳೂರು ಗ್ರಾಮದ ಕೆರೆವೊಂದರ ಸಮೀಪ ಇದ್ದ ಹುಲಿಗೆ ಅರಣ್ಯ ತಂಡ ಗುಂಡಿಕ್ಕಿತ್ತೆಂಬ ಸುದ್ದಿ ಹರಿದಾಡಿತ್ತು. ಸ್ಥಳದಲ್ಲಿ ರಕ್ತದ ಗುರುತು, ಹುಲಿ ಕೂದಲು ಲಭ್ಯವಾಗಿದ್ದು, ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಅರಣ್ಯಾಧಿಕಾರಿಗಳು ಹೇಳಿಕೊಂಡಿದ್ದರು.

    ತದನಂತರ ಮಾ.12ರಂದು ನಾಲ್ಕೇರಿ ಗ್ರಾಮದಲ್ಲಿ ರೈತ ರಾಮಚಂದ್ರ ಎಂಬುವವರಿಗೆ ಸೇರಿದ ಹಸು ಹುಲಿ ದಾಳಿಗೆ ಜೀವ ಕಳೆದುಕೊಂಡಿತ್ತು. ಮಾ.8 ಮತ್ತು 12ರಂದು ನಡೆದ ದಾಳಿಯಲ್ಲಿ ನರಹಂತಕ ಹುಲಿ ದಾಳಿ ನಡೆಸಿತ್ತು ಎಂದು ಅರಣ್ಯಾಧಿಕಾರಿಗಳು ಹೇಳಿದ್ದರು. ಸಿಸಿ ಕ್ಯಾಮರಾ ದಾಖಲೆ ಅನ್ವಯ ಎರಡು ದಾಳಿಯಲ್ಲೂ ಒಂದೇ ಹುಲಿ ಇತ್ತು. ಈ ಹುಲಿಯ ಹಲ್ಲು, ಚರ್ಮ ಸತ್ತಿರುವ ಹುಲಿಗೆ ಹೋಲಿಕೆ ಇದೆ. ಹೀಗಾಗಿ ಇದೇ ಹುಲಿ ಜನರನ್ನು ಕೊಂದದ್ದು ಅನ್ನೋದು ದೃಢಪಟ್ಟಿದೆ. ಇದೇ ನರಹಂತಕ ಹುಲಿ ಎಂದು
    ಅರಣ್ಯಾಧಿಕಾರಿಗಳು ಹೇಳಿದ್ದರು. ಜನತೆ ಕೂಡ ಈ ಸುದ್ದಿ ಕೇಳಿ ನಿಟ್ಟುಸಿರು ಬಿಟ್ಟಿದ್ದರು. ಇದಾದ ಮರುದಿನವೇ ಮತ್ತೆರಡು ಹುಲಿ ಕಾಣಿಸಿಕೊಂಡಿರುವುದು ಜನರಲ್ಲಿ ಭಯ ಹುಟ್ಟಿಸಿದೆ.

    ಅತ್ತ ತೋಟದಲ್ಲಿ ಪೂಜೆ ನಡೆಯುತ್ತಿತ್ತು, ಇತ್ತ ಮನೆಯಲ್ಲಿ ಮಗುವಿನೊಂದಿಗೆ ತಾಯಿ ಆತ್ಮಹತ್ಯೆ!

    ತವರು ಮನೆಯಲ್ಲಿ ಮಗಳು ಆತ್ಮಹತ್ಯೆ! ಸಾವಿಗೂ ಮುನ್ನ ಮನದ ದುಃಖ ಅಕ್ಷರಕ್ಕಿಳಿಸಿದ ಸುಂದರಿ

    ಒಬ್ಬನೊಂದಿಗೇ ಅಮ್ಮ-ಮಗಳ ಅಕ್ರಮ ಸಂಬಂಧ! ಪ್ರಿಯಕರನೊಟ್ಟಿಗೆ ಆ ರಾತ್ರಿ ನಡೆಯಿತು ಘೋರ ಕೃತ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts