More

    ಕೆಜಿಎಫ್​ ಅಬ್ಬರ ಮುಂದುವರಿಕೆ; ಎರಡನೇ ದಿನ 200 ಕೋಟಿ ರೂ. ದಾಟಿದ ಗಳಿಕೆ..

    ಬೆಂಗಳೂರು: ಬಿಡುಗಡೆಯಾದ ಮೊದಲ ದಿನವೇ ನೂರು ಕೋಟಿ ಕ್ಲಬ್​ ಸೇರಿಕೊಂಡಿದ್ದ ಕೆಜಿಎಫ್​-ಚಾಪ್ಟರ್​ 2 ಸಿನಿಮಾದ ಎರಡನೇ ದಿನದ ಗಳಿಕೆ 200 ಕೋಟಿ ರೂ. ದಾಟಿದೆ. ಆ ಮೂಲಕ ಈ ಸಿನಿಮಾ ಗಳಿಕೆಯಲ್ಲೂ ಮಾನ್​ಸ್ಟರ್​ ಎಂಬುದನ್ನು ಸಾಬೀತುಪಡಿಸಿದೆ.

    ಬಹುನಿರೀಕ್ಷಿತ, ಅದ್ಧೂರಿ ನಿರ್ಮಾಣದ ಹಾಗೂ ಬಹುತಾರಾಗಣದ ಸಿನಿಮಾ ಕೆಜಿಎಫ್​-ಚಾಪ್ಟರ್ 2 ಜಗತ್ತಿನಾದ್ಯಂತ ತೆರೆ ಮೇಲೆ ಅಬ್ಬರಿಸುತ್ತ ಭಾರಿ ಮೆಚ್ಚುಗೆ ಗಳಿಸುತ್ತಿರುವ ಜತೆಗೆ ಅದರ ಗಳಿಕೆ ಎಷ್ಟಿರಬಹುದು ಎಂಬ ಕುತೂಹಲವೂ ಉಂಟಾಗಿದ್ದು, ಹುಬ್ಬೇರಿಸುವಂಥ ಗಳಿಕೆಯನ್ನೇ ತಂದುಕೊಟ್ಟಿದೆ.

    ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ.. ಹೀಗೆ ಐದು ಭಾಷೆಗಳಲ್ಲಿ ತೆರೆ ಕಂಡಿರುವ ಈ ಚಿತ್ರದ ಮೊದಲ ದಿನದ ಗಳಿಕೆ 134.5 ಕೋಟಿ ರೂ. ಆಗಿರುವುದನ್ನು ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಮ್ಸ್​ ನಿನ್ನೆ ಅಧಿಕೃತವಾಗಿ ತಿಳಿಸಿತ್ತು. ಇದೀಗ ಎರಡನೇ ದಿನದ ಗಳಿಕೆ ಕುರಿತು ಕೂಡ ಹೊಂಬಾಳೆ ಫಿಲ್ಮ್ಸ್​ ಅಧಿಕೃತ ಮಾಹಿತಿ ಹೊರಹಾಕಿದೆ. ಆ ಪ್ರಕಾರ ಚಿತ್ರ ಎರಡನೇ ದಿನಕ್ಕೆ ಭಾರತದಲ್ಲಿ ಎಲ್ಲ ಭಾಷೆಗಳಿಂದ ಒಟ್ಟು 240 ಕೋಟಿ ರೂ. ಗಳಿಸಿದೆ.

    ಬಾಲಿವುಡ್​ ಮೇಲೆ ಅಣುಬಾಂಬ್​!; ನಿರ್ದೇಶಕ ರಾಮ್​ಗೋಪಾಲ್​ ವರ್ಮಾ ಹೀಗಂದಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts