More

    ವಿದ್ಯಾಥಿರ್ಗಳು ಪ್ರಚಲಿತ ವಿದ್ಯಮಾನಗಳ ಕುರಿತು ಅರಿವು ಹೊಂದಿರಬೇಕು: ಪ್ರೊ. ಎಸ್​. ವಿ ಕುಂದಗೋಳ

    ಗದಗ: ಆಧುನಿಕ ಭಾರತದಲ್ಲಿ ಅನೇಕ ವಿಷಯಗಳ ತೀವ್ರ ಬೆಳವಣಿಗೆ ಕಂಡು ಬರುತ್ತೀವೆ. ಅವುಗಳ ಬಗ್ಗೆ ವಿದ್ಯಾಥಿರ್ಗಳು ಸದಾ ಜಾಗೃತರಾಗಬೇಕು ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ.ಎಸ್​. ವಿ. ಕುಂದಗೋಳ ಹೇಳಿದರು.
    ನಗರದ ಕೆಎಲ್​ಇ ಸಂಸ್ಥೆಯಲ್ಲಿ ಇತ್ತೀಚೆಗೆ ಜರುಗಿದ “ಸರ್ಕಾರ ೂಷಿಸಿರುವ ಉಚಿತ ಕೊಡುಗೆಗಳು ನಮ್ಮ ಆಥಿರ್ಕತೆಗೆ ವರವೋ?ಶಾಪವೋ?ಎಂಬ ವಿಷಯದ ಕುರಿತು ರಾಜ್ಯ ಮಟ್ಟದ ಚರ್ಚಾ ಸ್ಪರ್ಧೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದ ಅವರು, ಪ್ರತಿನಿತ್ಯದ ವಿದ್ಯಾಮಾನಗಳ ಬಗ್ಗೆ ಆಳವಾದ ಅಧ್ಯಯನ ಮಾಡಿ ಅನುಕೂಲತೆಗಳು ಹಾಗೂ ಅನಾನುಕೂಲತೆಗಳನ್ನು ಅರಿತುಕೊಂಡು ಸಮಾಜದಲ್ಲಿ ಅರಿವನ್ನು ಮೂಡಿಸಬೇಕು ಎಂದರು.
    ಡಾ. ಎ.ಕೆ.ಮಠ ಕಾರ್ಯಕ್ರದ ದ್ಘಾಟಿಸಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಸ್ಪರ್ಧಾತ್ಮಕ ಜಗತ್ತಿಗೆ ಇಂತಹ ಸ್ಪರ್ಧೆಗಳು ಅನಿವಾರ್ಯವಾಗಿವೆ. ವಿದ್ಯಾಥಿರ್ಗಳು ಅವುಗಳಲ್ಲಿ ಭಾಗವಹಿಸಿ ತಮ್ಮ ವಾದಗಳನ್ನು ಮಂಡಿಸುವದರಿಂದ ಅವರ ಕ್ರೀಯಾಶೀಲ ಬೆಳವಣಿಗೆಯು ವೃದ್ದಿಯಾಗುತ್ತದೆ ಎಂದರು.
    ಸ್ಪರ್ಧೆಯಲ್ಲಿ ನಿರ್ಣಾಯಕರಾಗಿ ಸ್ಥಳಿಯ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದ ಅರ್ಥಶಾಸ್ತ್ರ ಉಪನ್ಯಾಸಕ ಬಿ.ಎಸ್​.ಮಲ್ಲಾಪು ಭಾಗವಹಿಸಿ ಮಾತನಾಡಿ. ವಿದ್ಯಾಥಿರ್ಗಳು ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸಲು ಸಾಕಷ್ಟು ತಯಾರಿಮಾಡಿಕೊಂಡು ತಮ್ಮ ವಾದಕ್ಕೆ ಬದ್ದವಾಗಿರಬೇಕೆಂದು ಸಲಹೆ ನೀಡಿದರು.
    ಉಪನ್ಯಾಸಕಿ ಜಯಶ್ರೀ ಅಂಗಡಿ, ಪದ್ಮಾವತಿ ಜಿ ಮಾತನಾಡಿದರು. ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಪಿಯುಸಿ ಹಾಗೂ ಪದವಿ ವಿದ್ಯಾಥಿರ್ಗಳು ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ಹುಬ್ಬಳ್ಳಿಯ ಜಿ. ಕೆ. ಕಾಲೇಜಿನ ಜುಹಾ ಆಮ್ರೀನ ಪ್ರಥಮ, ಗದಗ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಿದ್ದನಗೌಡ ಪಾಟೀಲ ದ್ವೀತಿಯ ಹಾಗೂ ಎ ಎಸ್​ ಎಸ್​ ಕಾಲೇಜಿನ ನಿಧಿ ತೃತೀಯ ಸ್ಥಾನ ಪಡೆದರು.
    ಪ್ರೊ. ಎಸ್​ ವಿ ಕುಂದಗೋಳ ಅವರನ್ನು ಸನ್ಮಾನಿಸಲಾಯಿತು. ಐ. ಬಿ. ಪಾಟೀಲ, ಶ್ವೇತ ರಾಚಯ್ಯನವರ, ಟಿ. ಎಸ್​. ಗೌಡರ, ಎಸ್​. ಸಿ. ನಿಲೂಗಲ್​ ಹಲವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts