More

    ಅಮಿತ್ ಷಾ ಮಾತು ಅಪಾಯದ ಪ್ರಸ್ತಾವನೆ: ರೈತ ನಾಯಕಿ ಸುನಂದಾ ಜಯರಾಂ ಆಕ್ರೋಶ

    ಮಂಡ್ಯ: ಮದ್ದೂರಿನ ಗೆಜ್ಜಲಗೆರೆಯಲ್ಲಿ ಮೆಗಾಡೇರಿ ಉದ್ಘಾಟನಾ ಸಂದರ್ಭದಲ್ಲಿ ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಷಾ ಅವರು ಗುಜರಾತ್‌ನ ಅಮುಲ್ ಮತ್ತು ಕೆ.ಎಂ.ಎ್ ವಿಲೀನದ ಬಗ್ಗೆ ಮಾತನಾಡಿರುವುದು ದೊಡ್ಡ ಅಪಾಯದ ಪ್ರಸ್ತಾವನೆ ಎಂದು ರೈತ ನಾಯಕಿ ಸುನಂದಾ ಜಯರಾಂ ತೀವ್ರವಾಗಿ ಖಂಡಿಸಿದ್ದಾರೆ.
    ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯದಲ್ಲಿ 15 ಜಿಲ್ಲಾ ಹಾಲು ಒಕ್ಕೂಟಗಳ ವ್ಯಾಪ್ತಿಯಲ್ಲಿ 13 ಸಾವಿರಕ್ಕೂ ಹೆಚ್ಚು ಹಾಲು ಉತ್ಪಾದಕರ ಸಹಕಾರ ಸಂಘಗಳಿವೆ. ಇವುಗಳಿಂದ ಒಂದು ದಿನಕ್ಕೆ 80 ರಿಂದ 90 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಇಡೀ ರಾಜ್ಯದಲ್ಲಿ ಕೋಟ್ಯಂತರ ಹಾಲು ಉತ್ಪಾದಕರು ಈ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಇದರಲ್ಲಿ ಮಹಿಳೆಯರ ಪಾಲು ಮತ್ತು ಶ್ರಮ ಅತ್ಯಧಿಕವಾಗಿದೆ ಎಂದಿದ್ದಾರೆ.
    ಕೆಎಂಎಫ್ ನಂದಿನಿ ಬ್ರ್ಯಾಂಡ್ ಈಗಾಗಲೇ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ದೇಶದ ಪ್ರಸಿದ್ಧ ನಗರಗಳಲ್ಲಿ ಕೆಎಂಎಫ್ ನಂದಿನಿ ಬ್ರ್ಯಾಂಡ್, ಅಮುಲ್ ಬ್ರ್ಯಾಂಡ್‌ಗೆ ಸರಿಸಮಾನವಾಗಿ ಮಾರುಕಟ್ಟೆಯಲ್ಲಿ ದೊಡ್ಡದಾಗಿ ಬೆಳೆದಿದೆ. ಸಚಿವರ ಕೇಂದ್ರೀಕರಣದ ಹೇಳಿಕೆ ವಿಕೇಂದ್ರೀಕರಣ ವ್ಯವಸ್ಥೆಗೆ ದೊಡ್ಡ ಪೆಟ್ಟುಕೊಡುವ ತಂತ್ರಗಾರಿಕೆಯಾಗಿದೆ ಎಂದು ಆಪಾದಿಸಿದ್ದಾರೆ.
    ಒಂದು ದೇಶ ಒಂದು ಬ್ರ್ಯಾಂಡ್ ಎಂಬ ನಿಲುವಿನ ಹಿಂದೆ ಖಾಸಗೀಕರಣದ ಹುನ್ನಾರವಿದೆ. ಹಿಂದೆಯೂ ಕೆಎಂಎಫ್ ಡೇರಿ ಉತ್ಪನ್ನಗಳನ್ನು ಅಮುಲ್ ಬ್ರ್ಯಾಂಡ್ ಮುಖಾಂತರ ಮಾರುಕಟ್ಟೆ ಮಾಡಲಾಗಿತ್ತು. ಆ ಸಮಯದಲ್ಲೇ ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಆದ್ದರಿಂದ ಕೇಂದ್ರ ಸಚಿವರ ಈ ಪ್ರಸ್ತಾವನೆಯನ್ನು ಜನರು, ಆಡಳಿತ ಮಂಡಳಿ, ರಾಜಕೀಯ ನಾಯಕರು ಈಗಲೇ ವಿರೋಧಿಸಬೇಕು ಎಂದು ಮನವಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts