More

    ಮಣ್ಣಿನ ಕಪ್​​​ಗಳಲ್ಲಿ ಬಿಸಿ ಬಿಸಿ ಚಹಾ ಕುಡಿದರೆ ದೇಹದಲ್ಲಿ ಆಗುವ ಬದಲಾವಣೆಗಳೇನು ಗೊತ್ತಾ?

    ಬೆಂಗಳೂರು: ಬಿಸಿ ಬಿಸಿಯಾದ ಚಹಾ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಚಳಿ..ಚಳಿ ವಾತಾವರಣಕ್ಕೆ ಒಂದು ಕಪ್​​ ಚಹಾ ಇದ್ದರೆ ಸ್ವರ್ಗ ಎನ್ನುತ್ತಾರೆ ಬೆಂಗಳೂರಿನ ನಿವಾಸಿಗಳು.  ಚಹಾಕ್ಕೆ ಪ್ರಸಿದ್ಧವಾಗಿರುವ ಅನೇಕ ಚಹಾ ಅಂಗಡಿಗಳು ಇವೆ. ಇಂದಿನ ದಿನಗಳಲ್ಲಿ ಮಣ್ಣಿನ ಮಡಕೆಗಳು ಎಲ್ಲಿಯೂ ಕಾಣಸಿಗುವುದಿಲ್ಲ. ಎಷ್ಟೋ ಅಂಗಡಿಗಳಲ್ಲಿ ಪ್ಲಾಸ್ಟಿಕ್, ಗ್ಲಾಸ್​​  ಕಪ್​​ಗಳಲ್ಲಿ ಚಹಾ ಮಾರುತ್ತಾರೆ. ಆದರೆ ಅದರಲ್ಲಿ ಅಪಾಯವಿದೆ. ಪ್ಲಾಸ್ಟಿಕ್ ಪಾತ್ರೆಯಲ್ಲಿ ಚಹಾವನ್ನು ಸುರಿಯುವುದು ರಾಸಾಯನಿಕ ಕ್ರಿಯೆಯನ್ನು ಪ್ರಾರಂಭಿಸುತ್ತದೆ. ಇದು ದೇಹಕ್ಕೆ ಹಾನಿ ಮಾಡುತ್ತದೆ. ಬನ್ನಿ ಹಾಗಿದ್ದರೆ ಮಣ್ಣಿನ ಕಪ್​​ಗಳಲ್ಲಿ ಚಹಾ ಕುಡಿದರೆ ಏನೆಲ್ಲಾ ಲಾಭಗಳಿವೆ ಎನ್ನುವುದನ್ನು ತಿಳಿದುಕೊಳ್ಳೋಣ….

    ಟೀ ಕುಡಿಯಲು ಯಾರಿಗೆ ತಾನೇ ಇಷ್ಟವಿಲ್ಲ.. ಕೆಲವರಿಗೆ ಗಂಟಲಲ್ಲಿ ಬಿಸಿ ಬಿಸಿ ಚಹಾದೊಂದಿಗೆ ಎದ್ದ ನಂತರ ತಮ್ಮ ದಿನವನ್ನು ಪ್ರಾರಂಭಿಸುವುದಿಲ್ಲ. ಸುಸ್ತಾಗಿದ್ದರೂ ಮೂಡ್ ಚೇಂಜ್ ಆಗಿದ್ದರೂ ಒಂದು ಕಪ್ ಟೀ ಕುಡಿದರೆ ಎಲ್ಲವೂ ಮಾಯವಾಗುತ್ತದೆ. ಇತ್ತೀಚೆಗೆ ರಸ್ತೆ ಬದಿಯ ವಿವಿಧ ಟೀ ಸ್ಟಾಲ್‌ಗಳು ಪ್ಲಾಸ್ಟಿಕ್ ಕಂಟೈನರ್‌ಗಳಲ್ಲಿ ಈ ಪಾನೀಯವನ್ನು ನೀಡುತ್ತಿವೆ. ಪ್ಲಾಸ್ಟಿಕ್ ಕಪ್‌ಗಳಲ್ಲಿ ಚಹಾ ಕುಡಿಯುವುದು ಆರೋಗ್ಯಕ್ಕೆ ಹಾನಿಕರ.

    1) ಅನೇಕ ಜನರು ಹಾಲಿನೊಂದಿಗೆ ಮಾಡಿದ ಚಹಾವನ್ನು ಕುಡಿಯಲು ಬಯಸುತ್ತಾರೆ. ಆದರೆ ಹಾಲು ಮತ್ತು ಡಿಕಾಶಿನ್ ಟೀ ಕುಡಿದ ನಂತರ ಅನೇಕರಿಗೆ ಅಸಿಡಿಟಿ ಸಮಸ್ಯೆ ಉಂಟಾಗುತ್ತದೆ. ತಜ್ಞರ ಪ್ರಕಾರ ಮಣ್ಣಿನ ಪಾತ್ರೆಯಲ್ಲಿ ಹಾಲಿನೊಂದಿಗೆ ತಯಾರಿಸಿದ ಟೀ ಕುಡಿಯುವುದರಿಂದ ಈ ಸಮಸ್ಯೆ ನಿವಾರಣೆಯಾಗುತ್ತದೆ.

    2) ಮಣ್ಣಿನ ಕಪ್​​ ತನ್ನಲ್ಲಿರುವ ಕ್ಷಾರವನ್ನು ಒಣಗಿಸಿ ಅಸಿಡಿಟಿ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಜೊತೆಗೆ ಮಣ್ಣಿನ ಪಾತ್ರೆಯಲ್ಲಿ ಟೀ ಕುಡಿಯುವುದರಿಂದ ದೇಹಕ್ಕೆ ಪೋಷಕಾಂಶಗಳೂ ಸಿಗುತ್ತವೆ.

    3) ಮಣ್ಣಿನಲ್ಲಿ ರಂಜಕ ಮತ್ತು ವಿವಿಧ ಖನಿಜಗಳಿವೆ. ಇವು ಚಹಾದ ಜೊತೆ ಸೇರಿ ಆರೋಗ್ಯಕ್ಕೆ ಒಳ್ಳೆಯದು. ಮಣ್ಣಿ ಕಪ್ ನೈಸರ್ಗಿಕವಾಗಿರುವುದರಿಂದ ಚಹಾ ಸೇವನೆ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದ್ದಾಗಿರುತ್ತದೆ.

    4) ಪ್ಲ್ಯಾಸ್ಟಿಕ್​​ ಕಪ್​ಗಳಲ್ಲಿ ಬಿಸಿಬಿಸಿ ಚಹಾ ಹಾಕುವುದರಿಂ ಕೆಲವು ರಾಸಾಯನಿಕಗಳು ಬಿಡುಗಡೆಯಾಗುತ್ತವೆ. ಇದರಿಂದ ಆರೋಗ್ಯಕ್ಕೆ ಹಾಕಿ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಮಣ್ಣಿ ಕಪ್​​ ಬೆಸ್ಟ್​​ ಆಯ್ಕೆ ಆಗಿದೆ.

    5)  ಮಣ್ಣಿನ ಲೋಟದಲ್ಲಿ ಚಹಾ ಕುಡಿಯುವುದರಿಂದ ದೇಹದೊಳಗಿನ ಕ್ಯಾಲ್ಸಿಯಂ ಪ್ರಮಾಣವೂ ಹೆಚ್ಚುತ್ತದೆ. ಮಣ್ಣಿನ ಲೋಟವನ್ನು ಒಂದೇ ಬಾರಿಗೆ ಬಳಸಲಾಗುತ್ತದೆ, ಇದರಿಂದಾಗಿ ಅವು ಸಂಪೂರ್ಣವಾಗಿ ಆರೋಗ್ಯಕರವಾಗಿರುತ್ತವೆ. ಯಾವುದೇ ರೀತಿಯ ಕೆಟ್ಟ ಬ್ಯಾಕ್ಟೀರಿಯಾಗಳು ದೇಹವನ್ನು ಪ್ರವೇಶಿಸುವುದಿಲ್ಲ.

    6)  ಮಣ್ಣಿ ಕಪ್​​ನಲ್ಲಿ ಚಹಾವನ್ನು ಕುಡಿಯುವುದರಿಂದ ಪರಿಸರ ಸ್ನೇಹಿ ವಿಧಾನವಾಗಿದೆ. ನಿಮ್ಮ ಕರುಳಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ ಏಕೆಂದರೆ ಇದು ಆಮ್ಲೀಯತೆಯ ಸಮಸ್ಯೆಯನ್ನು ದೂರವಿಡುತ್ತದೆ.

    ಬಿಯರ್ ವೆಜ್ / ನಾನ್ ವೆಜ್ ಎಂದು ನಿಮಗೆ ತಿಳಿದಿದೆಯೇ? ಒಂದು ಕ್ಲಿಕ್‌ನಲ್ಲಿ ಗೊಂದಲ ಪರಿಹರಿಸಿಕೊಳ್ಳಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts