More

  ‘ಲಾಲ್ ಸಿಂಗ್ ಚಡ್ಡಾ’ ಪ್ಲಾಫ್​..ಅಮೀರ್​ ಮೇಲೆ ಪ್ರಭಾವ ಬೀರಿತು: ಕಿರಣ್ ರಾವ್

  ಮುಂಬೈ: ಬಾಲಿವುಡ್ ಸ್ಟಾರ್ ಅಮೀರ್ ಖಾನ್ ಅವರ ‘ಲಾಲ್ ಸಿಂಗ್ ಚಡ್ಡಾ’ ವೈಫಲ್ಯದ ಬಗ್ಗೆ ನಿರ್ದೇಶಕಿ ಹಾಗೂ ಅವರ ಮಾಜಿ ಪತ್ನಿ ಕಿರಣ್ ರಾವ್ 4 ವರ್ಷದ ಬಳಿಕ ಮನಬಿಚ್ಚಿ ಮಾತನಾಡಿದ್ದಾರೆ.

  ಇದನ್ನೂ ಓದಿ: ಏಪ್ರಿಲ್​ನಿಂದ ಫಾಸ್ಟ್​ ಟ್ಯಾಗ್ ಬಂದ್​..! ಕಾರಣ ಇದೇ ನೋಡಿ..

  ‘ಸಿನಿಮಾ ನಿರಾಶಾದಾಯಕವಾಗಿತ್ತು. ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದ ಅಮೀರ್​ ಖಾನ್​ ಅವರನ್ನು ಚಿತ್ರ ತುಂಬಾ ಆಳವಾಗಿ ಭಾದಿಸಿತು. ಅದರ ವೈಫಲ್ಯವು ಅಮೀರ್ ಖಾನ್ ಮೇಲೆ ತೀವ್ರ ಪರಿಣಾಮ ಬೀರಿತು ಎಂದು ವಿವರಿಸಿದರು.

  ‘ಲಾಲ್ ಸಿಂಗ್ ಚಡ್ಡಾ’ಅದ್ವೈತ್ ಚಂದನ್ ನಿರ್ದೇಶಿಸಿದ್ದರು. ಹಲವು ನಿರೀಕ್ಷೆಗಳೊಂದಿಗೆ ಪ್ರೇಕ್ಷಕರ ಮುಂದೆ ಬಂದ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸೋತಿತ್ತು. ಕಿರಣ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಈ ಚಿತ್ರದ ಬಗ್ಗೆ ಮಾತನಾಡಿದ್ದಾರೆ.

  ನಾವು ಎಷ್ಟೇ ಪ್ರಯತ್ನ ಮಾಡಿದರೂ ಅದು ಫಲಕಾರಿಯಾಗದಿದ್ದಾಗ ನಿರಾಶೆಗೊಳ್ಳುತ್ತೇವೆ. ಇದನ್ನು ಲಾಲ್ ಸಿಂಗ್ ಚಡ್ಡಾ ಸಾಬೀತುಪಡಿಸಿದರು. ಈ ಚಿತ್ರದ ಸೋಲು ಅಮೀರ್ ಖಾನ್ ಮೇಲೆ ಆಳವಾದ ಪ್ರಭಾವ ಬೀರಿತು. ಅಮೀರ್​ ಗೆ ಅದು ಕನಸಿನ ಪ್ರಾಜೆಕ್ಟ್ ಆಗಿತ್ತು. ಅದಕ್ಕಾಗಿ ಅವರು ಶ್ರಮಿಸಿದರು. ಆದರೆ ಅದನ್ನು ಪ್ರೇಕ್ಷಕ ಸ್ವೀಕರಿಸಲಿಲ್ಲ. ಇದನ್ನು ನಾನು ಒಪ್ಪುತ್ತೇನೆ ಏಕೆಂದರೆ ನಾವು ಸೋಲುಗಳಿಂದ ಪಾಠ ಕಲಿಯುತ್ತೇವೆ. ಆಕ್ಷನ್, ಕ್ರೈಮ್, ಕಾಮಿಡಿ, ರೋಮ್ಯಾಂಟಿಕ್ ಚಿತ್ರಗಳನ್ನು ಒಂದು ಸೂತ್ರದ ಪ್ರಕಾರ ತಯಾರಿಸಲಾಗುತ್ತದೆ. ಬದಲಾಗುತ್ತಿರುವ ಸನ್ನಿವೇಶಗಳು, ಚಲನಚಿತ್ರ ತಯಾರಕರು ಸಹ ಪ್ರೇಕ್ಷಕರಿಗೆ ಇಷ್ಟವಾಗುವ ಕಥೆಗಳನ್ನು ಮಾಡಲು ಪ್ರಯತ್ನಿಸುತ್ತಾರೆ, “ಎಂದು ಅವರು ಹೇಳಿದರು.

  ಅಮೀರಾ ಖಾನ್ ಇತ್ತೀಚೆಗೆ ಸಿತಾರೆ ಜಮೀನ್ ಪರ್ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಸದ್ಯ ಇದರ ಚಿತ್ರೀಕರಣ ಶರವೇಗದಲ್ಲಿ ಸಾಗುತ್ತಿದೆ. ಏಪ್ರಿಲ್ ನಲ್ಲಿ ಚಿತರೀಕರಣ ಮುಗಿಸಲು ಯೋಜಿಸುತ್ತಿದೆ. ಇದು ‘ತಾರೆ ಜಮೀನ್ ಪರ್’ ಮಾದರಿಯಲ್ಲೇ ಬರಲಿದೆ. ಚಿತ್ರ ಎಲ್ಲರನ್ನೂ ಭಾವುಕರನ್ನಾಗಿಸಿದೆ. ಆದರೆ, ಈ ಸಿನಿಮಾ ಎಲ್ಲರನ್ನು ನಗಿಸುತ್ತದೆ ಎಂದು ಅಮೀರ್ ಒಂದು ಸಂದರ್ಭದಲ್ಲಿ ಹೇಳಿದ್ದಾರೆ.

  ‘ಅಟಲ್​ ಸೇತುವೆ ಮೇಲೆ ಮುಸ್ಸಂಜೇಲಿ ಮತ್ತೊಮ್ಮೆ ಪ್ರಯಾಣಿಸಬೇಕೆನಿಸ್ತಿದೆ’: ಆನಂದ್ ಮಹೀಂದ್ರಾ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts