More

    ಟಾಲಿವುಡ್ ಮೇಕರ್ಸ್​ಗೆ ಬೇಡವಾದ್ರಾ ಕಿಯಾರಾ? ಹಾರುವಂತಿದೆ ಅಡ್ವಾಣಿಯ ಸಂಭಾವನೆ

    ಕಿಯಾರಾ ಅಡ್ವಾಣಿಗೆ ಬಾಲಿವುಡ್​ನಲ್ಲಿ ಅದೆಷ್ಟು ಬೇಡಿಕೆ ಇದೆಯೋ, ಟಾಲಿವುಡ್​ನಲ್ಲೂ ಅಷ್ಟೇ ಬೇಡಿಕೆ ಇದೆ. ಅದಕ್ಕೆ ಕಾರಣ, ಅವರು ಅಭಿನಯಿಸಿದ ಎರಡು ತೆಲುಗು ಚಿತ್ರಗಳೂ ಯಶಸ್ವಿಯಾಗಿದ್ದು. ಈ ನಿಟ್ಟಿನಲ್ಲಿ, ಟಾಲಿವುಡ್​ನ ಹಲವು ನಿರ್ವಪಕರು ಮತ್ತು ನಿರ್ದೇಶಕರು, ತಮ್ಮ ಚಿತ್ರದಲ್ಲಿ ನಟಿಸಲಿ ಎಂದು ಆಸೆಪಟ್ಟು ಅವರಿಗೆ ಆಫರ್ ಕೊಡುತ್ತಲೇ ಇದ್ದಾರೆ.

    ಆದರೆ, ಕಿಯಾರಾ ಒಂದು ಮಾತು ಅವರನ್ನೆಲ್ಲ ಬೆಚ್ಚಿಬೀಳಿಸುತ್ತಿದೆ. ಅಷ್ಟೇ ಅಲ್ಲ ಅವರ ಸಹವಾಸವೇ ಸಾಕಪ್ಪ ಎನ್ನುತ್ತಿದ್ದಾರೆ. ಇದೆಲ್ಲದಕ್ಕೂ ಕಾರಣವಾಗಿದ್ದು ಏರಿಕೆಯಾದ ಸಂಭಾವನೆ!

    ಹೌದು, ಒಂದು ಚಿತ್ರಕ್ಕೆ ಮೂರು ಕೋಟಿ ರೂ.ಗಳನ್ನು ಸಂಭಾವನೆಯಾಗಿ ಕಿಯಾರಾ ಕೇಳುತ್ತಿದ್ದಾರಂತೆ. ಅದೇ ಕಾರಣಕ್ಕೆ ಅವರನ್ನು ಕಂಡರೆ ಟಾಲಿವುಡ್ ನಿರ್ವಪಕರು ಮತ್ತು ನಿರ್ದೇಶಕರು ಬೆಚ್ಚಿಬೀಳುತ್ತಾರೆ. ಬಹುಶಃ ಈ ನಟಿ ತಮ್ಮ ಸಂಭಾವನೆಯಲ್ಲಿ ಒಂದಿಷ್ಟು ರಿಯಾಯ್ತಿ ತೋರಿಸಿದ್ದರೆ, ಈ ಎರಡು ವರ್ಷಗಳಲ್ಲಿ ಕನಿಷ್ಠ ಒಂದು ಡಜನ್ ಚಿತ್ರಗಳನ್ನು ಒಪ್ಪಿಕೊಳ್ಳಬಹುದಿತ್ತಂತೆ.

    ಏಕೆಂದರೆ, ಕಳೆದ ಎರಡು ವರ್ಷಗಳಲ್ಲಿ ಟಾಲಿವುಡ್​ನ ಎಲ್ಲ ದೊಡ್ಡ ಚಿತ್ರಗಳಲ್ಲಿ ನಟಿಸುವುದಕ್ಕೆ ಕಿಯಾರಾಗೆ ಆಫರ್ ಕೊಡಲಾಗಿತ್ತಂತೆ. ಆದರೆ, ಅವರು ತಮ್ಮ ಸಂಭಾವನೆಯಲ್ಲಿ ಸ್ವಲ್ಪವೂ ಕಡಿಮೆ ಮಾಡಿಕೊಳ್ಳದ ಕಾರಣ, ಆಕೆಗೆ ನೀಡಲಾಗಿದ್ದ ಆಫರ್​ಗಳೆಲ್ಲ ಪರರ ಪಾಲಾಗಿದೆ. ಹಾಗಂತ ಕಿಯಾರಾ ಏನೂ ಖಾಲಿ ಕುಳಿತಿಲ್ಲ. ಟಾಲಿವುಡ್ ಅಲ್ಲದಿದ್ದರೂ ಬಾಲಿವುಡ್​ನಲ್ಲಿ ಬಿಜಿಯಾಗಿದ್ದಾರೆ. ಈಗಾಗಲೇ ಕೈಯಲ್ಲಿ ಮೂರ್ನಾಲ್ಕು ಚಿತ್ರಗಳಿದ್ದು, ಬಾಲಿವುಡ್​ನಲ್ಲಿ ಕೇಳಿದಷ್ಟು ಸಂಭಾವನೆ ಕೊಡಲಾಗುತ್ತಿದೆಯಂತೆ. -ಏಜೆನ್ಸೀಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts