More

    ಕಿದ್ವಾಯಿ ಸಂಪೂರ್ಣ ಹೊಣೆ ಆಡಳಿತಾಧಿಕಾರಿಗೆ: ಸರ್ಕಾರದ ಆದೇಶ

    ಬೆಂಗಳೂರು: ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಆಡಳಿತ ಸುಧಾರಣೆಗೆ ಐಎಎಸ್ ಅಧಿಕಾರಿ ಎನ್. ಮಂಜುಶ್ರೀ ಅವರನ್ನು ಆಡಳಿತಾಧಿಕಾರಿಯಾಗಿ ನೇಮಿಸಿರುವ ರಾಜ್ಯ ಸರ್ಕಾರ ಇದೀಗ ನಿರ್ದೇಶಕರ ಅಧಿಕಾರ ಮೊಟಕುಗೊಳಿಸಿದೆ.

    ವೈದ್ಯಕೀಯ ಶಿಕ್ಷಣ ಇಲಾಖೆಯು ಇದೇ ತಿಂಗಳ 15ರಂದು ಹೊರಡಿಸಿದ ಆದೇಶದಲ್ಲಿ ಸಂಸ್ಥೆಯ ಆಡಳಿತ ಹಾಗೂ ಹಣಕಾಸು ನಿರ್ವಹಣೆಗೆ ಸಂಬಂಧಿಸಿದ ಸಂಪೂರ್ಣ ಜವಾಬ್ದಾರಿಯನ್ನು ಆಡಳಿತಾಧಿಕಾರಿಗೆ ವಹಿಸಿದೆ. ಇದರೊಂದಿಗೆ ಔಷಧಗಳ ಖರೀದಿ, ವಿವಿಧ ವಸ್ತುಗಳ ಸಂಗ್ರಹಣೆ ಮತ್ತು ಖರೀದಿ, ಮಾನವ ಸಂಪನ್ಮೂಲ ನಿರ್ವಹಣೆ ಸೇರಿ ನಿರ್ದೇಶಕರಿಗೆ ವಹಿಸಲಾಗಿದ್ದ ಸಾಮಾನ್ಯ ಆಡಳಿತಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳನ್ನು ಆಡಳಿತಾಧಿಕಾರಿ ವ್ಯಾಪ್ತಿಗೆ ನೀಡಲಾಗಿದೆ. ಆರೋಗ್ಯ ಸೇವೆಗಳನ್ನು ಒಳಗೊಂಡ ಕ್ಲಿನಿಕಲ್ ವಿಷಯಗಳ ನಿರ್ವಹಣೆ ಮಾತ್ರ ನಿರ್ದೇಶಕರ ಜವಾಬ್ದಾರಿಯಾಗಿದೆ.

    ಇದಲ್ಲದೆ, ನಿರ್ದೇಶಕರ ಕೊಠಡಿಯನ್ನೂ ಆಡಳಿತಾಧಿಕಾರಿಗೆ ಬಿಟ್ಟುಕೊಡುಂತೆ ಸೂಚಿಸಲಾಗಿದ್ದು, ಪ್ರಸ್ತುತ ವೈದ್ಯಕೀಯ ಅಧೀಕ್ಷಕರು ಕಾರ್ಯ ನಿರ್ವಹಿಸುತ್ತಿರುವ ಕೊಠಡಿಯಲ್ಲಿ ನಿರ್ದೇಶಕರು, ಪ್ರಾಧ್ಯಾಪಕರ ಕೊಠಡಿಯಲ್ಲಿ ವೈದ್ಯಕೀಯ ಅಧೀಕ್ಷಕರು ಕಾರ್ಯನಿರ್ವಹಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.

    ಸಂಸ್ಥೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಅರೋಪ ಹಾಗೂ ದೂರುಗಳನ್ನು ಆಧರಿಸಿ ಸರ್ಕಾರ ಐಎಎಸ್ ಅಧಿಕಾರಿ ಅರುಂಧತಿ ಚಂದ್ರಶೇಖರ್ ನೇತೃತ್ವದ ಸಮಿತಿ ರಚಿಸಿತ್ತು. ವರದಿಯಲ್ಲಿ ಅಡಳಿತ ವ್ಯವಸ್ಥೆ ಕುಸಿದಿರುವ ಬಗ್ಗೆ ತಿಳಿಸಿತ್ತು. ಡಾ.ವಿ. ಲೋಕೇಶ್ ಅವರನ್ನು ನಿರ್ದೇಶಕರ ಹುದ್ದೆಯಿಂದ ವಜಾಗೊಳಿಸಿ ಆಂಕಾಲಜಿ ವಿಭಾಗದ ಮುಖ್ಯಸ್ಥ ಡಾ.ಸೈಯದ್ ಅಲ್ತ್ಾ ಅವರನ್ನು ಪ್ರಭಾರ ನಿರ್ದೇಶಕರನ್ನಾಗಿ ನೇಮಿಸಿತ್ತು.

    ನ್ಯಾಯಾಲಯ ಮೆಟ್ಟಿಲೇರಿದ ಡಾ. ವಿ. ಲೋಕೇಶ್:
    ಸರ್ಕಾರದ ಆದೇಶದ ವಿರುದ್ಧ ಡಾ.ವಿ. ಲೋಕೇಶ್ ನ್ಯಾಯಾಲಯದ ಮೆಟ್ಟಿಲೇರಿದ್ದರು. ಅದೇಶ ಪರಿಶೀಲಿಸಿದ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಿತ್ತು. ನಂತರ ಸರ್ಕಾರ ಹೊಸ ಆದೇಶ ಹೊರಡಿಸದಿದ್ದರೂ ಡಾ. ಲೋಕೇಶ್ ನಿರ್ದೇಶಕ ಹುದ್ದೆಗೆ ಮರಳಿದ್ದನ್ನು ಕೆಲ ವೈದ್ಯರು ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಆಡಳಿತಾಧಿಕಾರಿ ಹಾಗೂ ನಿರ್ದೇಶಕರ ನಡುವೆ ಸಂಘರ್ಷ ಉಂಟಾಗಿತ್ತು. ಈ ಹಿನ್ನೆಲೆ ಸರ್ಕಾರ ನಿರ್ದೇಶಕರ ಅಧಿಕಾರ ಮೊಟಕುಗೊಳಿಸಿ ಆದೇಶ ಹೊರಡಿಸಿದೆ. ಸಂಸ್ಥೆಯಲ್ಲಿನ ಈ ಬೆಳವಣಿಗೆ ವೈದ್ಯರು ಹಾಗೂ ಸಿಬ್ಬಂದಿ ಗೊಂದಲಕ್ಕೆ ಒಳಗಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts