More

    ರಾಯಲ್ಸ್ ಎದುರು ಭರ್ಜರಿ ಜಯ ದಾಖಲಿಸಿದ ಕೆಕೆಆರ್, ಪ್ಲೇಆಫ್ ಹಂತಕ್ಕೆ ಮತ್ತಷ್ಟು ಹತ್ತಿರ

    ಶಾರ್ಜಾ: ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗಗಳಲ್ಲಿ ಪ್ರಭುತ್ವ ಸಾಧಿಸಿದ ಕೋಲ್ಕತ ನೈಟ್‌ರೈಡರ್ಸ್‌ ತಂಡ ಐಪಿಎಲ್-14ರ ತನ್ನ ಕಡೇ ಹಾಗೂ ನಿರ್ಣಾಯಕ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು 86 ರನ್‌ಗಳಿಂದ ಮಣಿಸುವ ಮೂಲಕ ಪ್ಲೇಆಫ್ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿತು. ಲೀಗ್‌ನಲ್ಲಿ 7ನೇ ಗೆಲುವು ದಾಖಲಿಸಿದ ಇವೊಯಿನ್ ಮಾರ್ಗನ್ ಪಡೆ ಉತ್ತಮ ರನ್‌ರೇಟ್‌ನೊಂದಿಗೆ 4ನೇ ಸ್ಥಾನ ಭದ್ರಪಡಿಸಿಕೊಂಡಿತು.

    ಶಾರ್ಜಾ ಸ್ಟೇಡಿಯಂನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡ, ಆರಂಭಿಕ ಬ್ಯಾಟರ್‌ಗಳಾದ ಶುಭಮಾನ್ ಗಿಲ್ (56ರನ್, 44 ಎಸೆತ, 4 ಬೌಂಡರಿ, 2 ಸಿಕ್ಸರ್) ಹಾಗೂ ವೆಂಕಟೇಶ್ ಅಯ್ಯರ್ (38 ರನ್, 35 ಎಸೆತ, 3 ಬೌಂಡರಿ, 2 ಸಿಕ್ಸರ್) ಹಾಕಿಕೊಟ್ಟ ಭದ್ರ ಬುನಾದಿಯ ಲವಾಗಿ 4 ವಿಕೆಟ್‌ಗೆ 171 ರನ್ ಪೇರಿಸಿತು. ಪ್ರತಿಯಾಗಿ ರಾಯಲ್ಸ್ ತಂಡ, ಯುವ ವೇಗಿ ಶಿವಂ ಮಾವಿ (21ಕ್ಕೆ 4) ಹಾಗೂ ಲಾಕಿ ಫರ್ಗ್ಯುಸನ್ (18ಕ್ಕೆ 3) ಮಾರಕ ದಾಳಿಗೆ ನಲುಗಿ 16.1 ಓವರ್‌ಗಳಲ್ಲಿ 85 ರನ್‌ಗಳಿಗೆ ಸರ್ವಪತನ ಕಂಡಿತು.

    ಕೆಕೆಆರ್: 4 ವಿಕೆಟ್‌ಗೆ 171 (ಶುಭಮಾನ್ ಗಿಲ್ 56, ವೆಂಕಟೇಶ್ ಅಯ್ಯರ್ 38, ರಾಹುಲ್ ತ್ರಿಪಾಠಿ 21, ಕ್ರಿಸ್ ಮಾರಿಸ್ 28ಕ್ಕೆ 1, ಚೇತನ್ ಸಕಾರಿಯಾ 23ಕ್ಕೆ 1, ರಾಹುಲ್ ತೆವಾಟಿಯಾ 11ಕ್ಕೆ 1, ಗ್ಲೆನ್ ಫಿಲಿಪ್ಸ್ 17ಕ್ಕೆ 1), ರಾಜಸ್ಥಾನ: 16.1 ಓವರ್‌ಗಳಲ್ಲಿ 85 (ಶಿವಂ ದುಬೆ 18, ರಾಹುಲ್ ತೆವಾಟಿಯಾ 44, ಶಿವಂ ಮಾವಿ 21ಕ್ಕೆ 4, ಲಾಕಿ ಫರ್ಗ್ಯುಸನ್ 18ಕ್ಕೆ 3).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts