More

    ಚುನಾವಣಾ ಪ್ರಚಾರದ ನಡುವೆ ದೋಸೆ ಹಾಕಿದ ಖುಷ್​ಬೂ !

    ಚೆನ್ನೈ : ತಮಿಳುನಾಡಿನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಾಗಿ ಎಲ್ಲಾ ಅಭ್ಯರ್ಥಿಗಳೂ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಜನರ ನಡುವೆ ಹೋಗಿ ಆತ್ಮೀಯತೆ ತೋರಿಸುವುದು, ಎಲ್ಲರ ಗಮನ ಸೆಳೆಯುವಂಥ ಕೆಲಸಗಳನ್ನು ಮಾಡುವುದು ಚುನಾವಣಾ ಸಮಯದಲ್ಲಿ ಸಾಮಾನ್ಯವಾಗಿ ಕಂಡುಬರುವಂತಹವು.

    ಥೌಸೆಂಡ್​ ಲೈಟ್ಸ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ನಟಿ ಖುಷ್​ಬೂ ಸುಂದರ್ ಅಂಥದೇ ಒಂದು ಪ್ರಯತ್ನ ಮಾಡಿದ್ದಾರೆ. ಚುನಾವಣಾ ಪ್ರಚಾರದ ನಡುವೆ ನುಂಗಂಬಕ್ಕಂನ ವೆಸ್ಟ್ ಮಾಡ ರಸ್ತೆಯಲ್ಲಿ ದೋಸೆ ಸ್ಟಾಲ್​ ಒಂದಕ್ಕೆ ಭೇಟಿ ಕೊಟ್ಟ ಖುಷ್ಬೂ, ತಾವೇ ದೋಸೆ ಮಾಡುತ್ತಾ ನಿಂತುಬಿಟ್ಟರು!

    ದೊಡ್ಡ ಕಬ್ಬಿಣದ ಮೇಲೆ ‘ಸುಂದರ’ವಾದ ದೋಸೆಗಳನ್ನು ಹಾಕಿದ ಖುಷ್ಬೂ ಅವರನ್ನು ನೋಡಿ ಅವರ ಅನುಯಾಯಿಗಳು ಮತ್ತು ಸುತ್ತಮುತ್ತಲಿನ ಜನ ಹರ್ಷೋದ್ಗಾರ ಮಾಡಿದರು. (ಏಜೆನ್ಸೀಸ್)

    VIDEO | ಹೊರಟೇಬಿಟ್ಟಿತು ಪರಿಸರಸ್ನೇಹಿ ವಿದ್ಯುತ್ ರೈಲು… ನೀವೂ ನೋಡಿ!

    ಇರ್ಫಾನ್​ಗೆ ಅತ್ಯುತ್ತಮ ನಟ ಮತ್ತು ಜೀವಮಾನ ಸಾಧನೆ ಪ್ರಶಸ್ತಿ; ಹಲವು ಟ್ರೋಫಿ ಗೆದ್ದ ‘ಥಪ್ಪಡ್’ ಚಿತ್ರ

    ಸಮಾನ ನಾಗರಿಕ ಸಂಹಿತೆಯನ್ನು ಶ್ಲಾಘಿಸಿದ ಮುಖ್ಯ ನ್ಯಾಯಮೂರ್ತಿ ಬೊಬ್ಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts