ದಿನಕ್ಕೆ ಎಷ್ಟು ಕಪ್​​​ ಕಾಫಿ ಕುಡಿಯಬಹುದು? ಕೆಫೀನ್​ ಸೇವಿಸುವುದರಿಂದ ಕೊಲೆಸ್ಟ್ರಾಲ್​​​ ಮಟ್ಟ ಹೆಚ್ಚುತ್ತದೆಯೇ? ಇಲ್ಲಿದೆ ಉತ್ತರ

blank

ಬೆಂಗಳೂರು: ಹೆಚ್ಚಾಗಿ ಕೆಫೀನ್​​ ಸೇವಿಸುವ ಅಭ್ಯಾಸ ಇದ್ದರೆ ದೇಹದಲ್ಲಿ ಕೊಲೆಸ್ಟ್ರಾಲ್​​​ ಮಟ್ಟ ಏರುಪೇರಾಗುತ್ತಿದೆ ಎಂದರ್ಥ. ಬೆಳಗ್ಗೆ ಎದ್ದ ತಕ್ಷಣ ಒಂದು ಕಪ್​​ ಕಾಫಿ ನಂತರ ತಿಂಡಿ ಆದ ಮೇಲೆ ಒಂದು ಕಪ್​​​, ಊಟದ ನಂತರ ಒಂದು, ಮತ್ತೆ ಸಂಜೆ ಸ್ನ್ಯಾಕ್ಸ್ ಜತೆ​​ ಕಾಫಿ ಅಥವಾ ಟೀ ಇರಲೇಬೇಕು ಎನ್ನುವವರು ಸ್ವಲ್ಪ ಕೆಫೀನ್ ಸೇವಿಸುವ ಪ್ರಮಾಣವನ್ನು ಗಮನಿಸಬೇಕು. ಕೆಫೀನ್ ​​​ಕಾಫಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಟೀ ಮತ್ತು ಹಲವಾರು ಪಾನೀಯಗಳಲ್ಲಿ ಕೂಡ ಕೆಫೀನ್​​​ ಇರುತ್ತದೆ. ಕೆಫೀನ್​​ ಕೊಲೆಸ್ಟ್ರಾಲ್ ಮಟ್ಟವನ್ನು ಹೇಗೆ ಹೆಚ್ಚಿಸುತ್ತದೆ, ದೇಹದ ಮೇಲೆ ಯಾವ ಪರಿಣಾಮ ಬೀರುತ್ತದೆ? ಬನ್ನಿ ತಿಳಿದುಕೊಳ್ಳೋಣ.

ಕೊಲೆಸ್ಟ್ರಾಲ್ ಎಂದರೇನು?
ದೇಹದ ಎಲ್ಲಾ ಜೀವಕೋಶಗಳಲ್ಲಿ ಕಂಡುಬರುವ ಮೇಣದಂಥ ವಸ್ತು ಕೊಲೆಸ್ಟ್ರಾಲ್. ಈಸ್ಟ್ರೊಜೆನ್, ಟೆಸ್ಟೋಸ್ಟೆರಾನ್ ಮತ್ತು ವಿಟಮಿನ್ ಡಿ ನಂತಹ ಹಾರ್ಮೋನ್​ಗಳನ್ನು ತಯಾರಿಸಲು ದೇಹಕ್ಕೆ ಕೊಲೆಸ್ಟ್ರಾಲ್ ಅಗತ್ಯ. ಮೊಟ್ಟೆ, ಮಾಂಸ ಮತ್ತು ಚೀಸ್‌ನಂತಹ ಪ್ರಾಣಿ ಮೂಲಗಳಿಂದ ಬರುವ ಆಹಾರಗಳಲ್ಲಿ ಕೊಲೆಸ್ಟ್ರಾಲ್ ಇರುತ್ತದೆ. ಕೊಲೆಸ್ಟ್ರಾಲ್ ನಮಗೆ ಕೆಟ್ಟದ್ದಲ್ಲ. ಆದರೆ ಕೊಬ್ಬು, ಟ್ರಾನ್ಸ್ ಕೊಬ್ಬುಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಎಲ್​​ಡಿಎಲ್​​​ (LDL, ಕಡಿಮೆ ಸಾಂದ್ರತೆಯ ಲಿಪೊ ಪ್ರೋಟೀನ್) ನಂತಹ ರಕ್ತದ ನಿಯತಾಂಕಗಳು ಹೆಚ್ಚಾಗಬಹುದು. ಸೇವಿಸಿದರೆ ರಕ್ತದ ನಿಯತಾಂಕಗಳು ಹೆಚ್ಚಾಗಬಹುದು ಮತ್ತು ಎಚ್​​​ಡಿಎಲ್​​​ (HDL, ಹೆಚ್ಚಿನ ಸಾಂದ್ರತೆಯ ಲಿಪೊಪ್ರೋಟೀನ್) ಕಡಿಮೆಯಾಗಬಹುದು. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಕೆಫೀನ್ ನೇರವಾಗಿ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸದಿದ್ದರೂ ಪರೋಕ್ಷ ಪರಿಣಾಮಗಳನ್ನು ಉಂಟು ಮಾಡುತ್ತದೆ.

ಯಾವ ರೀತಿಯಲ್ಲಿ?
ಕೆಫೀನ್ ಒತ್ತಡವನ್ನು ಉಂಟುಮಾಡಬಹುದು. ಇದು ಹೆಚ್ಚಿದ ಕಾರ್ಟಿಸೋಲ್ ಮಟ್ಟಕ್ಕೆ ಕಾರಣವಾಗಬಹುದು. ಹೆಚ್ಚುವರಿಯಾಗಿ, ಇದು ಹೆಚ್ಚಿನ ಮಟ್ಟದ ಎಲ್‌ಡಿಎಲ್ (ಕೆಟ್ಟ) ಕೊಲೆಸ್ಟ್ರಾಲ್ ಮತ್ತು ಕಡಿಮೆ ಮಟ್ಟದ ಎಚ್‌ಡಿಎಲ್ (ಉತ್ತಮ) ಕೊಲೆಸ್ಟ್ರಾಲ್‌ಗೆ ಕಾರಣವಾಗಬಹುದು.

ಕೆಫೀನ್ ಹೊಂದಿರುವ ಪಾನೀಯಗಳನ್ನು ಸೇವಿಸುವಾಗ ಗಮನದಲ್ಲಿರಬೇಕಾದ ಅಂಶಗಳೇನು?
ನಾಲ್ಕು ವಾರಗಳಲ್ಲಿ ದಿನಕ್ಕೆ 5 ಕಪ್ ಕಾಫಿ ಕುಡಿಯುವುದರಿಂದ ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಶೇಕಡಾ 6 ರಿಂದ 8 ರಷ್ಟು ಹೆಚ್ಚಿಸಬಹುದು. ಆದ್ದರಿಂದ ದಿನಕ್ಕೆ 1-2 ಕಪ್​​​ಗೆ ಸೀಮಿತಗೊಳಿಸುವುದು ಮುಖ್ಯವಾಗಿದೆ. ಇದು ಕೆಫೀನ್​​ ಹೊಂದಿರುವ ಪಾನೀಯಗಳಿಗೂ ಅನ್ವಯಿಸುತ್ತದೆ. ಆ ಸಮಯಕ್ಕೆ ನಿದ್ದೆಯನ್ನು ಹೋಗಳಾಡಿಸಿ ಎಚ್ಚರವಾಗಿರಿಸಲು ಕೆಫೀನ್​​​ ಉಪಯೋಗಕಾರಿ. ಅದೇ ಕೆಫೀನ್​​ ಚಟವಾದರೆ ದೇಹದ ಸಮತೋಲನವನ್ನೇ ಏರುಪೇರು ಮಾಡುತ್ತದೆ. ಆದ್ದರಿಂದ ಕೆಫಿನ್​​ ಸೇವಿಸುವ ಪ್ರಮಾಣವನ್ನು ಹಿಡಿತದಲ್ಲಿ ಇಟ್ಟುಕೊಳ್ಳಬೇಕು. (ಏಜೆನ್ಸೀಸ್​​)

ಲಿಥಿಯಂ ಸ್ಥಳೀಯವಾಗಿ ಸಿಗುವುದರಿಂದ ಜನಸಾಮಾನ್ಯರಿಗಾಗುವ ಪ್ರಯೋಜನಗಳೇನು ಗೊತ್ತಾ?

 

Share This Article

ಪೂರ್ವಾಭಿಮುಖವಾಗಿ ಕುಳಿತು ಪೂಜೆ ಮಾಡುವುದೇಕೆ?; ಇಲ್ಲಿದೆ ಈ ಮಾತಿನ ಹಿಂದಿನ ಅಸಲಿ ಕಾರಣ | Health Tips

ಪೂಜೆ ಮಾಡುವಾಗ ಹೇಗೆ ನಿಯಮಗಳು ಮತ್ತು ನಿಬಂಧನೆಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಲಾಗುತ್ತದೆಯೋ ಅದೇ ರೀತಿಯಲ್ಲಿ ದಿಕ್ಕನ್ನು ಸಹ ಮನಸ್ಸಿನಲ್ಲಿಟ್ಟುಕೊಳ್ಳುವುದು…

ಊಟದ ಬಳಿಕ ಹೊಟ್ಟೆಯು ಬಲೂನ್‌ನಂತೆ ಊದಿಕೊಳ್ಳುತ್ತದೆಯೇ?; ಸಮಸ್ಯೆಗೆ ಇಲ್ಲಿದೆ ಪರಿಹಾರ | Health Tips

ಇತ್ತೀಚೆಗೆ ಜೀವನಶೈಲಿ ಮತ್ತು ಊಟದಿಂದಾಗಿ ಗ್ಯಾಸ್​​ ಸಮಸ್ಯೆಯು ತುಂಬಾ ಸಾಮಾನ್ಯವಾಗಿದೆ. ಇದು ಅನೇಕ ಕಾರಣಗಳಿಂದ ಉಂಟಾಗಬಹುದು.…

ಕೂದಲು ಉದುರುವ ಸಮಸ್ಯೆ ಪರಿಹಾರಕ್ಕೆ ರಾಮಬಾಣ ಹರಳೆಣ್ಣೆ ಹೇರ್​​ ವಾಶ್​​​; ನಿಮಗಾಗಿ ಹೆಲ್ತಿ ಮಾಹಿತಿ | Health Tips

ನಮ್ಮ ಕೂದಲನ್ನು ಸ್ವಚ್ಛವಾಗಿಡಲು ಮತ್ತು ಕೂದಲು ಉದುರುವುದನ್ನು ತಡೆಯಲು ಏನೆನೋ ಮಾಡುತ್ತೇವೆ. ನಮ್ಮ ಕೂದಲಿನ ಬೆಳವಣಿಗೆಯ…