More

    ಮೆಟ್ರೋ ರೈಲು ಪ್ರಯಾಣಕ್ಕೆ ಕ್ಯೂಆರ್​ ಕೋಡ್​ ಟಿಕೆಟ್​, ಕಡ್ಡಾಯವಾಗಲಿದೆ ಆರೋಗ್ಯ ಸೇತು ಆ್ಯಪ್​

    ಬೆಂಗಳೂರು: ಮೆಟ್ರೋ ರೈಲು ಪ್ರಯಾಣಕ್ಕೆ ಟೋಕನ್​ ನೀಡುವ ಬದಲಾಗಿ ಸ್ಮಾರ್ಟ್​ಕಾರ್ಡ್​ಗಳನ್ನೇ ಬಳಸಲು ಪ್ರಯಾಣಿಕರಿಗೆ ಸೂಚಿಸಲಾಗುತ್ತಿದೆ ಎಂದು ಈ ಹಿಂದೆ ಹೇಳಲಾಗಿತ್ತು. ಆದರೆ, ಅದನ್ನೂ ಮೀರಿ ಕ್ಯೂಆರ್​ ಕೋಡ್​ ಬಳಸಿ ಟಿಕೆಟ್​ ಖರೀದಿಸುವ ವ್ಯವಸ್ಥೆ ಜಾರಿಗೊಳಿಸುವ ಚಿಂತನೆ ನಡದಿದೆ.

    ದೇಶಾದ್ಯಂತ ಮೆಟ್ರೋ ರೈಲು ನಿಗಮಗಳಿಗೆ ಕೇಂದ್ರ ಸರ್ಕಾರ ಪತ್ರ ಬರೆದಿದ್ದು, ಕ್ಯೂಆರ್​ ಕೋಡ್​ ಬಳಕೆಗೆ ವ್ಯವಸ್ಥೆ ಮಾಡುವಂತೆ ಸೂಚಿಸಿದೆ. ಮಾತ್ರವಲ್ಲ, ಇದನ್ನು ಆರೋಗ್ಯ ಸೇತು ಆ್ಯಪ್​ ಜತೆ ಸಮನ್ವಯಗೊಳಿಸುವಂತೆಯೂ ತಿಳಿಸಿದೆ. ಅದರಂತೆ ಆರೋಗ್ಯ ಸೇತು ಆ್ಯಪ್​ನಲ್ಲಿ ‘ಸುರಕ್ಷಿತ’ ಎಂದು ಪರಿಗಣಿಸಲಾಗುವ ಪ್ರಯಾಣಿಕರಿಗೆ ಮಾತ್ರ ಮೆಟ್ರೋ ರೈಲಿನಲ್ಲಿ ಸಂಚಾರಕ್ಕೆ ಅವಕಾಶ ದೊರೆಯಲಿದೆ.

    ಇದನ್ನೂ ಓದಿ; ಎರಡು ದಶಕಗಳಷ್ಟು ಹಿಂದಿನಂತಿದ್ದ ದೆಹಲಿ ಮತ್ತೆ ಮೊದಲಿನಂತಾಯ್ತು…! 

    ದೆಹಲಿ ಮೆಟ್ರೋದ ಹಲವು ನಿಲ್ದಾಣಗಳಲ್ಲಿ ಈಗಾಗಲೇ ಕ್ಯೂಆರ್​ ಕೋಡ್​ ರೀಡರ್​ಗಳನ್ನು ಅಳವಡಿಕೆ ಮಾಡಲಾಗಿದೆ. ನೊಯ್ಡಾ, ಮುಂಬೈ, ಹೈದರಾಬಾದ್​, ಕೊಚ್ಚಿ ಮೆಟ್ರೋ ನಿಲ್ದಾಣಗಳಲ್ಲೂ ಇಂಥ ರೀಡರ್​ಗಳನ್ನು ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ.

    ದೆಹಲಿಯಲ್ಲಿ ಬೆಳಗ್ಗೆ 6ರಿಂದ ರಾತ್ರಿ ಹತ್ತು ಗಂಟೆವರೆಗೆ ರೈಲು ಸಂಚಾರಕ್ಕೆ ಸೀಮಿತ ಮಾರ್ಗದಲ್ಲಿ 10-15 ನಿಮಿಷಕ್ಕೊಂದರಂತೆ ತೈಲು ಸಂಚರಿಸಲಿದೆ. ಸಿಬ್ಬಂದಿ ಲಭ್ಯತೆ ಹಾಗೂ ಪ್ರಯಾಣಿಕರ ದಟ್ಟಣೆಯನ್ನಾಧರಿಸಿ ಇದನ್ನು ವಿಸ್ತರಿಸಲಾಗುತ್ತದೆ.

    ಪ್ರಯಾಣಿಕರು ಮಾಸ್ಕ್​ ಧರಿಸುವುದು ಕಡ್ಡಾಯವಾಗಲಿದೆ. ಸ್ಮಾರ್ಟ್​ಫೋನ್​ಗಳಲ್ಲಿ ಆರೋಗ್ಯ ಸೇತು ಆ್ಯಪ್​ ಇನ್​ಸ್ಟಾಲ್​ ಮಾಡಿಕೊಂಡಿರಬೇಕು. ಇದರಲ್ಲಿ ‘ಸುರಕ್ಷಿತ’ ಎಂದು ತೋರಿಸಿದ ಪ್ರಯಾಣಿಕರನ್ನು ನಿಲ್ದಾಣದ ಒಳಗೆ ಬಿಡಲಾಗುತ್ತದೆ. ಜತೆಗೆ, ಜ್ವರ ತಪಾಸಣೆ (ಥರ್ಮಲ್​​ ಸ್ಕ್ರೀನಿಂಗ್​) ಕೂಡ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ;  ಬಸ್​ ಸಂಚಾರ, ವಿಮಾನ ಹಾರಾಟ ಆರಂಭ ನಿರೀಕ್ಷೆ; ಲಾಕ್​ಡೌನ್​ 4.0ನಲ್ಲಿ ಸಿಗಲಿದೆ ಇನ್ನಷ್ಟು ವಿನಾಯ್ತಿ

    ಟೋಕನ್ ​ಹಾಗೂ ಸ್ಮಾರ್ಟ್​ಕಾರ್ಡ್​ಗಳ ವಿತರಣೆಯಿಂದ ಕರೊನಾ ಹರಡಬಹುದು ಎಂಬ ಕಾರಣಕ್ಕೆ ಕ್ಯೂಆರ್​ ಕೋಡ್​ಗಳಿಗೆ ಮೊರೆ ಹೋಗಲಾಗುತ್ತಿದೆ. ಆದರೆ, ಸ್ಮಾರ್ಟ್​ಫೋನ್​ ಹೊಂದಿಲ್ಲದ ಪ್ರಯಾಣಿಕರಿಗೆ ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು ಸ್ಥಳೀಯವಾಗಿ ನಿರ್ಧರಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ರೈಲುಗಳಲ್ಲಿ ಏರ್​ ಕಂಡೀಷನಿಂಗ್​ ವ್ಯವಸ್ಥೆ ಬಳಕೆ ಇರದ ಕಾರಣ ನಿಲ್ದಾಣದಲ್ಲಿ ನಿಗದಿತ ಸಮಯಕ್ಕಿಂತ ಹೆಚ್ಚು ಹೊತ್ತು ನಿಲ್ಲಿಸಿ, ಬಾಗಿಲುಗಳನ್ನು ತೆರೆದೇ ಇಟ್ಟು ಹೆಚ್ಚು ಗಾಳಿಯಾಡುವಂತೆ ಮಾಡಲಾಗುತ್ತದೆ.

    ಕೋತಿಗಳ ಮೇಲೆ ಯಶಸ್ವಿಯಾಯ್ತು ಕರೊನಾ ಲಸಿಕೆ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts