More

    ಬಾಲಕನ ಅಪಹರಣ ಯತ್ನ, ಇಬ್ಬರ ಸೆರೆ

    ಕುಂದಾಪುರ: ಮಕ್ಕಳ ಅಪಹರಣ ಯತ್ನ ಆರೋಪದಲ್ಲಿ ತಾಲೂಕಿನ ಜಪ್ತಿ ಎಂಬಲ್ಲಿ ಮಂಗಳವಾರ ಬೆಂಗಳೂರು ಮೂಲದ ಸುರೇಶ್ ಮತ್ತು ರಾಕೇಶ್ ಎಂಬುವರನ್ನು ಬಂಧಿಸಲಾಗಿದೆ. ಇನ್ನೋರ್ವ ಆರೋಪಿ ನಂದೀಶ ಯಾನೆ ವಿಶ್ವ ಪರಾರಿಯಾಗಿದ್ದಾನೆ.

    ಶಿರಿಯಾರ ಗುಡ್ಡಟ್ಟು ಬಳಿ ಮಕ್ಕಳನ್ನು ಅಪಹರಿಸಲು ಇವರು ಯತ್ನಿಸುತ್ತಿದ್ದಾರೆಂಬ ಅನುಮಾನ ಹಿನ್ನೆಲೆಯಲ್ಲಿ ಸ್ಥಳೀಯರು, ಈ ಮೂವರು ಅಪರಿಚಿತ ಯುವಕರನ್ನು ಸೆರೆ ಹಿಡಿಯಲು ಮುಂದಾದರು. ತಪ್ಪಿಸಿಕೊಂಡ ಇವರನ್ನು ಬೆನ್ನಟ್ಟಿದ ಪೊಲೀಸರು ಜಪ್ತಿ ಎಂಬಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಪರಾರಿಯಾಗಿರುವ ನಂದೀಶ ಯಾನೆ ವಿಶ್ವನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

    ಘಟನೆ ಕೋಟ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಈವರೆಗೆ ಯಾರೂ ದೂರು ನೀಡಿಲ್ಲ. ಆರೋಪಿಗಳು ಚಲಾಯಿಸುತ್ತಿದ್ದ ಬೈಕ್ ಮಂಗಳೂರಿನ ಉರ್ವ ಠಾಣೆ ವ್ಯಾಪ್ತಿಯಲ್ಲಿ ಕಳವು ಮಾಡಿದ್ದು ಎಂಬ ಅಂಶ ವಿಚಾರಣೆ ವೇಳೆ ಗೊತ್ತಾಗಿದೆ. ಆರೋಪಿಗಳನ್ನು ಉರ್ವ ಠಾಣೆಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

    ಚಾಕು ತೋರಿಸಿ ಬೆದರಿಸಿದರು!
    ಆರೋಪಿಗಳು ಶಿರಿಯಾರ ಗುಡ್ಡಟ್ಟು ಬಳಿ ಚಂದ್ರ ಶಿರಿಯಾರ ಎಂಬವರ 6 ವರ್ಷದ ಪುತ್ರನನ್ನು ಎಳೆದೊಯ್ಯಲು ಯತ್ನಿಸುತ್ತಿದ್ದರು. ಇದನ್ನು ಗಮನಿಸಿದ ಸಾರ್ವಜನಿಕರು ಮಗುವಿನ ರಕ್ಷಣೆಗೆ ಧಾವಿಸಿದರು. ಈ ವೇಳೆ ಆರೋಪಿಗಳು ಚಾಕು ತೋರಿಸಿ ಸ್ಥಳೀಯರನ್ನು ಬೆದರಿಸಿದರು. ಅಷ್ಟರಲ್ಲಿ ಮತ್ತಷ್ಟು ಸ್ಥಳೀಯರು ಬಂದರು. ತಕ್ಷಣ ಮಗುವನ್ನು ಬಿಟ್ಟ ಆರೋಪಿಗಳು ಬೈಕಿನಲ್ಲಿ ಪರಾರಿಯಾದರು. ಈ ವೇಳೆ ಸಾರ್ವಜನಿಕರು ಆಟೋದಲ್ಲಿ ಬೆನ್ನಟ್ಟಿದರು. ಸ್ಥಳೀಯರು ಕುಂದಾಪುರ ಗ್ರಾಮಾಂತರ ಠಾಣೆ ಎಸ್‌ಐ ರಾಜಕುಮಾರ್ ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದರು. ಗ್ರಾಮಾಂತರ ಠಾಣೆ ಎಸ್‌ಐ ಹಾಗೂ ಪೊಲೀಸರು ರೌಂಡ್‌ನಲ್ಲಿದ್ದ ಕಾರಣ, ಬೈಕನ್ನು ಚೇಸ್ ಮಾಡಿ ಆರೋಪಿಗಳನ್ನು ಬಂಧಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts