More

    KGF-2 ಡಬ್ಬಿಂಗ್ ಮುಗಿಸಿದ ‘ಅಧೀರ’; ಡಬ್ಬಿಂಗ್ ಮಾಡಿದ್ದು ಹಿಂದಿಯಲ್ಲೊ ಅಥವಾ ಕನ್ನಡದಲ್ಲೊ?

    ಮುಂಬೈ: ಕಳೆದ ವರ್ಷ ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಬಾಲಿವುಡ್ ನಟ ಸಂಜಯ್ ದತ್ ಅವರು ಈಗ ಕೆಜಿಎಫ್‌ನಲ್ಲಿನ ಶಕ್ತಿಶಾಲಿ ಅಧೀರ ಪಾತ್ರಕ್ಕೆ ಡಬ್ಬಿಂಗ್ ಪೂರ್ಣಗೊಳಿಸಿದ್ದಾರೆ. ‘ಕೆಜಿಎಫ್: ಅಧ್ಯಾಯ 2’ ಮುಂದಿನ ವರ್ಷ ಬಿಡುಗಡೆಯಾಗುವ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಇದು ಕನ್ನಡದಲ್ಲಿ ನಟ ಸಂಜಯ್ ದತ್ ಅವರ ಮೊದಲ ಸಿನಿಮಾ. ಕೆಲವು ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ, ಸಂಜಯ್ ದತ್, ”#KGF-2 ಗಾಗಿ ಡಬ್ಬಿಂಗ್ ಸೆಷನ್‌ಗಳನ್ನು ಪೂರ್ಣಗೊಳಿಸಲಾಗಿದೆ” ಎಂದು ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ, ಅವರು ಹಂಚಿಕೊಂಡಿರುವ ಈ ಫೋಟೋಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಇನ್ನು, ನಿರ್ದೇಶಕ ಪ್ರಶಾಂತ್ ನೀಲ್ ಅವರು ಸಂಜಯ್ ದತ್ ಅವರ ಅಧೀರ ಪಾತ್ರಕ್ಕೆ ಧ್ವನಿ ನೀಡಿದ್ದಕ್ಕಾಗಿ ಧನ್ಯವಾದ ಹೇಳಿದ್ದಾರೆ. 

    KGF-2 ಡಬ್ಬಿಂಗ್ ಮುಗಿಸಿದ 'ಅಧೀರ'; ಡಬ್ಬಿಂಗ್ ಮಾಡಿದ್ದು ಹಿಂದಿಯಲ್ಲೊ ಅಥವಾ ಕನ್ನಡದಲ್ಲೊ? KGF-2 ಡಬ್ಬಿಂಗ್ ಮುಗಿಸಿದ 'ಅಧೀರ'; ಡಬ್ಬಿಂಗ್ ಮಾಡಿದ್ದು ಹಿಂದಿಯಲ್ಲೊ ಅಥವಾ ಕನ್ನಡದಲ್ಲೊ?

    ಇದೀಗ, ಸ್ವತಃ ಸಂಜಯ್ ದತ್ ಅವರೆ ಡಬ್ಬಿಂಗ್ ನೀಡಿದ್ದು ಚಿತ್ರಪ್ರೇಮಿಗಳಲ್ಲಿ ಹೆಚ್ಚು ನಿರೀಕ್ಷೆ ಮೂಡಿಸಿದೆ. ಹೀಗಿದ್ದರು, ಸಂಜಯ್ ದತ್ ಡಬ್ಬಿಂಗ್ ಮಾಡಿದ್ದು ಚಿತ್ರದ ಹಿಂದಿ ಅವತರಣಿಕೆಗೆಯೇ ಅಥವಾ ಕನ್ನಡಕ್ಕೆ ಎಂಬ ಕುತೂಹಲ ಅಭಿಮಾನಿಗಳನ್ನು ಕಾಡುತ್ತಿದೆ. ಈ ಕುತೂಹಲಕ್ಕೆ ಸಿನಿಮಾ ತಂಡವೆ ಉತ್ತರ ಕೊಡಬೇಕಿದೆ. ನಟ ಯಶ್ ಮತ್ತು ನಟಿ ಶ್ರೀನಿಧಿ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ರವೀನಾ ಟಂಡನ್, ನಾಗಾಭರಣ, ಪ್ರಕಾಶ್ ರಾಜ್, ಮಾಳವಿಕಾ ಅವಿನಾಶ್, ಅಚ್ಯುತ್ ಕುಮಾರ್, ಅರ್ಚನಾ ಜೋಯಿಸ್ ನಟಿಸಿರುವ ಈ ಸಿನಿಮಾ ಹಿಂದಿ, ಮಲಯಾಳಂ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಯಶ್ ಮತ್ತು ನಟ ಸಂಜಯ್ ದತ್ ಅವರನ್ನು ಒಳಗೊಂಡ ಕೆಜಿಎಫ್‌ನ ಕ್ಲೈಮ್ಯಾಕ್ಸ್ ಚಿತ್ರೀಕರಣವೂ ಕಳೆದ ಡಿಸೆಂಬರ್‌ನಲ್ಲಿ ಹೈ ಆಕ್ಟೇನ್ ಆಕ್ಷನ್ ಸೀಕ್ವೆನ್ಸ್‌ಗಳೊಂದಿಗೆ ಹೈದರಾಬಾದಿನಲ್ಲಿ ಮಾಡಿ ಮುಗಿಸಲಾಯಿತು. ‘ಕೆಜಿಎಫ್: ಅಧ್ಯಾಯ 2’ 2022 ಏಪ್ರಿಲ್ 14 ರಂದು ತೆರೆಗೆ ಅಪ್ಪಳಿಸಲಿದೆ. 

    ಅಪ್ಪು ಸಮಾಧಿ ದರ್ಶನಕ್ಕೆಂದು 160 ಕಿ.ಮಿ ಸೈಕಲ್ ಯಾತ್ರೆ ಮಾಡಿದ ಅಭಿಮಾನಿಗಳು! ಫೋಟೋ ವೈರಲ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts