More

    ಹರಿಪ್ರಿಯಾಗೆ ಇಂದು ಏನು ಸಿಕ್ತು ಗೊತ್ತಾ?

    ಕಳೆದ ಮೂರ್ನಾಲ್ಕು ತಿಂಗಳುಗಳಿಂದ ತಮ್ಮ ಬೇಬ್​ ನೋಸ್​ ಡಾಟ್​ಕಾಮ್​ನಲ್ಲಿ ಹಲವು ವಿಷಯಗಳನ್ನು ಬರೆಯುವುದರಲ್ಲಿ ತೊಡಗಿಸಿಕೊಂಡಿದ್ದಾರೆ ಹರಿಪ್ರಿಯಾ. ದಿನಾ ಒಂದಿಲ್ಲೊಂದು ವಿಷಯಗಳನ್ನು ಹಂಚಿಕೊಳ್ಳುವ ಮೂಲಕ ಲಾಕ್​ಡೌನ್​ ಸಮಯದಲ್ಲೂ ತಮ್ಮ ಅಭಿಮಾನಿಗಳ ಮನರಂಜಿಸುತ್ತಿದ್ದಾರೆ.

    ಇದನ್ನೂ ಓದಿ: ಸುಶಾಂತ್​ ಆತ್ಮಹತ್ಯೆ: ಸಲ್ಮಾನ್​ ಖಾನ್​ ವಿಚಾರಣೆ ಇಲ್ಲ

    ಇದೀಗ ಹರಿಪ್ರಿಯಾ, ತಮ್ಮ ಸೋಷಿಯಲ್​ ಮೀಡಿಯಾದಲ್ಲಿ ಒಂದು ಪೋಸ್ಟ್ ಹಾಕಿದ್ದಾರೆ. ಇಂದು ಏನೋ ಹುಡುಕುವ ಸಂದಭರ್ದಲ್ಲಿ ಅವರಿಗೆ ತಮ್ಮ ನಾಮಕರಣ ಆಹ್ವಾನಪತ್ರಿಕೆ ಸಿಕ್ಕಿದೆ. 1992ರ ಮಾರ್ಚ್​​ 23ರಂದು ಹರಿಪ್ರಿಯಾ ಅವರ ನಾಮಕರಣವು ಚಿಕ್ಕಬಳ್ಳಾಪುರದ ತಮ್ಮ ಸ್ವಗೃಹದಲ್ಲಿ ನಡೆದಿದೆ.

    ಈ ಕುರಿತು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿರುವ ಹರಿಪ್ರಿಯಾ, ‘ಇಂದು ಏನೋ ಹುಡುಕುವಾಗ ನನಗೆ ನನ್ನ ನಾಮಕರಣ ಆಹ್ವಾನಪತ್ರಿಕೆ ಸಿಕ್ಕಿತು. ನನ್ನ ನಾಮಕರಣದ ಆಹ್ವಾನ ಪತ್ರಿಕೆ ನನಗೇ ಸಿಕ್ಕಿರುವುದು ನಾನೆಷ್ಟು ಲಕ್ಕಿ ಅಲ್ವಾ?’ ಎಂದು ಟ್ವೀಟ್​ ಮಾಡಿಕೊಂಡಿದ್ದಾರೆ.

    ಹರಿಪ್ರಿಯಾ ಅವರಿಗೆ ನಾಮಕರಣದ ಸಂದರ್ಭದಲ್ಲಿ, ಅವರ ತಂದೆ-ತಾಯಿ ಇಟ್ಟ ಹೆಸರು ಶ್ರುತಿ. ಆ ನಂತರ ಚಿತ್ರರಂಗಕ್ಕೆ ಬಂದ ಹೊಸತರಲ್ಲಿ, ಅವರ ಹೆಸರನ್ನು ಬದಲಾಯಿಸಲಾಯಿತು. ಅಷ್ಟರಲ್ಲಾಗಲೇ ಶ್ರುತಿ ಎಂಬ ನಾಯಕಿ ಇದ್ದಿದ್ದರಿಂದ, ಗೊಂದಲವಾಗದಿರಲಿ ಎಂಬ ಕಾರಣಕ್ಕೆ, ಅವರಿಗೆ ಹರಿಪ್ರಿಯಾ ಎಂಬ ಹೆಸರನ್ನು ಇಡಲಾಯಿತು.

    ಇದನ್ನೂ ಓದಿ: ನೋ ಎಂದಿದ್ದ ಅನೂಷ್ಕಾ, ಈಗ ಎಸ್​ ಎನ್ನುತ್ತಿರುವುದೇಕೆ? ಇಲ್ಲಿದೆ ಉತ್ತರ

    ಅಲ್ಲಿಂದ ಇಲ್ಲಿಯವರೆಗೂ, ಅದೇ ಹೆಸರಿನಲ್ಲಿ ಗುರುತಿಸಿಕೊಂಡಿರುವ ಹರಿಪ್ರಿಯಾ, ಕನ್ನಡ ಚಿತ್ರರಂಗದಲ್ಲಿ ಒಂದು ದಶಕದಲ್ಲಿ 25ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಅವರು, ಕೆಲವು ಚಿತ್ರಗಳ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ.

    ನಟ ಧ್ರುವ ಸರ್ಜಾ ಮತ್ತು ಪತ್ನಿಗೆ ಕರೊನಾ ಪಾಸಿಟಿವ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts