More

    ಪ್ರೋತ್ಸಾಹಧನ ನಿಲ್ಲಿಸಲು ಕೇಂದ್ರದ ಒತ್ತಡ : ಒಂದೆರಡು ರೂ.ಗೆ ಇಳಿಸಲು ಸೂಚನೆ

    ಶಿಡ್ಲಟ್ಟ: ಹೈನೋದ್ಯಮ ಉತ್ತೇಜನಕ್ಕಾಗಿ ಹೈನುಗಾರರಿಗೆ ನೀಡುತ್ತಿರುವ 5ರೂ. ಪ್ರೋತ್ಸಾಹಧನ ಯೋಜನೆಯನ್ನು ಸ್ಥಗಿತಗೊಳಿಸಲು ರಾಜ್ಯ ಸರರ್ಕಾರದ ಮೇಲೆ ಕೇಂದ್ರ ಸರ್ಕಾರ ಒತ್ತಡ ಹೇರುತ್ತಿದೆ ಎಂದು ಕೋಚಿಮುಲ್ ನಿರ್ದೇಶಕ ಆರ್.ಶ್ರೀನಿವಾಸ್ ಆರೋಪ ಮಾಡಿದರು.

    ನಗರದ ಕೋಚಿಮುಲ್ ಶಿಬಿರ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಹಕಾರ ಸಪ್ತಾಹದಲ್ಲಿ ವಾತನಾಡಿ, ದೇಶದ ಇತರ ರಾಜ್ಯಗಳಲ್ಲಿ ಪ್ರೋತ್ಸಾಹಧನ 2 ರೂ. ಮೀರಿಲ್ಲ. ನಮ್ಮ ರಾಜ್ಯದಲ್ಲಿ ಮಾತ್ರ 5ರೂ. ನೀಡಲಾಗುತ್ತಿದೆ. ಹಾಗಾಗಿ ಬೇರೆ ರಾಜ್ಯಗಳಲ್ಲೂ ರೈತರು 5 ರೂ. ನೀಡಲು ಒತ್ತಡ ತರುತ್ತಿದ್ದು ಇದರಿಂದ ಆರ್ಥಿಕ ಹೊರೆ ಆಗಲಿದೆ. ಈ ಹಿನ್ನೆಲೆಯಲ್ಲಿ 5 ರೂ. ಯೋಜನೆ ಕೈಬಿಡಿ ಇಲ್ಲವೆ ಒಂದೆರಡು ರೂ.ಗೆ ಇಳಿಸಿ ಎಂದು ಕೇಂದ್ರ ಸರ್ಕಾರ ರಾಜ್ಯಕ್ಕೆ ಸೂಚಿಸಿದೆ ಎಂದು ತಿಳಿಸಿದರು.

    ಸಹಕಾರ ಸಂಘಗಳಲ್ಲಿ ರಾಜಕೀಯ ಬೆರೆಸಬಾದರು ಎಂಬುದು ನಿಜವಾದರೂ ನಾವೆಲ್ಲರೂ ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದೇವೆ. ನಾವು ಇನ್ನೊಬ್ಬರ ಕಡೆಗೆ ಬೆರಳು ತೋರುವುದಕ್ಕಿಂತ ನಮ್ಮ ನಡೆಯನ್ನು ನಾವೇ ಪ್ರಶ್ನಿಸಿಕೊಳ್ಳಬೇಕಿದೆ. ಸಹಕಾರ ಕ್ಷೇತ್ರ ರೈತರಿಗೆ ಸಾಕಷ್ಟು ನೆರವಾಗಿದೆ. ಆದರೂ ಇಲ್ಲಿನ ಸಮಸ್ಯೆಗಳಿಗೆ ನಾವೆಲ್ಲರೂ ಕಾರಣವಾಗಿದ್ದೇವೆ ಎಂದರು.

    ಜಿಲ್ಲಾ ಕೇಂದ್ರದಲ್ಲಿ ಒಕ್ಕೂಟಕ್ಕೆ ಸ್ವಂತ ಕಟ್ಟಡ ನಿರ್ವಾಣವಾಗುತ್ತಿದೆ. ಜಿಲ್ಲೆಯಲ್ಲಿನ ಎಲ್ಲ ಸಹಕಾರ ಸಂಗಳೂ ಆರ್ಥಿಕ ನೆರವು ನೀಡಬೇಕೆಂದು ಮನವಿ ವಾಡಿದ ಜಿಲ್ಲಾ ಸಹಕಾರಿ ಒಕ್ಕೂಟದ ಅಧ್ಯಕ್ಷ ಎಚ್.ವಿ.ನಾಗರಾಜ್, ಸಂಗಳಿಗೆ ನೂತನವಾಗಿ ಚುನಾಯಿತರಾದವರಿಗೆ ಒಕ್ಕೂಟದಿಂದ ತರಬೇತಿ ಕಾರ್ಯಾಗಾರ ಏರ್ಪಡಿಸುವುದಾಗಿ ತಿಳಿಸಿದರು.
    ಸಹಕಾರ ಅಭಿವೃದ್ಧಿ ಅಧಿಕಾರಿ ಮಂಜುನಾಥ್, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಆನಂದ್ ಇನ್ನಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts