More

    ಕರೊನಾ​ ಹುಟ್ಟಿದ್ದು ಭಾರತದಲ್ಲೇ! ಗಂಭೀರ ಆರೋಪ ಮಾಡಿ ಚೀನಾ ಕೊಟ್ಟ ಶಾಕಿಂಗ್​ ಕಾರಣ ಹೀಗಿದೆ..!

    ಬೀಜಿಂಗ್​: ಇಡೀ ಜಗತ್ತನ್ನೇ ಕಾಡುತ್ತಿರುವ ಮಹಾಮಾರಿ ಕರೊನಾ ವೈರಸ್​ ಹುಟ್ಟಿನ ಬಗ್ಗೆ ಆರೋಪ-ಪ್ರತ್ಯಾರೋಪಗಳ ಸರಣಿ ಮುಂದುವರಿದಿದೆ. ಈವರೆಗೂ ಕರೊನಾ ತವರು ಚೀನಾ ಎಂದೇ ಎಲ್ಲರೂ ನಂಬಿದ್ದಾರೆ. ಅದಕ್ಕೆ ಕಾರಣ ವೈರಸ್​ ಮೊದಲ ಬಾರಿಗೆ ಕಾಣಿಸಿಕೊಂಡಿದ್ದೇ ಅಲ್ಲಿ. ಆದರೆ, ಚೀನಾ ಮಾತ್ರ ಕರೊನಾ ಹುಟ್ಟಿದ್ದು ನಮ್ಮಲ್ಲಲ್ಲ ಎಂದು ಹೇಳುತ್ತಲೇ ಬರುತ್ತಿದೆ. ಅಲ್ಲದೆ, ಈ ಹಿಂದೆ ಅಮೆರಿಕ ವಿರುದ್ಧ ದೂರಿದ್ದ ಚೀನಾ ಇದೀಗ ಭಾರತದತ್ತ ಬೊಟ್ಟು ಮಾಡಿದೆ.

    ಹೌದು, ಚೀನಾದ ಸಂಶೋಧಕರು ಕರೊನಾ ವೈರಸ್​ ಹುಟ್ಟಿದ್ದು ಭಾರತದಲ್ಲಿ ಎಂದು ಹೊಸ ವಾದ ಮಂಡಿಸಿದ್ದಾರೆ. ವೈರಸ್​ ನಮ್ಮ ಗಡಿಯಿಂದ ಆಚೆಯೇ ಹುಟ್ಟಿ ಬಂದಿದೆ ಎಂದು ಚೀನಾ ಹೊಸ ವರಸೆ ತೆಗೆದಿದೆ.

    ಚೈನೀಸ್ ಅಕಾಡೆಮಿ ಆಫ್ ಸೈನ್ಸಸ್​ನ ಒಂದು ತಂಡದ ವಾದದ ಪ್ರಕಾರ 2019ರ ಬೇಸಿಗೆ ಕಾಲದಲ್ಲಿ ವೈರಸ್​ ಭಾರತದಲ್ಲಿ ಹುಟ್ಟಿದೆ. ಕಲುಷಿತ ನೀರಿನ ಮೂಲಕ ಪ್ರಾಣಿಗಳಿಂದ ಮಾನವನಿಗೆ ಹರಡಿದೆ. ಬಳಿಕ ವುಹಾನ್​ಗೆ ವ್ಯಕ್ತಿಯೊಬ್ಬರ ಪ್ರಯಾಣದ ಮೂಲಕ ಹರಡಿದ್ದು, ಅದನ್ನು ಮೊದಲಿಗೆ ಪತ್ತೆಹಚ್ಚಲಾಯಿತು ಎಂದಿದ್ದಾರೆ.

    ಆದರೆ, ಇದನ್ನು ಸ್ಕಾಟ್​ಲೆಂಡ್​ನ ಗ್ಲಾಸ್ಗೋ ಯೂನಿವರ್ಸಿಟಿಯ ಪರಿಣಿತ ಸಂಶೋಧಕ ಡೇವಿಡ್​ ರಾಬರ್ಟ್​ಸನ್​ ಅಲ್ಲಗೆಳೆದಿದ್ದಾರೆ. ಸಂಶೋಧನೆ ದೋಷಪೂರಿತವಾಗಿದೆ ಎಂದಿರುವ ಡೇವಿಡ್​, ಇದು ಕರೊನಾ ವೈರಸ್ ಬಗೆಗಿನ ನಮ್ಮ ತಿಳುವಳಿಕೆಗೆ ಏನನ್ನೂ ಸೇರಿಸುವುದಿಲ್ಲ ಎಂದು ತೀರ್ಮಾನಿಸಿದ್ದಾರೆ.

    ಇದನ್ನೂ ಓದಿ: ಸಂತೋಷ್​ ಆತ್ಮಹತ್ಯೆ ಯತ್ನಕ್ಕೆ ರಹಸ್ಯ ವಿಡಿಯೋ ಕಾರಣ! ಹೊಸ ಬಾಂಬ್​ ಸಿಡಿಸಿದ ಡಿಕೆಶಿ

    ಚೀನಾ ಆರೋಪ ಇದೇ ಮೊದಲೇನಲ್ಲ. ಈ ಮುಂಚೆ ಅಮೆರಿಕ ವಿರುದ್ಧ ಬೊಟ್ಟು ಮಾಡಿದ್ದ ಚೀನಾ, ಅಮೆರಿಕ, ಯೋಧರ ಮೂಲಕ ಕರೊನಾ ವೈರಸ್​ ಅನ್ನು ಚೀನಾ ನೆಲಕ್ಕೆ ತಂದುಬಿಟ್ಟಿದೆ ಎಂದು ಗಂಭೀರ ಆರೋಪ ಮಾಡಿತ್ತು. ಬಳಿಕ ಇಟಲಿ ವಿರುದ್ಧವೂ ದೋಷಾರೋಪ ಮಾಡಿತ್ತು. ಆದರೆ, ತನ್ನ ಆರೋಪಕ್ಕೆ ಯಾವುದೇ ಸಾಕ್ಷಿಯನ್ನು ಸಹ ಚೀನಾ ನೀಡಿಲ್ಲ.

    ಇನ್ನು ಚೀನಾ ಮತ್ತು ಭಾರತ ನಡುವೆ ಗಡಿ ವಿವಾದ ಉಲ್ಬಣಗೊಂಡಿದ್ದು, ಚೀನಾದ ಪ್ರಮುಖ ಆ್ಯಪ್​ಗಳನ್ನು ಭಾರತ ರದ್ದು ಮಾಡಿದೆ. ಅಲ್ಲದೆ, ವಿದೇಶಿ ನೀತಿಯಲ್ಲೂ ಕೆಲ ಬದಲಾವಣೆ ಮಾಡುವ ಮೂಲಕ ಚೀನಾ, ಭಾರತ ತಿರುಗೇಟು ನೀಡುತ್ತಿದ್ದು, ಇದರ ನಡುವೆಯೂ ಆರೋಪ ಮಾಡಿರುವುದು ದ್ವೇಷವಿರಬಹುದಾ ಎಂಬ ಶಂಕೆ ಕಾಡುತ್ತಿದೆ. (ಏಜೆನ್ಸೀಸ್​​)

    ಸೋಲೊಪ್ಪುವುದು ಕಷ್ಟ ಎಂದ ಟ್ರಂಪ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts