More

    ಗ್ಲೇನ್​ ಮ್ಯಾಕ್ಸ್​ವೆಲ್ ಅಬ್ಬರದ ಬ್ಯಾಟಿಂಗ್​ನಿಂದ ಟ್ರೋಲ್​ ಆದ ಕೆ.ಎಲ್​. ರಾಹುಲ್..!​

    ನವದೆಹಲಿ: ಶುಕ್ರವಾರ ಸಿಡ್ನಿಯಲ್ಲಿ ನಡೆದ ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಪ್ರವಾಸಿ ಭಾರತ ಹೀನಾಯವಾಗಿ ಸೋಲುವ ಮೂಲಕ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅದರಲ್ಲೂ ಮ್ಯಾಕ್ಸ್​ವೆಲ್​ ಅಬ್ಬರದ ಬ್ಯಾಟಿಂಗ್​ನಿಂದಾಗಿ ಕೆ.ಎಲ್​. ರಾಹುಲ್​ ಟ್ರೋಲ್​ಗೆ ಗುರಿಯಾಗಿದ್ದಾರೆ.

    ಮೊದಲು ಬ್ಯಾಟ್​ ಮಾಡಿದ ಆಸಿಸ್​ ಪಡೆ ಆ್ಯರೂನ್​ ಫಿಂಚ್​ (114) ಮತ್ತು ಸ್ಟೀವ್​ ಸ್ಮಿತ್​ (105) ಆಕರ್ಷಕ ಶತಕದಿಂದ ಬೃಹತ್​ ಮೊತ್ತ ಕಲೆಹಾಕಿತು. ಆದರೆ, ಇಬ್ಬರ ಆಟಕ್ಕಿಂತ ಇದೀಗ ಮ್ಯಾಕ್ಸ್​ವೆಲ್​ ಸ್ಫೋಟಕ ಆಟವು ಭಾರತೀಯ ಮತ್ತು ಐಪಿಎಲ್​ ಅಭಿಮಾನಿಗಳ ಆಸಕ್ತಿಗೆ ಕಾರಣವಾಗಿದೆ. ಮ್ಯಾಕ್ಸ್​ವೆಲ್ (45 ರನ್​, 19 ಎಸೆತ, 3 ಸಿಕ್ಸರ್​, 5 ಬೌಂಡರಿ)​ ಆಟದಿಂದಾಗಿ ರಾಹುಲ್​ ಟ್ರೋಲ್​ ಆಗಿದ್ದಾರೆ.

    ಅರೆ ಮ್ಯಾಕ್ಸ್​ವೆಲ್​ ಆಡಿದ್ರೆ ರಾಹುಲ್​ ಯಾಕೆ ಟ್ರೋಲ್​ ಆಗಬೇಕು ಎಂಬ ಪ್ರಶ್ನೆ ಮೂಡುವುದು ಸಹಜ. ಅದಕ್ಕೆ ಉತ್ತರ ಮುಂದಿದೆ. ಏನೆಂದರೆ, ಇತ್ತೀಚೆಗಷ್ಟೇ ಮುಕ್ತಾಯವಾದ ಐಪಿಎಲ್​ 13ನೇ ಆವೃತ್ತಿಯಲ್ಲಿ ರಾಹುಲ್​ ನಾಯಕತ್ವದ ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡದ ಪರ ಆಡಿದ ಮ್ಯಾಕ್ಸ್​ವೆಲ್​ 13 ಪಂದ್ಯಗಳಿಂದ ಕೇವಲ 108 ರನ್​ ಕಲೆಹಾಕಿದ್ದರು.

    ಇದನ್ನೂ ಓದಿ: ಕರೊನಾ​ ಹುಟ್ಟಿದ್ದು ಭಾರತದಲ್ಲೇ! ಗಂಭೀರ ಆರೋಪ ಮಾಡಿ ಚೀನಾ ಕೊಟ್ಟ ಶಾಕಿಂಗ್​ ಕಾರಣ ಹೀಗಿದೆ..!

    ವಿಶೇಷವೆಂದರೆ ಐಪಿಎಲ್​ ಹರಾಜಿನಲ್ಲಿ ಬರೋಬ್ಬರಿ 10 ಕೋಟಿ ರೂಪಾಯಿಗೆ ಮ್ಯಾಕ್ಸ್​ವೆಲ್​ ಅವರನ್ನು ಪಂಜಾಬ್​ ತಂಡ ಖರೀದಿಸಿತ್ತು. ಆದರೆ, ಐಪಿಎಲ್​ನ ಪ್ರತಿಯೊಂದು ಪಂದ್ಯದಲ್ಲೂ ಮ್ಯಾಕ್ಸ್​ವೆಲ್​ ತಂಡಕ್ಕೆ ನೆರವಾಗದೇ ಕಳಪಡೆ ಪ್ರದರ್ಶನ ತೋರಿದರು.

    ನಿನ್ನೆ ಪಡೆದ ಪಂದ್ಯದಲ್ಲಿ ಮ್ಯಾಕ್ಸ್​ವೆಲ್​ ಅಬ್ಬರಿಸುತ್ತಿದ್ದರೆ, ಅತ್ತ ಕೀಪಿಂಗ್​ ಮಾಡುತ್ತಿದ್ದ ರಾಹುಲ್ ಮ್ಯಾಕ್ಸಿ ಅಬ್ಬರ ನೋಡುತ್ತಿದ್ದರು. ಇದೇ ವಿಚಾರವನ್ನು ನೆಟ್ಟಿಗರು ಟ್ರೋಲ್​ ಮಾಡುತ್ತಿದ್ದು, ಮ್ಯಾಕ್ಸಿ ಆಟ ನೋಡಿದ ರಾಹುಲ್​ ಮನಸ್ಸಿನಲ್ಲಿ ಏನಿರಬಹುದು ಎಂಬುದನ್ನು ಮೀಮ್ಸ್​ ಮೂಲಕ ವ್ಯಂಗ್ಯವಾಡುತ್ತಿದ್ದಾರೆ.

    ಪಂದ್ಯದ ಫಲಿತಾಂಶ
    ಕರೊನಾ ಕಾಲದ ಮೊದಲ ಅಂತಾರಾಷ್ಟ್ರೀಯ ಕದನದಲ್ಲೇ ಟೀಮ್ ಇಂಡಿಯಾ ಮುಗ್ಗರಿಸಿದೆ. ಆತಿಥೇಯ ಆಸ್ಟ್ರೇಲಿಯಾ ತಂಡದ ತೋರಿದ ಸರ್ವಾಂಗೀಣ ನಿರ್ವಹಣೆ ಎದುರು ಮಂಕಾದ ವಿರಾಟ್ ಕೊಹ್ಲಿ ಬಳಗ 66 ರನ್‌ಗಳಿಂದ ಶರಣಾಯಿತು. ಇದರೊಂದಿಗೆ ಭಾರತ ತಂಡ ಮೂರು ಪಂದ್ಯಗಳ ಸರಣಿಯಲ್ಲಿ 0-1 ರಿಂದ ಹಿನ್ನಡೆ ಸಾಧಿಸಿತು. ಉಭಯ ತಂಡಗಳ ನಡುವಿನ 2ನೇ ಏಕದಿನ ಭಾನುವಾರ ಸಿಡ್ನಿ ಮೈದಾನದಲ್ಲೇ ನಡೆಯಲಿದೆ. ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಶುಕ್ರವಾರ ನಡೆದ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ, ನಾಯಕ ಆರನ್ ಫಿಂಚ್ (114ರನ್, 124 ಎಸೆತ, 9 ಬೌಂಡರಿ, 2 ಸಿಕ್ಸರ್) ಹಾಗೂ ಸ್ಟೀವನ್ ಸ್ಮಿತ್ (105ರನ್, 66 ಎಸೆತ, 11 ಬೌಂಡರಿ, 4 ಸಿಕ್ಸರ್) ಜೋಡಿಯ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ 6 ವಿಕೆಟ್ 374 ರನ್ ಪೇರಿಸಿತು. ಪ್ರತಿಯಾಗಿ ಭಾರತ ತಂಡ ಹಾರ್ದಿಕ್ ಪಾಂಡ್ಯ (90 ರನ್, 76 ಎಸೆತ, 7 ಬೌಂಡರಿ, 4 ಸಿಕ್ಸರ್) ಏಕಾಂಗಿ ನಿರ್ವಹಣೆ ನಡುವೆಯೂ 8 ವಿಕೆಟ್‌ಗೆ 308 ರನ್‌ಗಳಿಸಲಷ್ಟೇ ಶಕ್ತವಾಯಿತು. ​

    ಮೊದಲ ಪಂದ್ಯದಲ್ಲೇ ಮುಗ್ಗರಿಸಿದ ಭಾರತ, ಹಾರ್ದಿಕ್ ಪಾಂಡ್ಯ ಹೋರಾಟ ವ್ಯರ್ಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts