More

    ಸಾಗರ ಹಾಸ್ಪಿಟಲ್‌ನಲ್ಲಿ ವಿಶ್ವ ಕಿಡ್ನಿ ದಿನಾಚರಣೆ; ನ್ಯಾ.ಮುಚ್ಚಂಡಿ ಡಾ.ಸಿ.ಎನ್.ಮಂಜುನಾಥ್, ಶಿವಾನಂದ ತಗಡೂರು ಸನ್ಮಾನ

    ಬೆಂಗಳೂರು:
    ಹೃದಯ ಮತ್ತು ಕಿಡ್ನಿ ನಮ್ಮ ದೇಹದ ಬಹುಮುಖ್ಯ ಅಂಗಗಳಾಗಿದ್ದು, ಅವುಗಳನ್ನು ಕೊನೆಯುಸಿರಿನ ತನಕ ಆರೋಗ್ಯಕರವಾಗಿ ಇಟ್ಟುಕೊಳ್ಳುವುದು ನಮ್ಮೆಲ್ಲರ ಮೊದಲ ಆದ್ಯತೆಯಾಗಬೇಕು ಎಂದು ಖ್ಯಾತ ವೈದ್ಯ ಡಾ.ಸಿ.ಎನ್.ಮಂಜುನಾಥ್ ತಿಳಿಸಿದ್ದಾರೆ.
    ಜಯನಗರದ ಸಾಗರ ಹಾಸ್ಪಿಟಲ್‌ನಲ್ಲಿ ವಿಶ್ವ ಕಿಡ್ನಿ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಜೀವನಕ್ರಮ ಬದಲಾವಣೆಯಿಂದಾಗಿ ಮಾನಸಿಕ ಒತ್ತಡಗಳು ಹೆಚ್ಚುತ್ತಿವೆ. ಇದರಿಂದಾಗಿಯೇ ಸಮಸ್ಯೆಗಳು ತೀವ್ರಗೊಳ್ಳುತ್ತಿವೆ ಎಂದರು.
    ಆರೋಗ್ಯವಾಗಿರುವುದು ಕೂಡ ಆಸ್ತಿ ಸಂಪಾದನೆಯಷ್ಟೆ ಮುಖ್ಯ. ಕುಟುಂಬದಲ್ಲಿ ಒಬ್ಬ ಅನಾರೋಗ್ಯಕ್ಕೆ ಒಳಗಾದರೆ, ಇಡೀ ಕುಟುಂಬ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತದೆ. ಆದ್ದರಿಂದ ಯಾವುದೇ ರೋಗ ಕಾಣಿಸಿಕೊಂಡರೂ ತಕ್ಷಣವೇ ವೈದ್ಯರ ಸಲಹೆ ಪಡೆಯಬೇಕು ಎಂದರು.
    ರಾಜ್ಯದಲ್ಲಿ ಅಂಗಾಂಗ ದಾನ ಪ್ರಕ್ರಿಯೆಗಳನ್ನು ಸರಳೀಕರಣಗೊಳಿಸಿ ನೀತಿಯನ್ನು ತರಲು ಪ್ರಯತ್ನ ಮಾಡಿದ್ದಾಗಿ ತಿಳಿಸಿದ ಅವರು, ಕಿಡ್ನಿ ಕಸಿ ಮಾಡುವುದಕ್ಕೂ ತಾವು ವೈದ್ಯಕೀಯ ಸಲಹಾ ಸಮಿತಿ ಸದಸ್ಯರಿದ್ದಾಗ ರಾಜ್ಯ ಸಕಾರದ ಗಮನ ಸೆಳೆದು ಅವಕಾಶ ಮಾಡಿಕೊಟ್ಟ ಸಂದರ್ಭವನ್ನು ನೆನಪಿಸಿದರು.
    ಕಿಡ್ನಿ ಹಿರಿಯ ತಜ್ಞ ಡಾ.ಸಂಜೀವ್ ಕೆ ಹಿರೇಮಠ್, ಮಾತನಾಡಿ, ಮೂತ್ರಪಿಂಡ ಕಾಯಿಲೆ ಆರಂಭದಲ್ಲಿಯೇ ಪತ್ತೆಯಾದರೆ ಗುಣಪಡಿಸಬಹುದು ಎಂದರು.
    ಆರೋಗ್ಯಕರ ಆಹಾರ, ನಿಯಮಿತ ವ್ಯಯಾಮ, ಸಾಕಷ್ಟು ನಿದ್ರೆ ಮಾಡುವುದರಿಂದ ಹಲವು ಸಮಸ್ಯೆ ಬಗೆಹರಿಯುತ್ತದೆ. ರಕ್ತದ ಸಕ್ಕರೆ ಮತ್ತು ರಕ್ತದೊತ್ತಡವನ್ನು ಉತ್ತಮವಾಗಿ ನಿಯಂತ್ರಿಸಿದರೆ ಹೆಚ್ಚಿನ ಸಮಸ್ಯೆ ಇರುವುದಿಲ್ಲ ಎಂದರು.
    ಆಸ್ಪತ್ರೆಯ ಅಧ್ಯಕ್ಷರಾದ ಡಾ.ಹೇಮಚಂದ್ರ ಸಾಗರ್ ಮಾತನಾಡಿ, ಆಸ್ಪತ್ರೆಯ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
    ವೈದ್ಯ ಡಾ.ಸಿ.ಎನ್.ಮಂಜುನಾಥ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ನ್ಯಾಯಮೂರ್ತಿ ಬಿ.ಎ ಮುಚ್ಚಂಡಿ ಅವರನ್ನು ಆಸ್ಪತ್ರೆ ವತಿಯಿಂದ ಸನ್ಮಾನಿಸಲಾಯಿತು.
    ಡಾ.ನವೀನ್ ಡಿ ಬೆನಕಪ್ಪ, ಡಾ.ಎಚ್.ವಿ.ರಾಜಶೇಖರ ರೆಡ್ಡಿ, ಡಾ.ರಘುನಂದನ್, ಡಾ.ಡಿಕಿತಾ
    ಡಾ.ಕವಿತಾಮತ್ತಿತರರು ಹಾಜರಿದ್ದರು.

    ಸಾಗರ ಹಾಸ್ಪಿಟಲ್‌ನಲ್ಲಿ ವಿಶ್ವ ಕಿಡ್ನಿ ದಿನಾಚರಣೆ; ನ್ಯಾ.ಮುಚ್ಚಂಡಿ ಡಾ.ಸಿ.ಎನ್.ಮಂಜುನಾಥ್, ಶಿವಾನಂದ ತಗಡೂರು ಸನ್ಮಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts