More

    ನಾಡಿನ ಹಿರಿಮೆ ಸಾರುವ ಉದ್ದೇಶ

    ಕನಕಗಿರಿ: ಕರ್ನಾಟಕ ಸಂಭ್ರಮ 50ರ ಕನ್ನಡ ಜ್ಯೋತಿ ಯಾತ್ರೆಯನ್ನು ಮಂಗಳವಾರ ಪಟ್ಟಣದಲ್ಲಿ ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು.

    ಇಲ್ಲಿನ ಕಲ್ಮಠ ಮುಂಭಾಗದಲ್ಲಿ ಗ್ರೇಡ್ 2 ತಹಸೀಲ್ದಾರ್ ವಿ.ಎಚ್. ಹೊರಪೇಟಿ, ಮೆರವಣಿಗೆಗೆ ಚಾಲನೆ ನೀಡಿದರು. ರಾಜಬೀದಿಯಲ್ಲಿ ಸಾಗಿದ ಮೆರವಣಿಗೆಯಲ್ಲಿ ಗೊಂಬೆ ಕುಣಿತ, ಕುದುರೆ ಕುಣಿತ, ಅಲೆಮಾರಿ ಡ್ರಮ್‌ಸೆಟ್ ತಂಡ, ತಾಷ್ ಮೇಳ, ವಿವಿಧ ವೇಷಭೂಷಣ ಗಮನ ಸೆಳೆದವು. ಪಟ್ಟಣದ ವಿವಿಧ ಶಾಲಾ-ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ಕನ್ನಡ ಬಾವುಟ ಹಿಡಿದು ತಾಯಿ ಭುವನೇಶ್ವರಿಗೆ ಜೈಕಾರ ಹಾಕಿದರು.

    ಶಾಲಾ ಮಕ್ಕಳು ವೀರರಾಣಿ ಕಿತ್ತೂರು ಚನ್ನಮ್ಮ, ತಾಯಿ ಭುವನೇಶ್ವರಿ, ಪಟ್ಟರಾಜ ಗವಾಯಿ, ಹಾನಗಲ್ ಕುಮಾರ ಶಿವಯೋಗಿ, ಸುಧಾಮೂರ್ತಿ ಮತ್ತಿತರ ಮಹನೀಯರ ವೇಷದಲ್ಲಿ ಮಿಂಚಿದರು. ರಥಯಾತ್ರೆ ಆರಂಭಗೊಳ್ಳುತ್ತಿದ್ದಂತೆ ರಾಜಬೀದಿಯಲ್ಲಿ ಕನ್ನಡ ಪರ ಸಂಘಟನೆ, ಜನಪ್ರತಿನಿಧಿಗಳು, ಯುವಕರು ಜಮಾಯಿಸಿ ಮೆರವಣಿಗೆಯುದ್ದಕ್ಕೂ ಕುಣಿದು ಕುಪ್ಪಳಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವ-ಸಹಾಯ ಸಂಘಟಗಳ ಮಹಿಳೆಯರು ಕಳಶ, ಕುಂಭದೊಂದಿಗೆ ಭಾಗವಹಿಸಿದ್ದರು. ನೆರೆದಿದ್ದವರು ಕನ್ನಡ ಜ್ಯೋತಿಯಾತ್ರೆಯ ವೈಭವವನ್ನು ಕಣ್ತುಂಬಿಕೊಂಡರು.

    ತಾಪಂ ಇಒ ಚಂದ್ರಶೇಖರ ಕಂದಕೂರು, ಪಪಂ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ, ಸಿಡಿಪಿಐ ವಿರೂಪಾಕ್ಷಿ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ವಿ. ಮಧುಸೂದನ, ಪಿಎಸ್‌ಐ ಜಾಫರುದ್ದೀನ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts