More

    ಕೇರಳದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಇಲ್ಲ: ಮುಖ್ಯಮಂತ್ರಿ ಪಿಣರಾಯಿ ಹೇಳಿಕೆ

    ಕಾಸರಗೋಡು: ಕೇರಳದಲ್ಲಿ ಯಾವ ಕಾರಣಕ್ಕೂ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಇಲ್ಲ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಜಿಲ್ಲೆಯ ಉಪ್ಪಳದಲ್ಲಿ ಶನಿವಾರ ಎಲ್‌ಡಿಎಫ್ ಹಮ್ಮಿಕೊಂಡ ಉತ್ತರ ಮಲಬಾರ್ ಪ್ರಾದೇಶಿಕ ಪ್ರಚಾರ ಅಭಿಯಾನದ ಜಾಥಾ ಉದ್ಘಾಟಿಸಿ ಮಾತನಾಡಿದರು.

    ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಬರಲಿದೆ ಎಂಬ ಗೃಹ ಸಚಿವರ ಮಾತನ್ನು ಕೇರಳದಲ್ಲಿ ಬೆಂಬಲಿಸಲು ಸಾಧ್ಯವಿಲ್ಲ. ದೇಶದ ಅಭಿವೃದ್ಧಿಯ ಬಗ್ಗೆ ಚರ್ಚಿಸಬೇಕು. ಕೋಮು ಭಾವನೆ ಕೆರಳಿಸುವ ವಿಷಯದ ಬಗ್ಗೆ ಚರ್ಚಿಸಿದರೆ ಕೋಮುವಾದ ಬೆಳೆಯುತ್ತದೆ.

    ಅದನ್ನು ತೊಡೆದುಹಾಕಬೇಕು. ಆರ್‌ಎಸ್‌ಎಸ್ ದೇಶದ ಪ್ರಬಲ ಕೋಮುವಾದಿ ಶಕ್ತಿ. ಜಮಾತೆ-ಇ-ಇಸ್ಲಾಮಿ ಮತ್ತು ಎಸ್‌ಡಿಪಿಐ ಸಂಘಟನೆಗಳು ಆರ್‌ಎಸ್‌ಎಸ್‌ನಂತೆಯೇ ಜನರನ್ನು ಕೋಮುವಾದದ ನೆಲೆಯಲ್ಲಿ ಪ್ರತ್ಯೇಕಿಸಲು ಪ್ರಯತ್ನಿಸುತ್ತಿವೆ. ಈ ಶಕ್ತಿಗಳನ್ನು ಎಡರಂಗ ವಿರೋಧಿಸುತ್ತದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts