More

    ಬಕ್ರೀದ್​ ಹಬ್ಬಕ್ಕೆ ಕೋವಿಡ್​ ನಿರ್ಬಂಧಗಳಿಂದ ವಿನಾಯಿತಿ: ಕೇರಳ ಸರ್ಕಾರಕ್ಕೆ ಸುಪ್ರೀಂಕೋರ್ಟ್​ ತರಾಟೆ

    ನವದೆಹಲಿ: ಬಕ್ರೀದ್​ ಹಬ್ಬದ ಹಿನ್ನೆಲೆಯಲ್ಲಿ ಕೋವಿಡ್​ ನಿರ್ಬಂಧಗಳಿಂದ ಮೂರು ದಿನಗಳವರೆಗೆ ವಿನಾಯಿತಿ ನೀಡಿರುವ ಕೇರಳ ಸರ್ಕಾರವನ್ನು ಸುಪ್ರೀಂಕೋರ್ಟ್​ ಮಂಗಳವಾರ ತರಾಟೆಗೆ ತೆಗೆದುಕೊಂಡಿದೆ.

    ಲಾಕ್​ಡೌನ್ ಮಾನದಂಡಗಳನ್ನು ಸಡಿಲಿಸಬೇಕು ಎಂಬ ವ್ಯಾಪಾರಿಗಳ ಬೇಡಿಕೆಗೆ ಕೇರಳ ಸರ್ಕಾರ ಮಣಿದಿರುವುದು ಆಘಾತಕಾರಿ ಸಂಗತಿ ಎಂದು ಸುಪ್ರೀಂಕೊರ್ಟ್​ ಅಭಿಪ್ರಾಯಪಟ್ಟಿದೆ.

    ಮಾರುಕಟ್ಟೆಗಳಲ್ಲಿರುವ ಒತ್ತಡ ಗುಂಪುಗಳು ಪ್ರತಿಯೊಬ್ಬರ ಆರೋಗ್ಯದ ಹಕ್ಕಿನ ಮೇಲೆ ಪರಿಣಾಮ ಬೀರಲು ಅನುಮತಿ ನೀಡಲಾಗುವುದಿಲ್ಲ ಎಂದು ಸುಪ್ರೀಂಕೊರ್ಟ್​ ಕೇರಳ ಸರ್ಕಾರಕ್ಕೆ ಹೇಳಿದೆ. ಅಲ್ಲದೆ, ಕೇರಳ ಸರ್ಕಾರದ ಅಧಿಸೂಚನೆಯನ್ನು ರದ್ದು ಮಾಡಲಾಗುವುದಿಲ್ಲ. ನೀವು ತಡೆಯಲು ಪ್ರಯತ್ನಿಸುತ್ತಿರುವುದು ಈಗಾಗಲೇ ಸಂಭವಿಸಿದೆ ಎಂದು ಅರ್ಜಿದಾರರಿಗೆ ಕೋರ್ಟ್​ ಹೇಳಿದೆ.

    ಭಾರತದ ಸಂವಿಧಾನದ 144ನೇ ವಿಧಿಯ 21ನೇ ಪರಿಚ್ಛೇದವನ್ನು ಗಮನದಲ್ಲಿಟ್ಟುಕೊಳ್ಳಲು ಮತ್ತು ಕನ್ವರ್ ಯಾತ್ರಾ ಪ್ರಕರಣದಲ್ಲಿ ನಮ್ಮ ಆದೇಶಗಳನ್ನು ಅನುಸರಿಸಲು ನಾವು ಕೇರಳಕ್ಕೆ ನಿರ್ದೇಶಿಸುತ್ತೇವೆ ಎಂದು ಕೋರ್ಟ್​ ಹೇಳಿದೆ.

    ಬಕ್ರೀದ್​ಗಾಗಿ ಕರೊನಾ ನಿರ್ಬಂಧಗಳನ್ನು ಸಡಿಲಗೊಳಸಿದ್ದರ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂಕೋರ್ಟ್​ ಸೋಮವಾರ ಕೇರಳ ಸರ್ಕಾರವನ್ನು ಕೇಳಿತ್ತು.

    ಜುಲೈ 17ರಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪತ್ರಿಕಾಗೋಷ್ಠಿಯಲ್ಲಿ ರಿಯಾಯಿತಿಗಳನ್ನು ಘೋಷಿಸಿದ್ದರು. ಜುಲೈ 21 ರಂದು ಬಕ್ರೀದ್​ ಆಚರಿಸಲಾಗುತ್ತಿರುವ ಹಿನ್ನೆಲೆಯಲ್ಲಿ, ಜವಳಿ, ಪಾದರಕ್ಷೆಗಳ ಅಂಗಡಿಗಳು, ಆಭರಣಗಳು, ಅಲಂಕಾರಿಕ ಅಂಗಡಿಗಳು, ಗೃಹೋಪಯೋಗಿ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳು ಮತ್ತು ಎಲೆಕ್ಟ್ರಾನಿಕ್ ವಸ್ತುಗಳು, ಎಲ್ಲಾ ರೀತಿಯ ದುರಸ್ತಿ ಅಂಗಡಿಗಳು ಮತ್ತು ಅಗತ್ಯ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳನ್ನು ಜುಲೈ 18 ಮತ್ತು 20ರಂದು ಬೆಳಗ್ಗೆ 7 ರಿಂದ ರಾತ್ರಿ 8 ರವರೆಗೆ ಎ, ಬಿ ಮತ್ತು ಸಿ ವಿಭಾಗಗಳಲ್ಲಿ ತೆರೆಯಲು ಅನುಮತಿಸಲಾಗುವುದು ಎಂದು ಹೇಳಿದ್ದರು.

    ಡಿ ವರ್ಗದ ಪ್ರದೇಶಗಳಲ್ಲಿ ಅಂಗಡಿಗಳು ಜುಲೈ 19 ರಂದು ಮಾತ್ರ ಕಾರ್ಯನಿರ್ವಹಿಸುತ್ತವೆ ಎಂದು ವಿಜಯನ್​ ಅವರು ಹೇಳಿದರು. (ಏಜೆನ್ಸೀಸ್​)

    ಶ್ರೀರಾಮನ ಪಟ್ಟಾಭಿಷೇಕ ಎಷ್ಟು ವೈಭವೋಪೇತವಾಗಿ ನೆರವೇರಲಿದೆ ಗೊತ್ತಾ? ಇಲ್ಲಿದೆ ಇನ್​ಸೈಡ್​ ಸ್ಟೋರಿ!

    ರೈಲಿನಡಿ ಸಿಲುಕಿದರೂ ಮರುಜೀವ ಪಡೆದ ವೃದ್ಧ- ಮೈ ಝುಂ ಎನ್ನುವ ವಿಡಿಯೋ ಇಲ್ಲಿದೆ ನೋಡಿ..

    ವಿರೋಧಿಗಳಿಗೆ ಸಿಎಂ ಟಕ್ಕರ್! ಬಿಎಸ್​ವೈಗೆ ಹೈಕಮಾಂಡ್ ಕೊಟ್ಟ ಆ ಎರಡು ಟಾಸ್ಕ್​ ಯಾವುವು?​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts