ನವದೆಹಲಿ: ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ತನ್ನ ತಯಾರಿಯನ್ನು ಮುಂದುವರೆಸಿರುವ ಟೀಂ ಇಂಡಿಯಾ ಬ್ಯಾಟರ್ ಕೆಎಲ್ ರಾಹುಲ್ ಮುಂಬೈನಲ್ಲಿ ತಾಲೀಮು ನಡೆಸುತ್ತಿರುವುದು ಕಂಡುಬಂದಿದೆ. ಕೆಎಲ್ ರಾಹುಲ್ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಭ್ಯಾಸ ಮಾಡುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಅಭ್ಯಾಸದ ನಡುವಿನಲ್ಲಿ ರಾಹುಲ್ಗೆ ವಾಂತಿಯಾಗಿದೆ.
ರಾಹುಲ್ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ತಯಾರಿ ನಡೆಸುತ್ತಿದ್ದಾರೆ. ಒಡಿಐ ಸರಣಿಯಲ್ಲಿ ಟೀಮ್ ಇಂಡಿಯಾದ ನಾಯಕತ್ವದ ಜವಾಬ್ದಾರಿ ಕೆಎಲ್ ರಾಹುಲ್ ಅವರ ಮೇಲಿದೆ. ಭಾರತದಲ್ಲಿರುವ ರಾಹುಲ್ ಮೈದಾನದಲ್ಲಿ ಬೆವರು ಹರಿಸಿ ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ.
ಇದೀಗ ರಾಹುಲ್ ಅಭ್ಯಾಸದ ವೇಳೆ ವಾಂತಿ ಮಾಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಕೆಎಲ್ ರಾಹುಲ್ ಆರೋಗ್ಯ ಈಗ ಹೇಗಿದೆ ಎಂಬ ಬಗ್ಗೆ ಮಾಹಿತಿಯಿಲ್ಲ. ಆದರೆ, ವಿಡಿಯೋದಲ್ಲಿ ಅವರು ಗುಣಮುಖರಾದಂತೆ ಕಾಣುತ್ತಿದೆ.
ಈ ಅಭ್ಯಾಸದ ಸಮಯದಲ್ಲಿ, ಭಾರತ ತಂಡದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಸಹ ಅವರೊಂದಿಗೆ ಇದ್ದರು. ಈ ವಿಡಿಯೋದಲ್ಲಿ ಬುಮ್ರಾ- ರಾಹುಲ್ ಸಂಭಾಷಣೆ ಕೂಡ ಇದೆ. ಸದ್ಯದಲ್ಲೇ ಭಾರತ ಏಕದಿನ ತಂಡ ಆಫ್ರಿಕಾ ನಾಡಿಗೆ ಪ್ರಯಾಣ ಬೆಳೆಸಲಿದೆ.