More

    ನಂದಿನಿ ಬ್ರಾಂಡ್ ಐಸ್‌ಕ್ರೀಂಗೂ ಡಿಮ್ಯಾಂಡ್; 37 ಸಾವಿರ ಲೀಟರ್ ಐಸ್‌ಕ್ರೀಂ ಬಿಕರಿ

    ಬೆಂಗಳೂರು:
    ಬೇಸಿಗೆಯ ಬಾಯಾರಿಕೆ ನೀಗಿಸಲು ಭರ್ಜರಿಯಾಗಿ ಐಸ್ ಕ್ರೀಂ ಬಿಕರಿಯಾಗುತ್ತಿದ್ದು, ಅದರಲ್ಲೂ ನಂದಿನಿ ಬ್ರಾಂಡ್ ಐಸ್ ಕ್ರೀಂ ಮಹತ್ವದ ಸ್ಥಾನ ಪಡೆದಿದೆ.
    ನಾನಾ ಪ್ಲೇವರಿಂಗ್‌ನಲ್ಲಿ ಐಸ್ ಕ್ರೀಂ ತಯಾರು ಮಾಡಲು ಮುಂದಾದ ಕೆಎಂಎ್ಗೆ ನಿತ್ಯ ಬೇಡಿಕೆ ಹೆಚ್ಚುತ್ತಲೇ ಬಂದಿದೆ. ಈ ಬಾರಿ ಬೇಸಿಗೆಯಲ್ಲಿ ದಾಖಲೆ ಬೇಡಿಕೆ ಬಂದಿರುವುದು ವಿಶೇಷ.
    20 ಸಾವಿರ ಲೀಟರ್ ಆಜು ಬಾಜಿನಲ್ಲಿದ್ದ ಬೇಡಿಕೆ ಪ್ರಮಾಣ ಗಣನೀಯವಾಗಿ ಹೆಚ್ಚಿದ್ದು, ಪ್ರತಿ ನಿತ್ಯ ಸರಾಸರಿ 37 ಸಾವಿರ ಲೀಟರ್ ಐಸ್ ಕ್ರೀಂ ಮಾರಾಟವಾಗುತ್ತಿದೆ. ಇದರಿಂದಾಗಿ ಐಸ್ ಕ್ರೀಂ ಉತ್ಪಾದನೆಗೆ 37 ಸಾವಿರ ಲೀಟರ್ ಹಾಲು ಬಳಕೆಯಾಗುತ್ತಿರುವುದು ವಿಶೇಷ.
    ಮೊದಲು ಕೇವಲ 20 ಪ್ಲೇವರಿಂಗ್ ಐಸ್ ಕ್ರೀಂ ತಯಾರು ಮಾಡುತ್ತಿದ್ದ ಕೆಎಂಎ್ ಈಗ ಮಾವು, ಹಲಸು, ಬಾದಾಮಿ ಸೇರಿದಂತೆ ನಾನಾ ಬಗೆಯ 100ಕ್ಕೂ ಹೆಚ್ಚು ಬಗೆಯ ಐಸ್ ಕ್ರೀಂ ತಯಾರು ಮಾಡುತ್ತಿರುವುದರಿಂದ ಬೇಡಿಕೆ ಪ್ರಮಾಣವೂ ಗಣನೀಯವಾಗಿ ಹೆಚ್ಚಿಗೆಯಾಗಿದೆ.
    ಮೊನ್ನೆ ರಾಮನವಮಿ ದಿನ ಕೆಎಂಎ್ ನಂದಿನಿ ಬ್ರಾಂಡ್‌ನ ಮೊಸರು 16.50 ಲಕ್ಷ ಕೆಜಿ ಮಾರಾಟವಾಗಿದ್ದು, ಹೊಸ ದಾಖಲೆಯನ್ನು ಸೃಷ್ಟಿ ಮಾಡಿತ್ತು. ಬೇಸಿಗೆ ಪ್ರಾರಂಭವಾದ ಮೇಲೆ ಮೊಸರು ಮಾರಾಟ ಪ್ರಮಾಣವೂ 12 ಲಕ್ಷ ಕೆಜಿಗೆ ಜಿಗಿದಿದೆ.

    6 ಸಾವಿರ ಟನ್ ಪೌಡರ್‌ಗೆ ಬೇಡಿಕೆ
    ಕೆಎಂಎ್ಗೆ ಹೆಚ್ಚುವರಿಯಾಗಿ ಹಾಲು ಬಂದದ್ದನ್ನು ಪೌಡರ್ ಮಾಡಿ ಸಂಗ್ರಹ ಮಾಡಿದ್ದು, ಗೋದಾಮಿನಲ್ಲಿ 15 ಸಾವಿರ ಟನ್‌ಗೂ ಹೆಚ್ಚು ಸಂಗ್ರಹವಾಗಿತ್ತು. ಉತ್ತರ ಭಾರತದಿಂದ ಸುಮಾರು 6 ಸಾವಿರ ಟನ್ ಕೆಎಂಎ್ ಹಾಲಿನ ಪುಡಿಗೆ ಬೇಡಿಕೆ ಬಂದಿದೆ. ಏತನ್ಮಧ್ಯೆ ಮಾರುಕಟ್ಟೆಯಲ್ಲಿ ಹಾಲಿನ ಪೌಡರ್ ಬೇಡಿಕೆ ಪ್ರಮಾಣ ಹೆಚ್ಚಾಗಿದ್ದು, ಕೆಜಿ. ಪೌಡರ್‌ಗೆ 250 ರೂಗೆ ಜಿಗಿದಿದೆ.

    81.5ಲಕ್ಷ ಲೀಟರ್ ಹಾಲು
    ಬೇಸಿಗೆಯಲ್ಲಿಯೂ ಕೆಎಂಎ್ಗೆ ಪ್ರತಿ ನಿತ್ಯ 80 ಲಕ್ಷ ಲೀಟರ್ ಹಾಲು ಬರುತ್ತಿರುವುದು ವಿಶೇಷ. ಕಳೆದ ವರ್ಷ ಬೇಸಿಗೆಯಲ್ಲಿ 75 ಲಕ್ಷ ಲೀಟರ್ ಹಾಲು ಮಾತ್ರ ಬರುತ್ತಿತ್ತು. ಈ ವರ್ಷ 51 ಲಕ್ಷ ಲೀಟರ್ ಹಾಲು ಮಾರಾಟವಾಗುತ್ತಿರುವುದು ಕೂಡ ದಾಖಲೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts