More

    ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರ ಸರ್ವಾಧಿಕಾರ ಧೋರಣೆ ಖಂಡಿಸಿ ಕೇಶಮುಂಡನ

    ಶಿವಮೊಗ್ಗ: ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರ ಸರ್ವಾಧಿಕಾರ ಧೋರಣೆ ಖಂಡಿಸಿ ವಿಪ್ರ ಸಮಾಜದ ಮುಖಂಡ ಮ.ಸ.ನಂಜುಂಡಸ್ವಾಮಿ ಅವರು ಶುಕ್ರವಾರ ಬಿ.ಎಚ್.ರಸ್ತೆಯ ಮಾತಾ ಮಾಂಗಲ್ಯದ ಎದುರು ಕೇಶಮುಂಡನ ಮಾಡಿಸಿಕೊಂಡು ಪ್ರತಿಭಟನೆ ನಡೆಸಿದರು.
    ಹಾಲಿ ಜಿಲ್ಲಾಧ್ಯಕ್ಷ ಕೆ.ಸಿ.ನಟರಾಜ್ ಭಾಗವತ್ ಸರ್ವಾಧಿಕಾರಿ ಧೋರಣೆಯಿಂದ ವರ್ತಿಸುತ್ತಿದ್ದಾರೆ. ತಕ್ಷಣವೇ ತಮ್ಮ ವರ್ತನೆ ಬದಲಿಸಿಕೊಳ್ಳಬೇಕು ಎಂದು ಸಮಾಜದ ಮುಖಂಡರೊಂದಿಗೆ ಧರಣಿ ನಡೆಸಿದ ಅವರು, ಅವ್ಯವಸ್ಥೆ ಸರಿಪಡಿಸಿಕೊಳ್ಳುವಂತೆ ತಿಳಿಸಿದ್ದಕ್ಕಾಗಿ ಪ್ರಾಥಮಿಕ ಸದಸ್ಯತ್ವದಿಂದಲೇ ತನ್ನನ್ನು ವಜಾಗೊಳಿಸುವ ಮಟ್ಟಕ್ಕೆ ಅಧ್ಯಕ್ಷರು ಇಳಿದಿದ್ದಾರೆ. ಅವರ ವರ್ತನೆಯ ಬಗ್ಗೆ ನನ್ನ ಪ್ರತಿಭಟನೆಯಾಗಿದ್ದು, ನನಗೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ ಎಂದು ಕಿಡಿಕಾರಿದರು.
    ಬ್ರಾಹ್ಮಣ ಮಹಾಸಭಾವು ಶತಮಾನಗಳಿಂದ ಹಿಂದಿನ ಹಿರಿಯರ ಶ್ರಮ, ಹೋರಾಟ ಹಾಗೂ ತ್ಯಾಗಗಳ ಪ್ರತೀಕವಾಗಿ ಬೆಳೆದುಬಂದ ಸಂಸ್ಥೆಯಾಗಿದ್ದು, ಪ್ರಸ್ತುತ ಅಧ್ಯಕ್ಷರು ಭಾಷಣಕ್ಕಷ್ಟೇ ಸೀಮಿತವಾಗಿದ್ದು, ಸಮಾಜದ ಏಳಿಗೆಗಾಗಿ ಹೊಸ ಯೋಜನೆಗಳಾಗಲಿ, ಯೋಚನೆಗಳಾಗಲಿ ರೂಪಿಸುವಲ್ಲಿ ವಿಲರಾಗಿದ್ದಾರೆ ಎಂದರು.
    ವಿದ್ಯಾರ್ಥಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆ ಬಗ್ಗೆ ಹಾಗೂ ಹಾಸ್ಟೇಲ್ ಮತ್ತು ಊಟೋಪಚಾರಗಳ ಅವ್ಯವಸ್ಥೆಗಳ ಬಗ್ಗೆ ದೂರಿದಾಗ ವೀಡಿಯೋ ಸಮೇತ ಅವರ ಗಮನಕ್ಕೆ ತರಲಾಗಿತ್ತು. ಆದರೆ ಕ್ರಮ ಕೈಗೊಳ್ಳುವ ಬದಲು ವಿದ್ಯಾರ್ಥಿಯನ್ನು ಕರೆಸಿ ಹೆದರಿಸಿದ್ದಾರೆ ಎಂದು ಆರೋಪಿಸಿದರು.
    ಈ ವಿಷಯಕ್ಕೆ ಸಂಬಂಧಿಸಿದಂತೆ ನನ್ನ ಮೇಲೆ ಪೂರ್ವಾಗ್ರಹ ಪೀಡಿತರಾಗಿ ನನ್ನ ಸದಸ್ಯತ್ವವನ್ನೇ ವಜಾ ಮಾಡಿದ್ದಾರೆ. ತಮ್ಮ ಸರ್ವಾಧಿಕಾರಿ ಧೋರಣೆಯನ್ನು ತಿದ್ದುಕೊಂಡು ಸದಸ್ಯತ್ವ ನೀಡದೆ ಇದ್ದಲ್ಲಿ ಮುಂದೆ ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಅಹೋರಾತ್ರಿ ಕೈಗೊಳ್ಳುವ ಎಚ್ಚರಿಕೆ ನೀಡಿದರು. ಎಚ್.ಎನ್.ಛಾಯಾಪತಿ, ಶ್ರೀಕಾಂತ್, ಭದ್ರಿನಾಥ್, ಜ್ಯೋತಿ ನಂಜುಂಡಸ್ವಾಮಿ, ಮಾನಸ, ಕಾರ್ತಿಕ್, ಪ್ರಕಾಶ್‌ಭಟ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts