More

    ಕಿಂಗ್ಸ್ ಇಲೆವೆನ್‌ಗೆ ಇಂದು ರಾಯಲ್ಸ್ ಸವಾಲು, ಪ್ಲೇಆಫ್ ದೃಷ್ಟಿಯಿಂದ ಮಹತ್ವದ ಕಾದಾಟ

    ಅಬುಧಾಬಿ: ಸತತ 5 ಗೆಲುವಿನೊಂದಿಗೆ ಪ್ಲೇ ಆಫ್ ನತ್ತ ದಿಟ್ಟ ಹೆಜ್ಜೆ ಇಟ್ಟಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಐಪಿಎಲ್-13ರ ತನ್ನ 13ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಸವಾಲನ್ನು ಶುಕ್ರವಾರ ಎದುರಿಸಲಿದೆ. ಅಂತಿಮ ನಾಲ್ಕರ ಘಟ್ಟದಲ್ಲಿ ಸ್ಥಾನ ಪಡೆಯುವ ದೃಷ್ಟಿಯಿಂದ ಉಭಯ ತಂಡಗಳ ಪಾಲಿಗೆ ಇದು ಮಾಡು ಇಲ್ಲವೆ ಮಡಿ ಹೋರಾಟವಾಗಿದೆ. ಹಿಂದಿನ ಮುಖಾಮುಖಿಯಲ್ಲಿ ರಾಜಸ್ಥಾನ ಎದುರು 4 ವಿಕೆಟ್‌ಗಳಿಂದ ಸೋಲು ಕಂಡಿದ್ದ ಕನ್ನಡಿಗ ಕೆಎಲ್ ರಾಹುಲ್ ಬಳಗ ಸೇಡು ತೀರಿಸಿಕೊಳ್ಳುವುದರೊಂದಿಗೆ ಪ್ಲೇ ಆಫ್ ಹಂತಕ್ಕೆ ಮತ್ತಷ್ಟು ಸನಿಹವಾಗುವ ಇರಾದೆಯಲ್ಲಿದೆ. ಹಿಂದಿನ ಪಂದ್ಯದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿರುವ ರಾಜಸ್ಥಾನ ಕೂಡ ಪ್ರತಿಹೋರಾಟದ ನಿರೀಕ್ಷೆಯಲ್ಲಿದೆ.

    ಆತ್ಮವಿಶ್ವಾಸದಲ್ಲಿ ಕಿಂಗ್ಸ್ ಇಲೆವೆನ್: ಸತತ 5 ಸೋಲುಗಳ ಬಳಿಕ ಸತತ 5 ಜಯ ದಾಖಲಿಸಿ ಪ್ಲೇಆಫ್ ರೇಸ್‌ನಲ್ಲಿರುವ ಕನ್ನಡಿಗ ಅನಿಲ್ ಕುಂಬ್ಳೆ ಮಾರ್ಗದರ್ಶನದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಗೆಲುವಿನ ಲಯ ಮುಂದುವರಿಸುವ ವಿಶ್ವಾಸದಲ್ಲಿದೆ. ಕಳೆದ ಪಂದ್ಯದಲ್ಲಿ ಕೆಕೆಆರ್ ಎದುರು ಪಂಜಾಬ್ ಸುಲಭ ಜಯ ದಾಖಲಿಸಿತ್ತು. ಯುನಿವರ್ಸಲ್ ಬಾಸ್ ಖ್ಯಾತಿ ಕ್ರಿಸ್ ಗೇಲ್ ಕಣಕ್ಕಿಳಿದ ಬಳಿಕ ತಂಡದ ಅದೃಷ್ಟವೇ ಬದಲಾಗಿದೆ. ಕನ್ನಡಿಗ ಮಯಾಂಕ್ ಅಗರ್ವಾಲ್ ಅನುಪಸ್ಥಿತಿಯಲ್ಲಿ ಮಂದೀಪ್ ಸಿಂಗ್ ಮಿಂಚಿನ ನಿರ್ವಹಣೆ ತೋರುತ್ತಿದ್ದಾರೆ. ಮಯಾಂಕ್ ಲಭ್ಯತೆ ಇನ್ನು ಸ್ಪಷ್ಟವಾಗಿಲ್ಲ.

    * ಹೋರಾಟದ ನಿರೀಕ್ಷೆಯಲ್ಲಿ ರಾಯಲ್ಸ್: ಪ್ಲೇ-ಆಫ್ ಹಂತಕ್ಕೇರಲು ಕೂದಲೆಳೆ ಅಂತರದ ಅವಕಾಶ ಹೊಂದಿರುವ ರಾಜಸ್ಥಾನ ರಾಯಲ್ಸ್ ತಂಡ ಕಳೆದ ಪಂದ್ಯದಲ್ಲಿ ಮುಂಬೈ ಎದುರು ಭರ್ಜರಿ ಜಯ ದಾಖಲಿಸಿತ್ತು. ಬೆನ್ ಸ್ಟೋಕ್ಸ್ ಹಾಗೂ ಸಂಜು ಸ್ಯಾಮನ್ಸ್ ಜೋಡಿಯ ಅಬ್ಬರಕ್ಕೆ ಮುಂಬೈ ತಂಡ ಬೆದರಿತ್ತು. ಟೂರ್ನಿಯಲ್ಲಿ ಇದುವರೆಗೂ ಗೆಲುವಿಗಿಂತ ಹೆಚ್ಚು ಸೋಲನ್ನೇ ಕಂಡಿರುವ ಸ್ಟೀವನ್ ಸ್ಮಿತ್ ಬಳಗದ ಮುಂದಿನ ಹಾದಿ ಬಹುತೇಕ ಕಠಿಣವಾಗಿದ್ದರೂ ಪ್ರತಿಹೋರಾಟದ ಅವಕಾಶವಿದೆ. ಒಂದು ವೇಳೆ ಸೋತರೆ ಲೀಗ್‌ನಿಂದಲೇ 2ನೇ ತಂಡವಾಗಿ ರಾಯಲ್ಸ್ ಹೋರ ಬೀಳಲಿದೆ. ಉಳಿದಿರುವ ಎರಡು ಪಂದ್ಯಗಳನ್ನು ಗೆದ್ದರೂ ಇತರ ಪಂದ್ಯಗಳ ಲಿತಾಂಶದ ಮೇಲೆ ರಾಯಲ್ಸ್ ತಂಡದ ಭವಿಷ್ಯ ಅಡಗಿದೆ. 12 ಪಂದ್ಯಗಳಿಂದ 17 ವಿಕೆಟ್ ಕಬಳಿಸಿರುವ ಜೋಫ್ರಾ ಅರ್ಚರ್‌ಗೆ ಇತರ ಬೌಲರ್‌ಗಳಿಂದ ಉತ್ತಮ ಸಾಥ್ ಲಭಿಸಬೇಕಿದೆ.

    ಟೀಮ್ ನ್ಯೂಸ್
    ಕಿಂಗ್ಸ್ ಇಲೆವೆನ್ ಪಂಜಾಬ್: ಗೆಲುವಿನ ಲಯದಲ್ಲಿರುವ ರಾಹುಲ್ ಬಳಗದಲ್ಲಿ ಬದಲಾವಣೆ ನಿರೀಕ್ಷಿಸುವಂತಿಲ್ಲ. ಒಂದು ವೇಳೆ ಮಯಾಂಕ್ ಅಗರ್ವಾಲ್ ಫಿಟ್ ಆದರೆ, ದೀಪಕ್ ಹೂಡಾ ಬದಲಿಗೆ ಕಣಕ್ಕಿಳಿಯಬಹುದು. ಮಂದೀಪ್ ಸಿಂಗ್ ಎಂದಿನಂತೆ ಮಧ್ಯಮ ಕ್ರಮಾಂಕಕ್ಕೆ ಮರಳಬಹುದು.
    ಸಂಭಾವ್ಯ ತಂಡ: ಕೆಎಲ್ ರಾಹುಲ್ (ನಾಯಕ, ವಿಕೀ), ಮಂದೀಪ್ ಸಿಂಗ್, ಕ್ರಿಸ್ ಗೇಲ್, ನಿಕೋಲಸ್ ಪೂರನ್, ಗ್ಲೆನ್ ಮ್ಯಾಕ್ಸ್‌ವೆಲ್, ದೀಪಕ್ ಹೂಡಾ/ಮಯಾಂಕ್ ಅಗರ್ವಾಲ್, ಕ್ರಿಸ್ ಜೋರ್ಡಾನ್, ಎಂ.ಅಶ್ವಿನ್, ರವಿ ಬಿಷ್ಣೋಯಿ, ಮೊಹಮದ್ ಶಮಿ, ಅರ್ಷದೀಪ್ ಸಿಂಗ್.

    ಕಳೆದ ಪಂದ್ಯ: ಕೆಕೆಆರ್ ಎದುರು 8 ವಿಕೆಟ್ ಜಯ.


    ರಾಜಸ್ಥಾನ ರಾಯಲ್ಸ್: ಹಿಂದಿನ ಪಂದ್ಯದಲ್ಲಿ ಗೆಲುವು ದಾಖಲಿಸಿರುವ ರಾಯಲ್ಸ್ ತಂಡದಲ್ಲೂ ಬದಲಾವಣೆ ನಿರೀಕ್ಷೆ ಕಡಿಮೆ. ದುಬಾರಿಯಾಗಿರುವ ಅಂಕಿತ್ ರಜಪೂತ್ ಬದಲಿಗೆ ವರುಣ್ ಆರನ್ ವಾಪಸಾಗಬಹುದು.
    ಸಂಭಾವ್ಯ ತಂಡ: ರಾಬಿನ್ ಉತ್ತಪ್ಪ, ಬೆನ್ ಸ್ಟೋಕ್ಸ್, ಸ್ಟೀವನ್ ಸ್ಮಿತ್ (ನಾಯಕ), ಸಂಜು ಸ್ಯಾಮ್ಸನ್ (ವಿಕೀ), ಜೋಸ್ ಬಟ್ಲರ್, ರಿಯಾನ್ ಪರಾಗ್, ರಾಹುಲ್ ತೆವಾಟಿಯಾ, ಜ್ರೋಾ ಆರ್ಚರ್, ಶ್ರೇಯಸ್ ಗೋಪಾಲ್, ಅಂಕಿತ್ ರಜಪೂತ್/ವರುಣ್ ಆರನ್, ಕಾರ್ತಿಕ್ ತ್ಯಾಗಿ.

    ಕಳೆದ ಪಂದ್ಯ: ಮುಂಬೈ ಇಂಡಿಯನ್ಸ್ ಎದುರು 8 ವಿಕೆಟ್ ಜಯ. 


    ಎರಡೂ ತಂಡಕ್ಕಿದೆ ಪ್ಲೇಆಫ್ ಚಾನ್ಸ್
    ಉಭಯ ತಂಡಗಳಿಗೂ ಪ್ಲೇಆ್ ಹಂತಕ್ಕೇರುವ ಅವಕಾಶವಿದೆ. ರಾಜಸ್ಥಾನ ಸೋತರೆ ಟೂರ್ನಿಯಿಂದ ಹೊರಬೀಳಲಿದೆ. ಒಂದು ವೇಳೆ ಗೆದ್ದರೆ ಮುಂದಿನ ಹಾದಿಯ ಆಸೆ ಜೀವಂತವಾಗಿರಲಿದೆ. ಮತ್ತೊಂದೆಡೆ, ಪಂಜಾಬ್ ತಂಡ ಗೆದ್ದರೆ ಪ್ಲೇಆಫ್ ಹಂತಕ್ಕೆ ಮತ್ತಷ್ಟು ಸನಿಹವಾಗಲಿದ್ದು, ತನ್ನ ಕಡೇ ಪಂದ್ಯದಲ್ಲಿ ಸೋತರೂ ಇತರ ಪಂದ್ಯಗಳ ಲಿತಾಂಶದ ಮೇಲೆ ಭವಿಷ್ಯ ಅವಲಂಬಿಸಲಿದೆ.


    ಪಂದ್ಯ ಆರಂಭ: ರಾತ್ರಿ 7.30ಕ್ಕೆ

    ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್

    ಮುಖಾಮುಖಿ: 20, ಪಂಜಾಬ್: 9. ರಾಜಸ್ಥಾನ: 11,

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts