More

    ನಿಮಗೆ ಲಂಚ ಬಿಡೋಕಾಗಲ್ಲ, ಕಡಿಮೆ ಮಾಡುವಂತೆ ನಾನೇ ಹೇಳಿದ್ದೆ

    ಹೂವಿನಹಡಗಲಿ: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಅನ್ನಭಾಗ್ಯ ಅಕ್ಕಿಯನ್ನು 7 ರಿಂದ 4 ಕೆಜಿಗೆ ಇಳಿಸುತ್ತಿದ್ದಂತೆ ಸರ್ಕಾರದಲ್ಲಿ ಭ್ರಷ್ಟಾಚಾರ ಕಡಿಮೆ ಮಾಡಿದರೆ, 10 ಕೆ.ಜಿ ಅಕ್ಕಿ ಕೊಡಬಹುದು ಎಂದು ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಸಲಹೆ ನೀಡಿದ್ದಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

    ಕಡಿಮೆ ಮಾಡುವಂತೆ ಲಂಚ ಸಿದ್ದರಾಮಯ್ಯ ಲೇವಡಿ

    ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಬಡವರಿಗೆ ನೀಡುವ ಅನ್ನಭಾಗ್ಯ ಅಕ್ಕಿ ಕಡಿಮೆ ಮಾಡಿದ ಬಗ್ಗೆ ಪ್ರಶ್ನಿಸಿದ್ದಕ್ಕೆ ಸರ್ಕಾರದ ಬಳಿ ಹಣ ಇಲ್ಲವೆಂದು ಬಿ.ಎಸ್.ಯಡಿಯೂರಪ್ಪ ಸಮರ್ಥಿಸಿಕೊಂಡರು. ಅದಕ್ಕೆ ಲಂಚ ಒಡೆಯೋದನ್ನು ಬಿಡಲು ನಿಮ್ಮಿಂದ ಸಾಧ್ಯವಿಲ್ಲ. ಕನಿಷ್ಟ ಪಕ್ಷ ಲಂಚದ ಪ್ರಮಾಣವನ್ನು ಕಡಿಮೆ ಮಾಡುವಂತೆ ವಿಧಾನಸೌಧದಲ್ಲೇ ಹೇಳಿದ್ದೆ ಎಂದು ಲೇವಡಿ ಮಾಡಿದರು.

    ‘ಮೋದಿ ನಾ ಖಾವುಂಗಾ ನಾ ಖಾನೆದೊಂಗಾ ಎಂದಿದ್ದರು. ಆದರೆ, ರಾಜ್ಯದಲ್ಲಿ ಶೇ.40, ಶೇ.50 ರಷ್ಟು ಕಮಿಷನ್ ಕುರಿತು ಗುತ್ತಿಗೆದಾರರ ಸಂಘ, ರುಪ್ಸಾ ಸೇರಿ ಹಲವು ಸಂಸ್ಥೆಗಳು ಮೋದಿಗೆ ಪತ್ರ ಬರೆದರೂ ಕ್ಯಾರೇ ಎನ್ನಲಿಲ್ಲ. ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಕಮಿಷನ್ ಹೊಡೆಯಲು ಅನುಮತಿ ಕೊಟ್ಟಿದ್ದಾರಾ ಎಂದು ಖಾರವಾಗಿ ಪ್ರಶ್ನಿಸಿದ ಅವರು, ಹೀಗಾಗಿ ವಿಧಾನಸೌಧದ ಗೋಡೆಗಳೂ ಲಂಚ ಲಂಚ ಎನ್ನುತ್ತಿವೆ ಎಂದು ಕುಟುಕಿದರು.

    ಲಿಂಗಾಯತ ನಾಯಕರ ಪರ ಕೆಲಸ

    40 ವ?ರ್ದಿಂದ ರಾಜಕಾರಣ ಮಾಡುತ್ತಿದ್ದೇನೆ. ಲಿಂಗಾಯತ ಸಮುದಾಯದಲ್ಲಿ ನಿಜಲಿಂಗಪ್ಪ, ಎಸ್.ಆರ್ ಕಂಠಿ, ಜೆ.ಎಚ್ ಪಟೇಲ್ ಪ್ರಮಾಣಿಕ ಮುಖ್ಯಮಂತ್ರಿಗಳನ್ನು ಕಂಡಿದ್ದೇನೆ. ಲಿಂಗಾಯತ ನಾಯಕರ ಪರ ಕೆಲಸ ಮಾಡಿದ್ದೇನೆ. ಅವರ ಬಗ್ಗೆ ಅಪಾರ ಗೌರವವಿದೆ. ಆದರೆ, ಪ್ರತಿಯೊಂದಕ್ಕೂ ಕಮಿಷನ್ ಹೊಡೆಯುವ ಸಿಎಂ ಬಸವರಾಜ ಬೊಮ್ಮಾಯಿ ಲಿಂಗಾಯತ ಮುಖ್ಯಮಂತ್ರಿಗಳ ಸಾಲಿನಲ್ಲಿ ಕಪ್ಪು ಚಿಕ್ಕೆ ಎಂದು ಟೀಕಿಸುವ ಮೂಲಕ ತಮ್ಮ ಹೇಳಿಕೆಯನ್ನು ಸಮರ್ಥಿಸಿದರು.

    ನಾನು ಬಸವಾದಿ ಪ್ರಮತ್ತರ ಹಾದಿಯಲ್ಲಿ ನಡೆಯುತ್ತಿದ್ದೇನೆ. ತಾಲೂಕಾ ಕಚೇರಿಯಿಂದ ವಿಧಾನಸೌಧವರೆಗೆ ಬಸವಣ್ಣ ಫೋಟೋ ಇಡಬೇಕು. ಕಿತ್ತೂರು ಚೆನ್ನಮ್ಮ, ಬಸವಣ್ಣ ಸೇರಿ ಹಲವು ನಾಯಕರ ಜಯಂತಿಗೆ ಆದೇಶಿಸಿದ್ದೇ ನಾನು. ಬುದ್ಧ, ಬಸವ, ಅಂಬೇಡ್ಕರ್ ಹೇಳಿದಂತೆ ಜೀವನದುದ್ದಕ್ಕೂ ನಡೆಯುತ್ತೇನೆ ಎಂದು ಹೇಳಿದರು.

    ಇದನ್ನೂ ಓದಿ: ಚುನಾವಣಾ ಬಿಸಿಯ ನಡುವೆಯೂ ಸಿಎಂ ಬೊಮ್ಮಾಯಿ ಬೆನ್ನು ತಟ್ಟಿದ ಸಿದ್ದರಾಮಯ್ಯ!

    ಬಿಜೆಪಿ ಅಧಿಕಾರಕ್ಕೆ ಬಂದರೆ ರೈತರ ಆದಾಯ ದುಪ್ಪಟ್ಟು ಆಗುತ್ತದೆ ಎಂದಿದ್ದರು. ಆದರೆ, ರೈತರ ಆದಾಯಕ್ಕಿಂತ ಸಾಲ ದ್ವಿಗುಣವಾಗಿದೆ. 12 ಲಕ್ಷ ಕೋಟಿ ಶ್ರೀಮಂತರ ಸಾಲ ಮನ್ನಾ ಮಾಡಿದ ಪ್ರಧಾನಿ ಮೋದಿ, ರೈತರ ಸಾಲ ಮನ್ನಾ ಮಾಡಿದ್ರೆ ದೇಶ ದಿವಾಳಿ ಆಗುತ್ತದೆ ಎಂದು ಕೈಚೆಲ್ಲಿದರು.

    ಅಚ್ಛೇ ದಿನ್ ಹೆಸರಲ್ಲಿ ಬಡವರು, ರೈತರನ್ನು ವಂಚಿಸಿದ್ದೇನೆ ಹೆಚ್ಚು. ವಿದೇಶದಿಂದ ಕಪ್ಪು ಹಣ ತರುವಾದಿ ಹೇಳಿದ್ದ ಮೋದಿ, ಈ ನಿಟ್ಟಿನಲ್ಲಿ ಯಾವುದೇ ಪ್ರಯತ್ನ ನಡೆಸಿಲ್ಲ. ಪದೇ ಪದೇ ದೇಶದ ಜನರಿಗೆ ಮೋದಿ ಯಾಕೆ ಯಾಕೆ ಸುಳ್ಳು ಹೇಳುತ್ತಿದ್ದಾರೆ. ಸುಳ್ಳುಗಳನ್ನೇ ಬಿತ್ತುವ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆದು, ಜನ ಹಿತ ಕಾಯುವ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕು ಎಂದು ಕರೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts