More

    ಕಿಸಾನ್​ ಕಾರ್ಡ್​ ಹೊಂದಿರುವ ರೈತರಿಗೆ ಹೆಚ್ಚುವರಿ 10 ಸಾವಿರ ರೂ. ಸಹಾಯಧನ!

    ಬೆಂಗಳೂರು: ರಾಜ್ಯ ಬಜೆಟ್‌ನಲ್ಲಿ ಕೃಷಿಕರಿಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅನೇಕ ಕೊಡುಗೆಗಳನ್ನು ನೀಡಿದ್ದು ಈ ವರ್ಷದಿಂದ ರೈತರಿಗೆ ಕಿಸಾನ್ ಕಾರ್ಡ್ ಹೊಂದಿರುವ ರೈತರಿಗೆ ಹೆಚ್ಚುವರಿ 10 ಸಾವಿರ ರೂ. ಸಹಾಯಧನ ನೀಡುವ ಬಗ್ಗೆ ಘೋಷಿಸಲಾಗಿದೆ. 

    ಇನ್ನು ಪ್ರಮುಖವಾಗಿ, ಕಿಸಾನ್ ಕಾರ್ಡ್ ಹೊಂದಿರುವ ರೈತರಿಗೆ ಭೂಸಿರಿ ಯೋಜನೆ ಘೋಷಿಸಲಾಗಿದ್ದು ರೈತರಿಗೆ 10 ಸಾವಿರ ಸಹಾಯಧನ ನೀಡುವ ಬಗ್ಗೆ ಉಲ್ಲೇಖಿಸಲಾಗಿದೆ. ಇದರಿಂದ, ತುರ್ತು ಸಂದರ್ಭದಲ್ಲಿ ರೈತರಿಗೆ ಬೀಜ, ಗೊಬ್ಬರ ಖರೀದಿಗೆ ಅನುಕೂಲವಾಗಲಿದೆ.

    ಈ ಬಾರಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಭತ್ತ, ರಾಗಿ, ಜೋಳ, ಹೆಸರು ಕಾಳು ಮತ್ತು ತೊಗರಿ ಮುಂತಾದ ಆಹಾರ ಧಾನ್ಯಗಳ ಖರೀದಿಗಾಗಿ 7 6,650 ಕೋಟಿ ಒದಗಿಸಲಾಗಿದೆ. ರಾಜ್ಯದ 56 ಲಕ್ಷ ಸಣ್ಣ ಮತ್ತು ಅತಿ ಸಣ್ಣ ರೈತರ ಕುಟುಂಬಗಳಿಗೆ 7180 ಕೋಟಿ ವೆಚ್ಚದಲ್ಲಿ ಜೀವನ್ ಜ್ಯೋತಿ ವಿಮಾ ಯೋಜನೆಯಡಿ ಭದ್ರತೆ ನೀಡಲಾಗುವುದು.

    ಕಳೆದ ವರ್ಷ ಘೋಷಿಸಿದ ಡೀಸೆಲ್ ಸಬ್ಸಿಡಿ ನೀಡುವ ರೈತ ಶಕ್ತಿ ಯೋಜನೆಗೆ 400 ಕೋಟಿ ಅನುದಾನ ನೀಡುವ ಬಗ್ಗೆಯೂ ಉಲ್ಲೇಖಿಸಲಾಗಿದೆ. ಕೃಷಿಯ ಯಾಂತ್ರೀಕರಣವನ್ನು ಉತ್ತೇಜಿಸಲು 2,037 ಕೋಟಿ ರೂ. ಮೀಸಲು ಇರಿಸಲು ಯೋಜಿಸಲಾಗಿದ್ದು ಬೆಳೆಗಳ ಸಂಸ್ಕರಣೆ, ಶೇಖರಣೆಗಾಗಿ 10.45 ಲಕ್ಷ ಫಲಾನುಭವಿಗಳಿಗೆ 7 175 ಕೋಟಿ ನೆರವು ನೀಡಲಾಗಿದೆ. ತೋಟಗಾರಿಕೆ ಹಾಗೂ ರೇಷ್ಮೆ ಕೃಷಿಗೆ ಪ್ರೋತ್ಸಾಹ ನೀಡುವ ಉದ್ದೇಶಕ್ಕಾಗಿ 7 5,245 ಕೋಟಿ ವೆಚ್ಚ ಮಾಡಲಾಗಿದೆ.

    ಇನ್ನು ರೈತ ವಿದ್ಯಾನಿಧಿ ಯೋಜನೆಯಡಿಯಲ್ಲಿ 10.32 ಲಕ್ಷ ವಿದ್ಯಾರ್ಥಿಗಳಿಗೆ 7 125 ಕೋಟಿ ನೀಡಲಾಗಿದ್ದು ಕೃಷಿ ಮತ್ತು ತೋಟಗಾರಿಕೆಯಲ್ಲಿ ಹನಿ ನೀರಾವರಿಗಾಗಿ 7 2,900 ಕೋಟಿಗೆ ಮಾರುಕಟ್ಟೆ ನೆರವು ನೀಡಲಾಗಿದೆ.

    ಮುಖ್ಯಮಂತ್ರಿ ವಿದ್ಯಾಶಕ್ತಿ ಯೋಜನೆಯನ್ನೂ ಆರಂಭಿಸಲಾಗಿದ್ದು ಸರ್ಕಾರಿ ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳಿಗೆ ದಾಖಲಾಗುವವರಿಗೆ ಶುಲ್ಕ ವಿನಾಯಿತಿ ನೀಡುವ ಬಗ್ಗೆಯೂ ಉಲ್ಲೇಖಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts