More

    ಖುಷ್ಬೂ ಟ್ವಿಟರ್ ಖಾತೆ​ ಮತ್ತೆ ಹ್ಯಾಕ್​: ಟ್ವೀಟ್ಸ್​, ಪೋಸ್ಟ್​ಗಳೆಲ್ಲ ಡಿಲೀಟ್​; ಪ್ರೊಫೈಲ್, ಕವರ್​ ಫೋಟೋ ಕೂಡ ಚೇಂಜ್​!

    ಚೆನ್ನೈ: ನಟಿ, ರಾಜಕಾರಣಿ ಖುಷ್ಬೂ ಅವರ ಟ್ವಿಟರ್​ ಖಾತೆಯನ್ನು ಮತ್ತೊಮ್ಮೆ ಹ್ಯಾಕ್​ ಮಾಡಲಾಗಿದೆ. ಇದಕ್ಕೂ ಮುನ್ನ 2020ರ ಏಪ್ರಿಲ್ ತಿಂಗಳಲ್ಲಿ ಹ್ಯಾಕ್​ ಮಾಡಲಾಗಿತ್ತು. ಬಳಿಕ ಅಭಿಮಾನಿಗಳ ನೆರವಿನಿಂದ​ ಸರಿಪಡಿಸಿಕೊಂಡಿದ್ದರು. ಆದರೆ, ಈ ಬಾರಿ ಹ್ಯಾಕರ್​ ಖುಷ್ಬೂ ಅವರ ಪ್ರೊಫೈಲ್​ ಹೆಸರನ್ನು Briann ಎಂದು ಬದಲಾಯಿಸಿದ್ದಾನೆ.

    ಕೇವಲ ಹೆಸರು ಮಾತ್ರವಲ್ಲ ಕವರ್​ ಫೋಟೋ ಕೂಡ ಬದಲಾಗಿದೆ. ಅಲ್ಲದೆ, ನಟಿ ಮಾಡಿದಂತಹ ಎಲ್ಲ ಟ್ವೀಟ್ಸ್​ ಮತ್ತು ಪೋಸ್ಟ್​ಗಳನ್ನು ಡಿಲೀಟ್​ ಮಾಡಲಾಗಿದೆ. ಡಿಸ್​ಪ್ಲೇ ಇಮೇಜ್​ ಕೂಡ ಬದಲಾಗಿದೆ.

    ಖುಷ್ಬೂ ಟ್ವಿಟರ್ ಖಾತೆ​ ಮತ್ತೆ ಹ್ಯಾಕ್​: ಟ್ವೀಟ್ಸ್​, ಪೋಸ್ಟ್​ಗಳೆಲ್ಲ ಡಿಲೀಟ್​; ಪ್ರೊಫೈಲ್, ಕವರ್​ ಫೋಟೋ ಕೂಡ ಚೇಂಜ್​!

    2020ರ ಏಪ್ರಿಲ್​ನಲ್ಲಿ ಟ್ವಿಟರ್​ ಹ್ಯಾಕ್​ ಆಗಿದ್ದ ಸಂದರ್ಭದಲ್ಲಿ ಖುಷ್ಬೂ ಇನ್​ಸ್ಟಾಗ್ರಾಂನಲ್ಲಿ ಅಭಿಮಾನಿಗಳ ನೆರವು ಕೊರಿದ್ದರು. ನನ್ನ ಖಾತೆಯನ್ನು ಯಾರೋ ಹ್ಯಾಕ್​ ಮಾಡಿದ್ದಾರೆ. ಮೂರು ವಿವಿಧ ಲೊಕೇಶನ್​ಗಳಿಂದ ಲಾಗಿನ್​ ಆಗಲೂ ಪ್ರಯತ್ನ ನಡೆದಿದೆ, ನಿಮ್ಮ ಖಾತೆಯ ಪಾಸ್​ವರ್ಡ್​ ಅನ್ನು ಬದಲಾಯಿಸಿ ಎಂದು ಟ್ವಿಟರ್​ ಹೇಳಿದೆ. ಆದರೆ, ನನಗೆ ಬದಲಾಯಿಸಲು ತಿಳಿಯುತ್ತಿಲ್ಲ. ಟ್ವಿಟರ್​ ಹೇಳಿರುವುದು ಸಹ ಗೊತ್ತಾಗುತ್ತಿಲ್ಲ. ಹೀಗಾಗಿ ನನಗೆ ಯಾರಾದರೂ ಸಹಾಯ ಮಾಡಿ ಎಂದು ಖುಷ್ಬೂ ಅಭಿಮಾನಿಗಳ ನೆರವು ಕೋರಿದ್ದರು.

    ಇದಾದ ಬಳಿಕ ಅಭಿಮಾನಿಗಳ ನೆರವಿನಿಂದಲೇ ತಮ್ಮ ಟ್ವಿಟರ್​ ಖಾತೆಯನ್ನು ಖುಷ್ಬೂ ಮರಳಿ ಪಡೆದುಕೊಂಡಿದ್ದರು. ಆದರೆ, ಇದೀಗ ಮತ್ತೊಮ್ಮೆ ಹ್ಯಾಕ್​ ಮಾಡಿದ್ದು, ಈ ಬಾರಿ ಇಡೀ ಖಾತೆಯನ್ನೇ ಬದಲಾಯಿಸಲಾಗಿದೆ.

    ಇನ್ನು ಸಿನಿಮಾ ವಿಚಾರಕ್ಕೆ ಬಂದರೆ ಖುಷ್ಬೂ ಅವರು ರಜಿನಿಕಾಂತ್​ ಅವರ ಮುಂದಿನ ಚಿತ್ರ ಅಣ್ಣಾತೆಯಲ್ಲಿ ಕಮ್​ಬ್ಯಾಕ್​ ಮಾಡಿದ್ದಾರೆ. ಚಿತ್ರದಲ್ಲಿ ಖುಷ್ಬೂ ರಜಿನಿಕಾಂತ್​ ಪತ್ನಿಯ ಪಾತ್ರ ಮಾಡಿದ್ದಾರೆಂದು ತಿಳಿದುಬಂದಿದೆ. (ಏಜೆನ್ಸೀಸ್​)

    ಬಕ್ರೀದ್​ ಹಬ್ಬಕ್ಕೆ ಕೋವಿಡ್​ ನಿರ್ಬಂಧಗಳಿಂದ ವಿನಾಯಿತಿ: ಕೇರಳ ಸರ್ಕಾರಕ್ಕೆ ಸುಪ್ರೀಂಕೋರ್ಟ್​ ತರಾಟೆ

    ಚುನಾವಣೆ ಹೊಸ್ತಿಲಲ್ಲೇ ಕಾಂಗ್ರೆಸ್​ಗೆ ಬಿಗ್​ ಶಾಕ್​! ಅಧ್ಯಕ್ಷ ಸೇರಿದಂತೆ ಎಂಟು ಮಂದಿ ಶಾಸಕರು ಬಿಜೆಪಿಗೆ ಸೇರ್ಪಡೆ

    ರೈಲಿನಡಿ ಸಿಲುಕಿದರೂ ಮರುಜೀವ ಪಡೆದ ವೃದ್ಧ- ಮೈ ಝುಂ ಎನ್ನುವ ವಿಡಿಯೋ ಇಲ್ಲಿದೆ ನೋಡಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts