More

    ರೈಲಿನಲ್ಲಿ ಸಂಚಾರ ವಿದೇಶ ಪ್ರಯಾಣಕ್ಕಿಂತೇನೂ ಕಡಿಮೆಯಿಲ್ಲ…!

    ನವದೆಹಲಿ: ಸಾಮಾನ್ಯವಾಗಿ ವಿದೇಶ ಪ್ರಯಾಣಕ್ಕೆ ಹಲವು ನಿಯಮಗಳನ್ನು ರೂಪಿಸಿರಲಾಗುತ್ತದೆ. ಅದರಲ್ಲೂ ಮುಖ್ಯವಾಗಿ ನಾವು ತೆರಳುತ್ತಿರುವ ದೇಶದ ವೀಸಾ ನಿಯಮಗಳ ಬಗ್ಗೆ ಗೊತ್ತಿರಲೇಬೇಕು. ಇಲ್ಲದಿದ್ದರೆ ದೇಶವನ್ನು ಪ್ರವೇಶಿಸಲು ಬಿಡದೇ ವಿಮಾನ ನಿಲ್ದಾಣದಿಂದಲೇ ನಿಮ್ಮ ದೇಶಕ್ಕೆ ವಾಪಸ್​ ಕಳುಹಿಸಲಾಗುತ್ತದೆ.

    ಇದೀಗ, ಇದೇ ನಿಯಮ ರೈಲು ಪ್ರಯಾಣಕ್ಕೂ ಅನ್ವಯವಾಗುತ್ತಿದೆ…! ಹೌದು ರೈಲ್ವೆ ಪ್ರಯಾಣ ವಿದೇಶ ಪ್ರಯಾಣಕ್ಕಿಂತೇನೂ ಕಡಿಮೆಯಿಲ್ಲ ಎನಿಸಿದೆ. ನೀವು ಯಾವ ರಾಜ್ಯಕ್ಕೆ ತೆರಳುತ್ತಿದ್ದೀರೋ ಅಲ್ಲಿನ ಕ್ವಾರಂಟೈನ್​ ಪ್ರೊಟೊಕಾಲ್​ ತಿಳಿದುಕೊಳ್ಳುವುದು ಕಡ್ಡಾಯವಾಗಿದೆ.

    ಇದನ್ನೂ ಓದಿ; ಮೆಟ್ರೋ ರೈಲು ಪ್ರಯಾಣಕ್ಕೆ ಕ್ಯೂಆರ್​ ಕೋಡ್​ ಟಿಕೆಟ್​, ಕಡ್ಡಾಯವಾಗಲಿದೆ ಆರೋಗ್ಯ ಸೇತು ಆ್ಯಪ್​ 

    ಏನಿದು ಕ್ವಾರಂಟೈನ್​ ಪ್ರೊಟೊಕಾಲ್​?: ಸದ್ಯ ಕೋವಿಡ್​ ಸಂಕಷ್ಟದಿಂದ ಪಾರಾಗಲು ಕೇಂದ್ರದ ಮಾರ್ಗಸೂಚಿ ಅನ್ವಯ ಆಯಾ ರಾಜ್ಯಗಳು ಪ್ರತ್ಯೇಕ ಕ್ವಾರಂಟೈನ್​ ನಿಯಮಗಳನ್ನು ರೂಪಿಸಿವೆ. ಬೇರೆ ರಾಜ್ಯಕ್ಕೆ ತೆರಳಿದಾಗ ಕಡ್ಡಾಯವಾಗಿ 14 ದಿನ ಕ್ವಾರಂಟೈನ್​ ಇರಬೇಕಾಗುತ್ತದೆ. ಈ ವೆಚ್ಚವನ್ನು ಪ್ರಯಾಣಿಕರೇ ಭರಿಸಬೇಕು. ವಯಸ್ಸಾದವರಿಗೆ, ಮಕ್ಕಳಿಗೆ, ಗರ್ಭಿಣಿಯರಿಗೆ ಕೆಲವೆಡೆ ವಿನಾಯ್ತಿ ನೀಡಲಾಗಿದೆ. ಹೀಗೆ ಹಲವು ನಿಯಮಗಳಿವೆ. ಆನ್​ಲೈನ್​ನಲ್ಲಿ ರೈಲು ಟಿಕೆಟ್​ ಬುಕಿಂಗ್​ ಆರಂಭಿಸಿದಾಗ ಕೋವಿಡ್​-19 ಎಚ್ಚರಿಕೆ ತೆರೆದುಕೊಳ್ಳುತ್ತದೆ. ಅದರಲ್ಲಿನ ನಿಯಮಗಳನ್ನು ತಿಳಿದುಕೊಳ್ಳುವುದು ಕಡ್ಡಾಯ ಎಂದು ರೈಲ್ವೆ ಇಲಾಖೆ ತಿಳಿಸಿದೆ.
    ದೆಹಲಿಯಿಂದ ಬೆಂಗಳೂರಿಗೆ ಬಂದಿದ್ದ ಕೆಲ ಪ್ರಯಾಣಿಕರು ಕ್ವಾರಂಟೈನ್​ಗೆ ಒಪ್ಪದ ಕಾರಣ ಮರಳಿ ದೆಹಲಿಗೆ ಕಳುಹಿಸಲಾಗಿತ್ತು. ಹೀಗಾಗಿ ಆಯಾ ರಾಜ್ಯಗಳು ಅಥವಾ ಕೇಂದ್ರಾಡಳಿತ ಪ್ರದೇಶಗಳು ವಿಧಿಸಿದ ಷರತ್ತುಗಳನ್ನು ಪಾಲಿಸುವುದು ಕಡ್ಡಾಯವಾಗಿರುತ್ತದೆ.

    ಇದನ್ನೂ ಓದಿ; ಲಾಕ್​ಡೌನ್​ ಕಾಲ ಮುಗೀತು, ಕರೊನಾ ಕಟ್ಟಿ ಹಾಕುತ್ತಾ ಕಂಟೇನ್​ಮೆಂಟ್​? 

    ಇದಲ್ಲದೇ, ಪ್ರಯಾಣಿಕರು ತಮ್ಮೊಂದಿಗೆ ಕೊಂಡೊಯ್ಯುವ ಸ್ಮಾರ್ಟ್​ಫೋನಿನಲ್ಲಿ ಆರೋಗ್ಯ ಸೇತು ಆ್ಯಪ್​ ಹೊಂದಿರುವುದು ಕಡ್ಡಾಯವಾಗಿದೆ. ಸದ್ಯ ರೈಲಿನಲ್ಲಿ ಐಆರ್​ಸಿಟಿಸಿ ವತಿಯಿಂದ ಆಹಾರ ಪೂರೈಕೆ ವ್ಯವಸ್ಥೆಯಿರುವುದಿಲ್ಲ. ಇದಲ್ಲದೇ, ಹೊದಿಕೆ, ಊಟದ ವ್ಯವಸ್ಥೆ ಇರುವುದಿಲ್ಲ. ಇದನ್ನೆಲ್ಲ ಪ್ರಯಾಣಿಕರೇ ಹೊಂದಿಸಿಕೊಳ್ಳುವುದು ಪ್ರಯಾಣಿಕರದ್ದೇ ಜವಾಬ್ದಾರಿ ಎಂದು ಇಲಾಖೆ ಸ್ಪಷ್ಟಪಡಿಸಿದೆ.

    ಸದ್ಯ ದೇಶಾದ್ಯಂತ ರಾಜಧಾನಿ ಎಕ್ಸಪ್ರೆಸ್​ ಮಾದರಿಯ ವಿಶೇಷ ರೈಲುಗಳಷ್ಟೇ ಸಂಚರಿಸುತ್ತಿವೆ. ಜೂನ್​​ 30ರವರೆಗೆ ಮಾಡಲಾಗಿದ್ದ ಎಲ್ಲ ಸಾಮಾನ್ಯ ಪ್ರಯಾಣಿಕ ರೈಲುಗಳ ಮುಂಗಡ ಟಿಕೆಟ್​ಗಳನ್ನು ರದ್ದು ಮಾಡಲಾಗಿದ್ದು, ಪ್ರಯಾಣಿಕರಿಗೆ ಹಣ ಹಿಂದಿರುಗಿಸಲಾಗುತ್ತಿದೆ.

    ಸಿಬ್ಬಂದಿಗೆ ಸಂಬಳ ನೀಡಲು ಜಮೀನು ಮಾರಾಟಕ್ಕೆ ಮುಂದಾದ ತಿರುಪತಿ ದೇಗುಲ ಮಂಡಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts