More

    ನಾಮಪತ್ರದ ಜತೆ ಸಲ್ಲಿಸಲು 10 ಸಾವಿರ ರೂ. ಯಾರು ಕೊಡ್ತೀರಿ ಎಂದು ಕೇಳಿದ ಖರ್ಗೆ!

    ಬೆಂಗಳೂರು: ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಸೋಮವಾರ ನಾಮಪತ್ರ ಸಲ್ಲಿಸುವ ಮುನ್ನ ‘ನಾಮಪತ್ರದ ಜತೆ ಕೊಡಬೇಕಾದ 10 ಸಾವಿರ ರೂ. ಠೇವಣಿ ಹಣ ಯಾರು ಕೊಡ್ತೀರಿ’ ಎಂದು ಪ್ರಶ್ನಿಸಿದ ಪ್ರಸಂಗ ನಡೆಯಿತು.

    ನಾಮಪತ್ರ ಸಲ್ಲಿಸುವುದಕ್ಕೆ ಹೋಗುವ ಮುನ್ನ ಕೆಪಿಸಿಸಿ ಕಚೇರಿಗೆ ಬಂದ ಖರ್ಗೆ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಂದ ಬಿ ಫಾರ್ಮ್ ಸ್ವೀಕರಿಸಿದರು. ಆಗ ‘ನೀವೇ ನನ್ನನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದೀರಿ. ನಾಮಪತ್ರ ಸಲ್ಲಿಸುವಾಗ ಅದರ ಜತೆ 10 ಸಾವಿರ ರೂ. ಠೇವಣಿ ದುಡ್ಡು ಕೊಡಬೇಕಲ್ಲ, ಯಾರು ಕೊಡ್ತೀರಿ’ ಎಂದು ನೇರವಾಗಿ ಲಘುಧಾಟಿಯಲ್ಲಿ ಪ್ರಶ್ನಿಸಿದರು.

    ಇದನ್ನೂ ಓದಿ  ಕಾಂಗ್ರೆಸ್​ ಮತ್ತು ಜೆಡಿಎಸ್​ ಕಾರ್ಯಕರ್ತರೀಗ ಫುಲ್​ ಖುಷ್! ಕಾರಣ ಇಲ್ಲಿದೆ ನೋಡಿ…

    ಅದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ‘ನಾನು ಕೊಡ್ತೀನಿ’ ಎಂದು ಕಿಸೆಗೆ ಕೈ ಹಾಕಿಕೊಂಡರು. ಆದರೆ ಕಿಸೆಯಲ್ಲಿ ದುಡ್ಡಿರಲಿಲ್ಲ. ಪಕ್ಕದಲ್ಲೇ ಇದ್ದ ದಿನೇಶ್ ಗುಂಡೂರಾವ್ ಅವರತ್ತ ನೋಡಿದರು. ಆಗ ದಿನೇಶ್, ‘ನಾನು ಕೊಡ್ತೀನಿ ಇರಿ’ ಎಂದು ಜೇಬು ತಡಕಾಡಿಕೊಂಡರು.

    ಅಚ್ಚರಿಯೆಂದರೆ ಅವರ ಜೇಬಲ್ಲೂ ದುಡ್ಡಿರಲಿಲ್ಲ! ‘ಸ್ವಲ್ಪ ತಡೀರಿ, ಇಲ್ಲೇ ಕೊಡಿಸ್ತೀನಿ’ ಎಂದು ಹೇಳಿ ಅಕ್ಕಪಕ್ಕ ಇದ್ದ ಕಾರ‌್ಯಕರ್ತರ ಬಳಿ ವಿಚಾರಿಸಿದರು. ಕೊನೆಗೂ ಕಾರ‌್ಯಕರ್ತರೊಬ್ಬರು ಹಣ ನೀಡಿದರು. ನಂತರ ಖರ್ಗೆ ಮತ್ತು ಇತರ ಎಲ್ಲ ನಾಯಕರು ನಗುತ್ತ ನಾಮಪತ್ರ ಸಲ್ಲಿಸಲು ಹೋದರು.

    ಖರ್ಗೆ ನಾಮಪತ್ರ- ಜೆಡಿಎಸ್​ ಬೆಂಬಲದ ವಿಚಾರದ ಕುರಿತು ನಾಯಕರು ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts