ಬೆಂಗಳೂರು: ಕಂದಾಯ ಸಚಿವ ಆರ್. ಅಶೋಕ್ ತಮ್ಮ ಮನೆ ಬಳಿ ಗಾಳಿಪಟದ ದಾರಕ್ಕೆ ಸಿಲುಕಿ ನಲುಗುತ್ತಿದ್ದ ಪಾರಿವಾಳ ರಕ್ಷಣೆ ಮಾಡಿದರು.
ಪಾರಿವಾಳದ ಕಾಲುಗಳಿಗೆ ದಾರ ಸುತ್ತಿ ಗಾಯವಾಗಿತ್ತು. ಇದರಿಂದ ಪಾರಿವಾಳ ಹಾರಲಾರದೆ ಒದ್ದಾಡುತ್ತಿತ್ತು. ಇದನ್ನು ಗಮನಿಸಿದ ಸಚಿವರು ಕೂಡಲೇ ಧಾವಿಸಿ ದಾರದಿಂದ ಪಾರಿವಾಳವನ್ನು ಮುಕ್ತಗೊಳಿಸಿದರು. ಅಲ್ಲದೆ ಗಾಯವಾಗಿದ್ದ ಕಾಲುಗಳಿಗೆ ಔಷಧಿ ಹಚ್ಚಿದರು.
ಈ ವಿಡಿಯೋವನ್ನು ಅವರು ಸಾಮಾಜಿಕ ಜಾಲ ತಾಣದಲ್ಲಿ ಹಂಚಿಕೆ ಮಾಡಿದ್ದಾರೆ. ನಮ್ಮ ಖುಷಿಗೆ ಗಾಳಿಪಟ ಹಾರಿಸುತ್ತೇವೆ. ಆದರೆ ಅದೇ ಗಾಳಿಪಟದ ದಾರ, ಬಾನೆತ್ತರಕ್ಕೆ ಹಾರುವ ಹಕ್ಕಿಗಳ ರೆಕ್ಕೆ ಕತ್ತರಿಸಿ ಹಾರದಂತೆ ಮಾಡುತ್ತದೆ.
ನಮ್ಮ ಖುಷಿ ಇನ್ನೊಂದು ಜೀವಿಯ ನೋವಿಗೆ ಕಾರಣವಾಗದಿರಲಿ. ಎಂದು ಸಚಿವರು ಹೇಳಿದ್ದಾರೆ.
https://www.instagram.com/p/B_XcJqYHUZE/?igshid=nztjnq1omvmc