More

    ನಿರ್ದೇಶಕ ಅನೂಪ್ ಭಂಡಾರಿಗೆ ದುಬಾರಿ SUV ಕಾರು ಗಿಫ್ಟ್ ಕೊಟ್ಟ ಕಿಚ್ಚ ಸುದೀಪ್!

    ಕರುನಾಡ ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ಸ್ಯಾಂಡಲ್​ವುಡ್​ನಲ್ಲಿ 26 ವರ್ಷ ಪೂರೈಸಿದ್ದಾರೆ. ಅವರ ಸಿನಿಮಾಗಳು, ಬಿಗ್​ಬಾಸ್ ಶೋ ಅಂದರೆ ಅವರ ಅಭಿಮಾನಿಗಳಿಗೆ ಅಲ್ಲದೇ ಎಲ್ಲರಿಗೂ ಬಹಳಷ್ಟು ಇಷ್ಟ ಎಂದೇ ಹೇಳಬೇಕು. ಆದರೆ, ನಟ ಕಿಚ್ಚ ಸುದೀಪ್ ಅವರ ಸಿನಿಮಾಗಳು ಮತ್ತು ಅವರ ನಿರೂಪಣೆಯ ಜತೆಗೆ ಅವರ ವ್ಯಕ್ತಿತ್ವ ಕೂಡಾ ಅಭಿಮಾನಿಗಳಿಗೆ ತುಂಬಾನೆ ಇಷ್ಟ. ಕಾರಣ, ಜನರಿಗೆ ಸಹಾಯ ಮಾಡುವುದು ಹಾಗೂ ಮುಖ್ಯವಾದ ಸಂದರ್ಭಗಳಲ್ಲಿ ಅವರಿಗೆ ಹತ್ತಿರವಾದವರಿಗೆ ಉಡುಗೊರೆಗಳನ್ನು ನೀಡಿ ಅವರ ಮುಖದಲ್ಲಿ ಸಂತಸ ಮೂಡಿಸುವುದು ಕಿಚ್ಚ ಸುದೀಪ್ ಅವರು ಸದಾ ಮಾಡುತ್ತಾರೆ
    ಹೌದು, ಸದ್ಯ ತಮ್ಮ ಬಹುಕಾಲದ ಗೆಳೆಯ ಹಾಗೂ ಮುಂಬರುವ ಅವರ ವಿಕ್ರಾಂತ್ ರೋಣ‘ ಚಿತ್ರದ ನಿರ್ದೇಶಕ ಅನೂಪ್ ಭಂಡಾರಿಗೆ ದುಬಾರಿ ಕಾರುನ್ನು ಉಡುಗೊರೆಯಾಗಿ ನೀಡಿದ್ದಾರೆ. ಕಾರಣ, ಮಾ. 2 ರಂದು ನಿರ್ದೇಶಕ ಅನೂಪ್ ಭಂಡಾರಿ ಅವರು 40 ನೇ ವಸಂತಕ್ಕೆ ಕಾಲಿಟ್ಟರು. ಹಾಗಾಗಿ, ನಿರ್ದೇಶಕ ಅನೂಪ್ ಭಂಡಾರಿ ಅವರ ಹುಟ್ಟು ಹಬ್ಬಕ್ಕೆ ನಟ ಕಿಚ್ಚ ಸುದೀಪ್ ಅವರು ದುಬಾರಿ SUV ಕಾರನ್ನು ಗಿಫ್ಟ್ ಕೊಟ್ಟಿದ್ದಾರೆ. ಕಿಚ್ಚ ಸುದೀಪ್ ಅವರು ಅನೂಪ್​ಗೆ ಗಿಫ್ಟ್ ಕೊಟ್ಟಿರುವ ವಿಡಿಯೋವೊಂದನ್ನು ಕೆಲವರು ಟ್ವಿಟರ್​ನಲ್ಲಿ ಶೇರ್ ಮಾಡಿಕೊಂಡಿದ್ದು, ಆ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸುದೀಪ್ ಅವರ ಅಭಿಮಾನಿಗಳ ಮನಗೆದ್ದಿದೆ. ಇನ್ನು, ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ

    ಆರ್​ಆರ್​ಆರ್ ನೋಡಲು ಬಂದ ಅಪ್ಪು ಅಭಿಮಾನಿಗಳು ಮಾಡಿದ ಕೆಲಸ ಮನಕಲಕುತ್ತೆ!

    ರಕ್ತದಲ್ಲಿ ‘ದಿ ಕಾಶ್ಮೀರ್​ ಫೈಲ್ಸ್​’ ಪೋಸ್ಟರ್​ ಬಿಡಿಸಿದ ಮಹಿಳೆ! ಆ ಮಹಿಳೆಯ ನಂಬರ್ ಕೇಳಿದ ವಿವೇಕ್…

    ಪ್ರಥಮ ಬಾರಿಗೆ ಡಾ.ರಾಜ್​, ಪುನೀತ್ ಪ್ರತಿಮೆಗಳನ್ನು ಒಟ್ಟಿಗೆ ಕಂಡ ಅಭಿಮಾನಿಗಳು! ಫೋಟೋಗಳು ವೈರಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts