More

    ನಾಯಕನ ಸ್ಥಾನ ನಿಷ್ಠೆಯಿಂದ ನಿಭಾಯಿಸಬೇಕು; ಎಂ.ಎಂ. ಖನ್ನೂರ

    ರಾಣೆಬೆನ್ನೂರ: ನಾಯಕನೆಂಬುದು ಒಂದು ಜವಾಬ್ದಾರಿಯುತ ಸ್ಥಾನವಾಗಿದ್ದು, ಅದನ್ನು ನಿಷ್ಠೆಯಿಂದ ನಿಭಾಯಿಸಬೇಕು. ನಾಯಕನು ಒಬ್ಬ ನಾವಿಕನಿದ್ದಂತೆ, ನಾವಿಕನಿಲ್ಲದ ಹಡಗು ಹೇಗೆ ಚಲಿಸದೋ ಹಾಗೆಯೇ ನಾಯಕನಿಲ್ಲದೆ ಯಾವ ಕೆಲಸಗಳು ಸುವ್ಯವಸ್ಥಿವಾಗಿ ನಡೆಯಲಾರವು ಎಂದು ಖನ್ನೂರ ವಿದ್ಯಾನಿಕೇತನ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಂ.ಎಂ. ಖನ್ನೂರ ಹೇಳಿದರು.
    ನಗರದ ಖನ್ನೂರ ವಿದ್ಯಾನಿಕೇತನ ಶಾಲೆಯಲ್ಲಿ ಸೋಮವಾರ ಏರ್ಪಡಿಸಿದ್ದ 2023-24ನೇ ಸಾಲಿನ ಶಾಲಾ ಸಂಸತ ಉದ್ಘಾಟಿಸಿ ಅವರು ಮಾತನಾಡಿದರು.
    ಶಾಲಾ ಹೆಡ್ ಬಾಯ್ ಆಗಿ ರಂಜಿತ ಶಾಸ್ತ್ರಿ ಹಾಗೂ ಹೆಡ್ ಗರ್ಲ್ ಆಗಿ ಹರ್ಷಿತಾ ಕೂನಬೇವು, ಉಪ ಹೆಡ್ ಬಾಯ್ ಗಗನದೀಪ ಆಡೂರ ಹಾಗೂ ಉಪ ಹೆಡ್ ಗರ್ಲ್ ಗಮ್ಯಾ, ಕ್ರೀಡಾ ವಿಭಾಗದ ನಾಯಕನಾಗಿ ಹಸದುಲ್ಲಾ ಹಾಗೂ ಉಪನಾಯಕನಾಗಿ ನಿಹಾಲ್ ಶಿಗ್ಗಾಂವಿ, ಶಿಸ್ತಿನ ವಿಭಾಗದ ನಾಯಕಿಯಾಗಿ ದೀಕ್ಷಾ ಹಾಗೂ ಚಿರಾಗ ಜೀರಾವಾಲ, ಸಾಂಸ್ಕೃತಿಕ ಚಟುವಟಿಕೆ ವಿಭಾಗದ ನಾಯಕರಾಗಿ ತರುಣ ಹಾಗೂ ಭಾವನಾ ಜೈನ್‌ಗೆ ಪದಗ್ರಹಣ ಮಾಡಲಾಯಿತು.
    ಪ್ರಾಚಾರ್ಯೆ ಸಮಿರ ಫರ್ನಾಂಡಿಸ್ ಪ್ರತಿಜ್ಞಾವಿಧಿ ಬೋಧಿಸಿದರು.
    ಸಂಸ್ಥೆಯ ಉಪಾಧ್ಯಕ್ಷೆ ಸುಲೋಚನ ಖನ್ನೂರ, ಚೇರ್ಮನ್ ಡಾ. ಪ್ರವೀಣ ಖನ್ನೂರ ಹಾಗೂ ಸಿಇಒ ಡಾ. ಶೈಲಶ್ರೀ ಖನ್ನೂರ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts