More

    ರಿಲೀಸ್ ಆದ ಒಂದೂವರೆ ತಾಸಲ್ಲಿ 1M ವೀವ್ಸ್ ಪಡೆದ ‘ಕೆಜಿಎಫ್: ಚಾಪ್ಟರ್ 2’ ಮೊದಲ ಹಾಡು!

    ಈಗಾಗಲೇ, ‘ಕೆಜಿಎಫ್: ಚಾಪ್ಟರ್ 2’ ಚಿತ್ರತಂಡ ಕೇವಲ ಒಂದು ಪೋಸ್ಟರ್ ಮತ್ತು ಒಂದು ಟೀಸರ್ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದು, ಇದೀಗ, ಮೊದಲ ಸಾಂಗ್​ನ ಲಿರಿಕಲ್ ವಿಡಿಯೋ ರಿಲೀಸ್ ಮಾಡಿದೆ. ಹೌದು, ‘ತೂಫಾನ್’ ಲಿರಿಕಲ್ ವಿಡಿಯೋ ಇಂದು ಬೆಳಿಗ್ಗೆ 11:07 ಕ್ಕೆ ರಿಲೀಸ್ ಆಗಿದೆ. ‘ಹೊಂಬಾಳೆ ಫಿಲ್ಮ್ಸ್​’ ಸಂಸ್ಥೆಯ ಈ ಹಾಡನ್ನು ರಿಲೀಸ್ ಮಾಡಿದ ಕೂಡಲೇ ಜನರ ನಿರೀಕ್ಷೆ ಮುಗಿಲುಮುಟ್ಟಿದೆ. ತೂಫಾನ್’ ಸಾಂಗ್ ನೋಡಿದ ಅಭಿಮಾನಿಗಳು ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಂದಹಾಗೆ, ಈ ಹಾಡಿಗೆ ರವಿ ಬಸ್ರೂರು ಅವರು ಸಂಗೀತ, ಸಾಹಿತ್ಯ ನೀಡಿದ್ದು, ಹಾಡು ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಮೂಡಿಬಂದಿದೆ. ‘ತೂಫಾನ್‘, ಲಿರಿಕಲ್ ಸಾಂಗ್ ಬಿಡುಗಡೆ ಆದ ಬಳಿಕ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ಬಗ್ಗೆ ಇನ್ನಷ್ಟು ನಿರೀಕ್ಷೆಗಳು ಹೆಚ್ಚಾಗುತ್ತಿವೆ.
    ಇನ್ನು, ರಿಲೀಸ್ ಆದ ಕೇವಲ ಒಂದೂವರೆ ಗಂಟೆಯಲ್ಲಿ ಕನ್ನಡ ಚಿತ್ರದ ಈ ಹಾಡು 1 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ. ಹಾಗೆ, ಕನ್ನಡ ಮಾತ್ರವಲ್ಲದೇ, ಹಿಂದಿ, ಮಲಯಾಳಂ, ತಮಿಳು ಮತ್ತು ತೆಲುಗಿನಲ್ಲಿಯೂ ‘ಕೆಜಿಎಫ್: ಚಾಪ್ಟರ್-2’ ಚಿತ್ರ ಬಿಡುಗಡೆ ಆಗಲಿದ್ದು, ಆ ಎಲ್ಲ ಭಾಷೆಗಳಲ್ಲೂ ‘ತೂಫಾನ್’ ಹಾಡಿನ ಲಿರಿಕಲ್ ವಿಡಿಯೋ ರಿಲೀಸ್ ಆಗಿ ಲಕ್ಷ ಲಕ್ಷ ವೀವ್ಸ್ ಪಡೆದುಕೊಂಡಿದೆ. ಚಿತ್ರದ ಮೊದಲು ಹಾಡು ಕೇಳಿದ ಅಭಿಮಾನಿಗಳು ಉಳಿದ ಹಾಡುಗಳಿಗಾಗಿ ಕಾದು ಕುದುಕುಳಿತ್ತಿದ್ದಾರೆ. ಈಗ ರಿಲೀಸ್ ಆಗಿರುವ ಮೊದಲ ಹಾಡು ‘ತೂಫಾನ್’ನಲ್ಲಿ ಕೆಲವು ಡೈಲಾಗ್​ಗಳು ಕೂಡಾ ಹೈಲೈಟ್ ಆಗಿವೆ. ಏಪ್ರಿಲ್ 14 ರಂದು ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ವಿಶ್ವಾದ್ಯಂತ ರಿಲೀಸ್​ ಆಗಲಿದೆ. ಈಗಾಗಲೇ ವಿದೇಶದ ಥಿಯೇಟರ್​ಗಳಲ್ಲೂ ಸ್ಟ್ಯಾಂಡಿಗಳನ್ನು ನಿಲ್ಲಿಸಲು ತಯಾರಿ ನಡೆಯುತ್ತಿದೆ

    ರಿಲೀಸ್ ಆದ ಒಂದೂವರೆ ತಾಸಲ್ಲಿ 1M ವೀವ್ಸ್ ಪಡೆದ 'ಕೆಜಿಎಫ್: ಚಾಪ್ಟರ್ 2' ಮೊದಲ ಹಾಡು!

    ಮತ್ತೆ ಮುನ್ನೆಲೆಗೆ ಬಂದ ಭಾರತ ಕ್ರಿಕೆಟಿಗನ ಲವ್ ಸ್ಟೋರಿ! ಊರ್ವಶಿ-ರಿಷಭ್ ರಿಲೇಶನ್​ಶಿಪ್ ನಿಜವೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts