More

    ಮೈಸೂರಿನಲ್ಲಿ ನಾಲ್ಕು ಕೋತಿಗಳ ಶಂಕಾಸ್ಪದ ಸಾವು, ಮಂಗನ ಕಾಯಿಲೆ ವದಂತಿ ಹಿನ್ನೆಲೆ ಮಂಗಗಳ ದೇಹದ ಪರೀಕ್ಷೆ

    ಮೈಸೂರು: ತಾಲೂಕಿನ ಉತ್ತನಹಳ್ಳಿ ಬಳಿಯ ಹಡಜನ ಗ್ರಾಮದಲ್ಲಿ ನಾಲ್ಕು ಕೋತಿಗಳು ಅನುಮಾನಾಸ್ಪದವಾಗಿ ಸೋಮವಾರ ಮೃತಪಟ್ಟಿವೆ. ವಕೀಲ ವೇಣುಗೋಪಾಲ್​ ಎಂಬುವರ ತೋಟದಲ್ಲಿ ಬೆಳಗ್ಗೆ ಎರಡು ಕೋತಿಗಳು ಅಸುನೀಗಿವೆ. ಸಹಜ ಸಾವು ಎಂದುಕೊಂಡು ಸುಡುವ ಮೂಲಕ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು. ಆದರೆ ಮಧ್ಯಾಹ್ನದ ಹೊತ್ತಿಗೆ ಮತ್ತೆ ಎರಡು ಮಂಗಗಳು ನಿತ್ರಾಣಗೊಂಡಿದ್ದು ಕಂಡುಬಂದಿತು. ಅನುಮಾನಗೊಂಡ ವೇಣುಗೋಪಾಲ್​, ಅರಣ್ಯ ಇಲಾಖೆ ಹಾಗೂ ಪಶುಸಂಗೋಪನಾ ಇಲಾಖೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪಶುವೈದ್ಯರು ಕೋತಿಗಳಿಗೆ ಚಿಕಿತ್ಸೆ ನೀಡಲು ಪ್ರಯತ್ನಿಸಿದ್ದರು. ಆದರೆ, ಅದು ಫಲ ನೀಡಲಿಲ್ಲ.

    ಹಠಾತ್ತನೆ 4 ಮಂಗಗಳು ಮೃತಪಟ್ಟಿರುವುದರಿಂದ ಮಂಗನ ಕಾಯಿಲೆ(ಕೆಎಫ್​ಡಿ) ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಮಹಜರ್​ ಮಾಡಿ ಎರಡು ಕೋತಿಗಳ ಕಳೇಬರವನ್ನು ಮರಣೋತ್ತರ ಪರೀಕ್ಷೆ ಮಾಡಿದ್ದು, ಹೆಚ್ಚಿನ ಪರೀಕ್ಷೆಗಾಗಿ ಅಂಗಾಂಗದ ಕೆಲ ಮಾದರಿಯನ್ನು ಶಿವಮೊಗ್ಗಕ್ಕೆ ಕಳುಹಿಸಲಾಗಿದೆ.

    ಮಂಗನ ಕಾಯಿಲೆಯಿಂದ ಸಾವು ಸಂಭವಿಸಿದ್ದರೆ ಕೋತಿಗಳ ಮೂಗಿನಲ್ಲಿ ರಕ್ತ ಬರುತ್ತಿತ್ತು. ಅಲ್ಲದೆ ಕುಳಿತಲ್ಲೇ ಸಾಯುತ್ತಿದ್ದವು. ಆದರೆ, ಇಂಥ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಆದರೂ ಹೆಚ್ಚಿನ ಪರಿಶೀಲನೆಗಾಗಿ ಕೆಲ ಮಾದರಿಗಳನ್ನು ಶಿವಮೊಗ್ಗಕ್ಕೆ ಕಳುಹಿಸಲಾಗಿದೆ. ಜತೆಗೆ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ’ ಎಂದು ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ. ಎಸ್​.ಸಿ. ಸುರೇಶ್​ ತಿಳಿಸಿದರು.

    ತೋಟದಲ್ಲಿ ಕ್ರಿಮಿನಾಶಕ ಸಿಂಪಡಿಸಿರುವ ಹಣ್ಣು ಮತ್ತು ತರಕಾರಿ ಸೇವಿಸಿಯೂ ಕೋತಿಗಳ ಸತ್ತಿರುವ ಸಾಧ್ಯತೆ ಇದೆ. ಆ ಗುಂಪಿನಲ್ಲಿದ್ದ ದೊಡ್ಡ ಕೋತಿಗೆ ಏನು ಆಗಿಲ್ಲ. ಆದರೆ, ಮರಿ ಕೋತಿಗಳು ಮಾತ್ರ ಮೃತಪಟ್ಟಿವೆ. ಇದರಿಂದ ಮೇಲ್ನೋಟಕ್ಕೆ ಕ್ರಿಮಿನಾಶಕ ಸಿಂಪಡಣೆಯಾಗಿರುವ ಹಣ್ಣು ಮತ್ತು ತರಕಾರಿ ತಿಂದಿರುವ ಸಾಧ್ಯತೆಯನ್ನೂ ಅಲ್ಲಗಳೆಯಲಾಗದು ಎಂದು ಹೇಳಿದರು.

    ತರಕಾರಿ ತರುವ ನೆಪದಲ್ಲಿ ಗೋವಾದಿಂದ ತರಬಾರದ ವಸ್ತು ತಂದು ಸಿಕ್ಕಿಬಿದ್ದರು… ಏನದು ಆ ವಸ್ತು…?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts