More

    ಮಕ್ಕಳ ಕಲಿಕೆಗೆ ಬೇಸಿಗೆ ಶಿಬಿರ ಸಹಕಾರಿ

    ನ್ಯಾಮತಿ: ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರಲು ಹಾಗೂ ಶೈಕ್ಷಣಿಕ ರಂಗದಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಲು ಬೇಸಿಗೆ ಶಿಬಿರಗಳು ಸಹಕಾರಿಯಾಗಿವೆ ಎಂದು ಶಾಲಾ ಮುಖ್ಯಶಿಕ್ಷಕಿ ವನಜಾಕ್ಷಮ್ಮ ಹೇಳಿದರು.

    ತಾಲೂಕಿನ ಜೀನಹಳ್ಳಿ, ಕತ್ತಿಗೆ ಕ್ರಾಸ್ ಬಳಿಯ ಶ್ರೀ ಬಸವೇಶ್ವರ ಅಂಗ್ಲ ಮಾಧ್ಯಮ ಶಾಲೆಯಲ್ಲಿ ಒಂದು ತಿಂಗಳಿನಿಂದ ಆಯೋಜಿಸಿದ್ದ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು.

    ಹೊನ್ನಾಳಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಯೋಗೀಶ್ ಕೋರಿ ಕುಳಗಟ್ಟೆ ಮಾತನಾಡಿ, ಇಂದಿನ ದಿನಗಳಲ್ಲಿ ಸಮಯದ ಸದುಪಯೋಗ ಬಹಳ ಮುಖ್ಯವಾಗಿದ್ದು, ರಜೆಯ ಅವಧಿಯಲ್ಲಿ ಮಕ್ಕಳು ಬೇಸಿಗೆ ಶಿಬಿರಗಳಲ್ಲಿ ಭಾಗವಹಿಸುವುದರಿಂದ ಸೃಜನಾತ್ಮಕವಾದ ಕಲಿಕೆ ಸಾಧ್ಯವಿದೆ ಎಂದರು.

    ಪತ್ರಕರ್ತರ ಸಂಘದ ನ್ಯಾಮತಿ ಘಟಕದ ಸಂಚಾಲಕ ಎಂ.ಎಸ್. ಶಾಸ್ತ್ರೀಹೊಳೆಮಠ್ ಮಾತನಾಡಿ, ಪಾಲಕರು ತಮ್ಮ ಮಕ್ಕಳ ಕಲಿಕೆಗೆ ಪ್ರೋತ್ಸಾಹ ನೀಡುವ ಮೂಲಕ ಅವರ ವಿದ್ಯಾಭ್ಯಾಸಕ್ಕೆ ದಾರಿ ದೀಪವಾಗಬೇಕು ಎಂದರು.

    ಅಧ್ಯಕ್ಷತೆ ವಹಿಸಿದ್ದ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಸುರೇಶ್ ಮಾತನಾಡಿ, ಪ್ರತಿ ವರ್ಷ ಮಕ್ಕಳ ಶಿಬಿರ ಸಂಘಟಿಸಿ ಮಕ್ಕಳಿಗೆ ಮಣ್ಣಿನ ಮಾದರಿ, ಚಿತ್ರಕಲೆ, ನೃತ್ಯ, ಭರತನಾಟ್ಯ, ಸ್ಪೋಕನ್ ಇಂಗ್ಲಿಷ್, ಅಬಾಕಸ್‌ನಂತಹ ವಿಶೇಷ ಕಲಿಕೆ ಮತ್ತು ತರಬೇತಿ ಹಾಗೂ ಮಾಹಿತಿ ಮಕ್ಕಳಿಗೆ ನೀಡಲಾಗುತ್ತಿದೆ ಎಂದರು.

    ಪತ್ರಕರ್ತರ ಸಂಘದ ಹೊನ್ನಾಳಿ ಘಟಕದ ಮಾಜಿ ಅಧ್ಯಕ್ಷ ಮೃತ್ಯುಂಜಯ ಪಾಟೀಲ್, ಶಿಕ್ಷಕಿಯರಾದ ಪವಿತ್ರ, ಸ್ನೇಹ, ಶಿಬಿರಾರ್ಥಿಗಳಾದ ಛಾಯಾ, ಮೋಕ್ಷ್ಷಾ, ಯೋಗೀಶ್ ಶಿಬಿರದ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು.

    ಶಿಬಿರದಲ್ಲಿ 50 ಮಕ್ಕಳು ಚಿತ್ರಕಲೆ, ನೃತ್ಯ, ಭರತನಾಟ್ಯ, ವೇದಿಕ್ ಗಣಿತ, ಸಂಗೀತ ಅಭ್ಯಾಸ, ಮೈಂಡ್ ಗೇಮ್ಸ್, ಮಿಡ್ ಬೈನ್ ಸ್ಪೋಕನ್ ಇಂಗ್ಲೀಷ್, ಅಬಾಕಸ್ ಮೊದಲಾದ ತರಬೇತಿ ಪಡೆದ ಪ್ರಮಾಣ ಪತ್ರ ವಿತರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts