More

    ಸ್ಕ್ರಿಪ್ಟ್ ರೆಡಿಯಾಗಿದೆ, ಟೈಮ್ ಬರಬೇಕಷ್ಟೇ!; ನಿರ್ದೇಶನದ ಬಗ್ಗೆ ಸುದೀಪ್​ ಮಾತು…

    ಬೆಂಗಳೂರು: ಕಿಚ್ಚ ಸುದೀಪ್ ಮತ್ತೆ ತಲೆಗೆ ಹ್ಯಾಟ್ ಧರಿಸಿ ಸಿನಿಮಾ ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿ ಈ ಹಿಂದೆಯೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಮತ್ತೆ ನಿರ್ದೇಶನ ಮಾಡಲಿದ್ದೇನೆ ಎಂದು ಸ್ವತಃ ಸುದೀಪ ಘೋಷಣೆ ಮಾಡಿದಾಗ ಅಭಿಮಾನಿ ವಲಯ ಮತ್ತು ಪ್ರೇಕ್ಷಕ ವಲಯದಲ್ಲಿ ಸಾಕಷ್ಟು ನಿರೀಕ್ಷೆ ಗರಿಗೆದರಿದ್ದವು. ಆದರೆ, ಇತ್ತೀಚಿನ ದಿನಗಳಲ್ಲಿ ಸುದೀಪ್ ವಿಕ್ರಾಂತ್ ರೋಣ ಸಿನಿಮಾದಲ್ಲಿಯೇ ಹೆಚ್ಚು ಬಿಜಿಯಾಗಿದ್ದರು. ಅವರ ನಿರ್ದೇಶನದ ಸಿನಿಮಾ ಬಗ್ಗೆ ಯಾವುದೇ ಮಾಹಿತಿ ಹೊರಬಿದ್ದಿರಲಿಲ್ಲ. ಇದೀಗ ಸ್ವತಃ ಅದನ್ನು ಸುದೀಪ್ ಹೇಳಿಕೊಂಡಿದ್ದಾರೆ. ‘ಸ್ಕ್ರಿಪ್ಟ್ ರೆಡಿಯಾಗಿದೆ… ಚೂರು ಟೈಮ್ ಸಿಗಬೇಕಷ್ಟೇ’ ಎಂದಿದ್ದಾರೆ.

    ಇದನ್ನೂ ಓದಿ: ಮತ್ತೆ ಭೂಗತ ಲೋಕದತ್ತ ಹೊರಳಿದ ಆರ್​ಜಿವಿ: ಐದು ಭಾಷೆಗಳಲ್ಲಿ ಬರಲಿದೆ ‘ಡಿ ಕಂಪನಿ‘ ಚಿತ್ರ

    ‘ಮೊದಲಿಗೆ ‘ವಿಕ್ರಾಂತ್ ರೋಣ’ ಸಿನಿಮಾ ಮುಗಿಸಿ ನನ್ನ ಕೈ ಬಿಟ್ಟರೆ, ಮತ್ತೊಂದು ಸಿನಿಮಾವನ್ನು ನಾನು ಆಯ್ದುಕೊಳ್ಳಬೇಕು. ಕಳೆದ ವರ್ಷವೇ ಈ ಸಿನಿಮಾ ಮುಗಿಯಬೇಕಿತ್ತು. ಕರೊನಾ ಹಿನ್ನೆಲೆಯಲ್ಲಿ ಇನ್ನೂ ಅದೇ ಸಿನಿಮಾ ಕೆಲಸದಲ್ಲಿದ್ದೇನೆ. ಇದನ್ನು ಹೊರತುಪಡಿಸಿದರೆ, ಕೆಲವರು ಹಲವು ವರ್ಷಗಳಿಂದ ಕಾದಿದ್ದಾರೆ. ಅವರ ಕಡೆಗೂ ಗಮನ ಹರಿಸಬೇಕು. ಇದರ ನಡುವೆ ನಾನು ನಿರ್ದೇಶನ ಮಾಡುವ ಸಿನಿಮಾದ ಸ್ಕ್ರಿಪ್ಟ್ ಸಂಪೂರ್ಣವಾಗಿದೆ. ಆ ಸಿನಿಮಾ ಶುರು ಮಾಡಲು ನನಗೆ ಸಮಯ ಬೇಕಾಗಿದೆ’ ಎಂದು ತಿಳಿಸಿದ್ದಾರೆ.

    ವಿಕ್ರಾಂತ್ ರೋಣ ನನ್ನಿಷ್ಟದ ಶೀರ್ಷಿಕೆ!
    ಇತ್ತೀಚಿಗಷ್ಟೇ ‘ಫ್ಯಾಂಟಮ್’ ಶೀರ್ಷಿಕೆಯ ಬದಲು ‘ವಿಕ್ರಾಂತ್ ರೋಣ’ ಟೈಟಲ್ ಅಂತಿಮ ಮಾಡಲಾಗಿದೆ. ಈ ಶೀರ್ಷಿಕೆ ಬದಲು ಮಾಡಿ ಎಂದು ನಿರ್ದೇಶಕರಿಗೆ ಮತ್ತು ನಿರ್ಮಾಪಕರಿಗೆ ಶೂಟಿಂಗ್‌ನ ಮೊದಲ ದಿನವೇ ಹೇಳಿದ್ದರಂತೆ ಸುದೀಪ್. ‘‘್ಯಾಂಟಮ್ ಚಿತ್ರೀಕರಣ ಶುರುವಾದ ಮೊದಲ ದಿನವೇ ಶೀರ್ಷಿಕೆ ಬದಲಿಸಿ ಎಂದು ನಾನು ಎಷ್ಟೋ ಸಲ ಹೇಳಿದ್ದೇನೆ. ಶೂಟ್‌ಗೂ ಮುನ್ನ ಫೋಟೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದೆ. ಅದರಲ್ಲಿನ ವಿಕ್ರಾಂತ್ ರೋಣ ಹೆಸರೇ ಎಲ್ಲರ ಅಚ್ಚು ಮೆಚ್ಚಾಗಿತ್ತು. ಆವತ್ತೇ ವಾಣಿಜ್ಯ ಮಂಡಳಿಯಲ್ಲಿ ಶೀರ್ಷಿಕೆಯನ್ನು ನೋಂದಣಿ ಮಾಡಿಸಲು ಹೇಳಿದ್ದೆ. ಅದನ್ನೇ ಫೈನಲ್ ಮಾಡಿ ಎಂದೂ ನಿರ್ಮಾಪಕರಿಗೆ ಹೇಳಿದ್ದೆ. ಆವತ್ತು ನನ್ನ ಮಾತು ಕೇಳಲಿಲ್ಲ. ಇದೀಗ ಆವತ್ತಿನ ನನ್ನ ಮಾತು ಒಪ್ಪಲು ಒಂದು ಕೋವಿಡ್ ಬರಬೇಕಾಯಿತು’ ಎಂದು ಶೀರ್ಷಿಕೆ ಹಿಂದಿನ ವಿಚಾರವನ್ನು ಹಂಚಿಕೊಂಡಿದ್ದಾರೆ.

    ಇದನ್ನೂ ಓದಿ: ಒಂದು ಹಂತ ಮುಗಿಸಿದ ‘ಮರ್ಧನಿ‌’; ಮಾರ್ಚ್​​ನಲ್ಲಿ ಮತ್ತೆ ಚಿತ್ರೀಕರಣ

    * ದೇವರು ಕೊಟ್ಟಿದ್ದಾನೆ, ಅದನ್ನೇ ಕೊಡುತ್ತಿದ್ದೇನಷ್ಟೇ!
    ಕಿಚ್ಚ ಸುದೀಪ್ ನಟನೆಯ ಜತೆಗೆ ಸಮಾಜಮುಖಿ ಕೆಲಸಗಳಲ್ಲಿಯೂ ಮುಂದು. ಶಾಲೆ ದತ್ತು ಸೇರಿ ಹಲವು ಸಾಕಷ್ಟು ಕೆಲಸಗಳನ್ನು ಅವರ ಚಾರಿಟೇಬಲ್ ಟ್ರಸ್ಟ್ ಮೂಲಕ ಮಾಡುತ್ತ ಬರುತ್ತಿದ್ದಾರೆ. ಆ ಸೇವೆಗೆ ಸುದೀಪ್ ನೀಡುವ ಉತ್ತರ ಹೀಗಿದೆ. ‘ಮೊದಲೆಲ್ಲ ಏನಾದರೂ ಮಾಡಬೇಕೆಂಬುದಿತ್ತು. ಆದರೆ, ಆವಾಗ ದುಡ್ಡು ಇರಲಿಲ್ಲ. ಇದೀಗ ದೇವರು ಕೊಟ್ಟಿದ್ದಾನೆ. ಅಷ್ಟಕ್ಕೂ ಈ ಕೆಲಸಗಳ ಸಂಪೂರ್ಣ ಕ್ರೆಡಿಟ್ ನಮ್ಮ ಮನೆಯವರಿಗೆ ಸೇರಬೇಕು. ಅವರೆಲ್ಲರೂ ಸೇರಿ ಏನೆನೋ ಮಾಡುತ್ತಿದ್ದಾರೆ. ಏಕೆಂದರೆ, ಕರೊನಾ ಅನ್ನೋ ಕಾಲಘಟ್ಟವನ್ನು ನಾವು ಎದುರಿಸಿ ಬಂದಿದ್ದೇವೆ. ಹಾಗಾಗಿ ನಾವೆಷ್ಟು ಪವರ್‌ಫುಲ್​ ಇದ್ದೇವೆ ಎಂಬುದು ಮುಖ್ಯವಲ್ಲ. ಆ ನಮ್ಮ ಪವರ್‌ನಿಂದ ಎಷ್ಟು ಮಂದಿಯನ್ನು ಮೇಲಕ್ಕೆ ಎತ್ತುತ್ತೇವೆ ಎಂಬುದು ಮುಖ್ಯ. ಅದೇ ರೀತಿ ಆ ಕೆಲಸವೂ ಸಣ್ಣದಾಗಿ ನಡೆದಿದೆ’ ಎನ್ನುತ್ತಾರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts