More

    ಕರೊನಾ ನಿರ್ವಹಣೆಗೆ ಹಣದ ಕೊರತೆಯಿಲ್ಲ

    ಸಾಗರ: ಕರೊನಾ ಈಗ ನಿಯಂತ್ರಣದಲ್ಲಿದೆ. ಆದರೆ ಚಳಿಗಾಲ ಇರುವುದರಿಂದ ಯಾವುದೇ ಸಂದರ್ಭ ಉಲ್ಬಣವಾಗಬಹುದು. ಜತೆಗೆ ಬೇಸಿಗೆ ಸಮೀಪಿಸá-ತ್ತಿರá-ವುದರಿಂದ ಮಂಗನ ಕಾಯಿಲೆ ವ್ಯಾಪಿಸದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಶಾಸಕ ಹರತಾಳು ಹಾಲಪ್ಪ ಸೂಚಿಸಿದರು.

    ಕರೊನಾ ಮತ್ತು ಕೆಎಫ್​ಡಿ ಕುರಿತು ಮಂಗಳವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿ ಹಣಕಾಸಿನ ಕೊರತೆಯಿಲ್ಲ. ಈಗಾಗಲೆ 50 ಲಕ್ಷ ರೂ. ಸರ್ಕಾರದಿಂದ ಬಿಡುಗಡೆಯಾಗಿದೆ. ಇದರಲ್ಲಿ 13 ಲಕ್ಷ ರೂ. ವೆಚ್ಚ ಮಾಡಿದ್ದು, ಉಳಿದ ಹಣವನ್ನೂ ಕರೊಾ ನಿರ್ವಹಣೆಗೆ ಬಳಸಿಕೊಳ್ಳಲು ಸೂಚಿಸಲಾಗಿದೆ ಎಂದರು.

    ಚಳಿಗಾಲದಲ್ಲಿ ಕರೊನಾ ಹರಡುವ ಕುರಿತು ನಗರ ವ್ಯಾಪ್ತಿಯಲ್ಲಿ ನಗರಸಭೆ, ಗ್ರಾಪಂ ವ್ಯಾಪ್ತಿಯಲ್ಲಿ ತಾಲೂಕು ಆಡಳಿತದಿಂದ ಧ್ವನಿವರ್ಧಕದ ಮೂಲಕ ಜಾಗೃತಿ ಮೂಡಿಸಲಾಗುತ್ತದೆ. ಕರಪತ್ರ ವಿತರಣೆಯೂ ಕೂಡಲೇ ನಡೆಯಬೇಕು ಎಂದು ತಿಳಿಸಿದರು.

    ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಉಪಾಧ್ಯಕ್ಷ ವಿ.ಮಹೇಶ್, ಎಸಿ ಡಾ. ನಾಗರಾಜ್, ತಹಸೀಲ್ದಾರ್ ಚಂದ್ರಶೇಖರ ನಾಯ್್ಕ ಪೌರಾಯುಕ್ತ ಎಚ್.ಕೆ.ನಾಗಪ್ಪ, ತಾಲೂಕು ಆರೋಗ್ಯಾಧಿಕಾರಿ ಡಾ. ಕೆ.ಎಸ್.ಮೋಹನ್, ಡಿವೈಎಸ್ಪಿ ವಿನಾಯಕ್ ಶೆಟ್ಟಿಗೇರ್, ತಾಪಂ ಇಒ ಪುಷ್ಪಾ ಎಂ. ಕಮ್ಮಾರ್, ಬಿಇಒ ಕೆ.ಆರ್.ಬಿಂಬಾ, ಡಾ. ಕೆ.ಆರ್.ಪ್ರಕಾಶ್ ಬೋಸ್ಲೆ, ಅರಣ್ಯ ಇಲಾಖೆಯ ಪ್ರಮೋದ್, ಪಿಡಬ್ಲ್ಯುಡಿ ಇಲಾಖೆಯ ದಿನೇಶ್, ಜಿಪಂ ಇಂಜಿನಿಯರಿಂಗ್ ವಿಭಾಗದ ಹಾಲೇಶಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts